24.1 C
ಪುತ್ತೂರು, ಬೆಳ್ತಂಗಡಿ
September 6, 2026
ತಾಲೂಕು ಸುದ್ದಿವರದಿ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಯೋಜಕತ್ವದಲ್ಲಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೆ. 10 ರಂದು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ನಡೆಯಿತು.

ಪಂದ್ಯಾಟದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕ ವಂ|ಡಾ| ಸ್ಟ್ಯಾನಿ ಗೋವಿಯಸ್ ವಹಿಸಿ ಮಾತನಾಡಿ ಸೋಲು ಗೆಲುವು ಎಂಬುದು ಕ್ರೀಡೆಯಲ್ಲಿ ಸಾಮಾನ್ಯ ಅದನ್ನು ನಾವು ಸಮಾನತೆಯಿಂದ ಸ್ವೀಕರಿಸಬೇಕು ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ರವರು ಆಗಮಿಸಿ, ನಮಗೆ ಸಿಗುವಂತ ಅವಕಾಶವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ತಾರಾ ಕೇಸರಿ ಆಗಮಿಸಿ, ಸತತ ಪ್ರಯತ್ನದ ಮೂಲಕ ಜೀವನದಲ್ಲಿ ಯಶಸ್ಸು ಖಂಡಿತ ಎಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಮಡಂತ್ಯಾರು ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ರೂಪಾ ನವೀನ್ ಆಗಮಿಸಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅಗತ್ಯ ಎಂಬುದನ್ನು ತಿಳಿಸಿದರು.

ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್ ರವರು, ಶ್ರೀಮತಿ ಸುಜಯ ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ಬೆಳ್ತಂಗಡಿ, ಶ್ರೀಮತಿ ಚೇತನಾಕ್ಷಿ ಶಿಕ್ಷಣ ಸಂಯೋಜಕಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ, ಶ್ರೀಮತಿ ಚೇತನ ಪುಂಜಾಲಕಟ್ಟೆ ವಲಯ ಸಂಪನ್ಮೂಲ ವ್ಯಕ್ತಿ, ವಂ|ಸ್ವಾ|ದೀಪಕ್ ಲಿಯೋ ಡೇಸ ಮುಖ್ಯೋಪಾಧ್ಯಾಯರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು, ಶ್ರೀ ರವೀಂದ್ರ ರೈ ಉಪಾಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಮಡಂತ್ಯಾರು, ಜಯರಾಜ್ ಜೈನ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ, ಪಿ ಸುಭಾಷ್ ಪೂಜಾರಿ ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್ I, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಮುಖ್ಯಸ್ಥರುಗಳು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸಹ ಶಿಕ್ಷಕಿಯಾದ ರಮ್ಯಾ ನಿರೂಪಿಸಿ, ಶಾಲಾ ದೈಹಿಕ ಶಿಕ್ಷಕವಲೇರಿಯನ್ ಡಿಸೋಜ ಸ್ವಾಗತಿಸಿ, ಸಹ ಶಿಕ್ಷಕಿ ಸೌಮ್ಯ ಎಂ ಧನ್ಯವಾದಗಳು ಸಮರ್ಪಿಸಿದರು.

Related posts

ಮಂಜೂಷಾ ವಸ್ತು ಸಂಗ್ರಹಾಲಯವನ್ನು ವಿಶ್ವದಲ್ಲೇ ಅತಿದೊಡ್ಡ ಏಕ ವ್ಯಕ್ತಿ ಸಂಗ್ರಹಾಲಯ ಎಂದು ಗುರುತಿಸಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

Suddi Udaya

ರೆಖ್ಯಾ: ಮಕ್ಕಳ ಕುಣಿತ ಭಜನಾ ಸಮಾರೋಪದ ಉದ್ಘಾಟನಾ ಸಮಾರಂಭ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ, ಮಹಾರಥೋತ್ಸವ

Suddi Udaya

ಹಿಂದೂ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರಿಂದ “ದಿವ್ಯ ಜ್ಯೋತಿ” ಬಿರುದು ಪುರಸ್ಕೃತೆ ಕು.ಅದ್ವಿತಿ ರಾವ್ ರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ದಿವ್ಯಜ್ಯೋತಿ ನವೋದಯ ಸಂಘದಿಂದ ಸುನಂದರಿಗೆ ಚೈತನ್ಯ ವಿಮೆ ವಿತರಣೆ

Suddi Udaya

ಭಾರೀ ಗಾಳಿ ಮಳೆ: ತಾಲೂಕಿನದ್ಯಾಂತ ಹಲವು ಮನೆಗಳಿಗೆ ಮರ ಬಿದ್ದು ಹಾನಿ

Suddi Udaya
error: Content is protected !!