July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಾಮಾನ್ಯ ಸಭೆ

ಕಣಿಯೂರು: ಪಿಲಿಗೂಡು ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷೆ ಚೈತ್ರಾ ಯಂ.ಜಿ. ಅಧ್ಯಕ್ಷತೆಯಲ್ಲಿ ಸೆ‌.12 ರಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಚೈತ್ರಾ ಯಂ.ಜಿ.ಮಾತನಾಡಿ ಪಾರದರ್ಶಕತೆಯಿಂದ ಆಡಳಿತ ನಡೆಸಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ 2 ಸಾವಿರದ ಗಡಿ ದಾಟಿರುವ ಸಂಘವು 3 ಸಾವಿರ ಲೀಟರ್ ಹಾಲು ಸಂಗ್ರಹಣೆಗೆ ಅಣಿಯಾಗಲಿದೆ. ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರವಿರಲಿ, ಸಂಘವು ವಾರ್ಷಿಕವಾಗಿ 24 ಲಕ್ಷ ರೂ. ವ್ಯವಹಾರ ನಡೆಸಿ, 8ಲಕ್ಷದ 19 ಸಾವಿರ ರೂಪಾಯಿ ಲಾಭ ಗಳಿಸಿದ್ದು, ಸದಸ್ಯರಿಗೆ 63 ಪೈಸೆ ಬೋನಸ್ ನೀಡುವುದಾಗಿ ತಿಳಿಸಿದರು.

ಸ್ಥಾಪಕಾಧ್ಯಕ್ಷೆ ರಾಜಶ್ರೀ ಹೆಗ್ಡೆ ಮಾತನಾಡಿ 27 ವರ್ಷದ ಹಿಂದೆ 6 ಲೀಟರ್ ಹಾಲಿನಿಂದ ಆರಂಭಗೊಂಡ ಸಂಘವು ಇಂದು 2.5 ಸಾವಿರ ಲೀಟರ್ ಹಾಲು ಸಂಗ್ರಹಣೆಗೆ ಆಗುತ್ತಿದ್ದು ಅಭಿವೃದ್ಧಿ ಹೊಂದಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ಅಧಿಕ ಲಾಭಾಂಶವನ್ನು ಪಡೆದಿರುವುದು ಗಮನಾರ್ಹ ಎಂದರು.

ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿಕಟಪೂರ್ವ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಾಜೆ ಅವರನ್ನು ಸನ್ಮಾನಿಸಲಾಯಿತು ಬಳಿಕ ಮಾತನಾಡಿದ ಅವರು ರಾಜಶ್ರೀ ಹೆಗ್ಡೆ ನೇತ್ರತ್ವದಲ್ಲಿ ಸಂಘ ಸ್ಥಾಪನೆಗೊಂಡು ಇಂದು ಅಭಿವೃದ್ಧಿ ಹಾದಿಯಲ್ಲಿ ಮುಂದುವರಿದೆ. 500 ಲೀಟರ್ ಕ್ಕಿಂತ ಹೆಚ್ಚಿನ ಹಾಲು ಉತ್ಪಾದಕರು ಈ ಸಂಘದಲ್ಲಿರುವುದು ವಿಶೇಷ. ಇಂದು ತಾಲೂಕಿನಲ್ಲಿ 86 ಹಾಲು ಉತ್ಪಾದಕರ ಸಹಕಾರ ಸಂಘವಿದ್ದು 1 ಲಕ್ಷ ಲೀಟರ್ ಕ್ಕಿಂತ ಅಧಿಕ ಹಾಲು ಸಂಗ್ರಹಣೆ‌ ಬೆಳ್ತಂಗಡಿಯಲ್ಲಿ ಆಗುತ್ತಿರುವುದು ಗಮನಾರ್ಹ ಎಂದು ಹೇಳಿದರು.

ವಿಸ್ತಾರಣಾಧಿಕಾರಿ ರಾಜೇಶ್ ಪಿ. ಕಾಮತ್ ಮಾತನಾಡಿ ವಾರ್ಷಿಕ ಸಭೆಯಿಂದ ಅಭಿವೃದ್ಧಿಯ ಕುರಿತು ಸಲಹೆ ಸೂಚನೆಗಳನ್ನು ಅನುಸರಿಸುವ ದಿನ. ನಂದಿನಿ ಉತ್ಪನ್ನ ದೇಶದ ನಾಲ್ಕನೇ ಅತೀ ದೊಡ್ಡ ಬ್ರ್ಯಾಂಡ್ ಆಗಿದೆ. ಸಂಘವು ಲೆಕ್ಕ ಪರಿಶೋಧನೆಯಲ್ಲಿ ಸತತ ಎರಡು ವರ್ಷಗಳಿಂದ ಎ‌ ಗ್ರೇಡ್ ಪಡೆದಿರುವುದು ಅಭಿನಂದನೀಯ. 2 ಸಾವಿರ ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿರುವ ಸಂಘ 3‌ ಸಾವಿರ ಲೀಟರ್ ಹಾಕಲು ದಾಪುಗಾಲು ಹಾಕುತ್ತಿದೆ. ಇದರೊಂದಿಗೆ ಜಿಲ್ಲೆಯಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆಯಲು ಅಹ೯ವಾಗುತ್ತದೆ. ಸದಸ್ಯರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಇನ್ನೂ ಅಧಿಕ ಹಾಲು ಉತ್ಪಾದನೆಯಾತ್ತ ಗಮನಹರಿಸಬೇಕು. ಹಾಲು ಸಂಗ್ರಹಣೆಗೆ, ಆಹಾರ ಸರಬರಾಜುಗೆ ಸಂಚಾರಿ ವಾಹನ ವ್ಯವಸ್ಥೆಯ ಕುರಿತು ಹಾಗೂ ತಮಿಳುನಾಡಿನ ಈರೋಡ್ ದನ ಖರೀದಿಯ ಮಾಹಿತಿ ನೀಡಿದರು.

ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ಸತೀಶ್ ರಾವ್ ಮಾತನಾಡಿ ತಾಲೂಕಿನ ಮೂರನೇ ಅಧಿಕ ಹಾಲು ಸಂಗ್ರಹಣೆ ಮಾಡುತ್ತಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಅಧಿಕ ಹಾಲು ಉತ್ಪಾದಿಸಿ ಸದಸ್ಯರನ್ನು ಸನ್ಮಾನಿಸಲಾಯಿತು. ಅನಾರೋಗ್ಯ ನಿಮಿತ್ತ ಸಂಘಕ್ಕೆ ಹಾಲು ಹಾಕುತ್ತಿದ್ದ ರೈತರಿಗೆ ಆರ್ಥಿಕ ನೆರವು ವಿತರಿಸಲಾಯಿತು.

ನಿಕಟಪೂರ್ವ ಅಧ್ಯಕ್ಷೆ ಭವಾನಿ ಮತ್ತು ಕುಸುಮ, ಉಪಾಧ್ಯಕ್ಷೆ ಪ್ರೇಮಾ ಸಿ, ಆಡಳಿತ ಮಂಡಳಿ ಸದಸ್ಯರಾದ ಗಿರಿಜಾ, ರಾಜೀವಿ, ಪ್ರೇಮಾ, , ಮಮತಾ, ಕುಸುಮಾವತಿ, ಹೇಮಲತಾ, ಇಂದಿರಾ, ನಳಿನಾಕ್ಷಿ ಡಿ., ಅಪ್ಪಿ ಹಾಗೂ ಸುನಂದಾ ಹಾಗೂ ಹೈನುಗಾರಿಕಾ ರೈತರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಕೆ ವರದಿ ವಾಚಿಸಿ ಸ್ವಾಗತಿಸಿದರು.
ಸದಸ್ಯೆ ವೈಶಾಲಿ ವಂದಿಸಿದರು. ಸಿಬ್ಬಂದಿಗಳಾದ ದೇವಕಿ, ಆನಂದ ಮತ್ತು ಹರ್ಷಿತ ಎಲ್ ಆರ್ ಸಹಕರಿಸಿದರು.

Related posts

ಕುಕ್ಕೇಡಿ: ಶ್ರೀ ಶಾರಾದಾಂಬ ಮಹಿಳಾ ಭಜನಾ ಸಮಿತಿಯ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಗುರುವಾಯನಕೆರೆ: ಜ್ಞಾನ ವಿಕಾಸ ಕೇಂದ್ರಗಳ ಸೇವಾ ಪ್ರತಿನಿಧಿಗಳ ಸಭೆ

Suddi Udaya

ಸಾಮಾಜಿಕ ಜಾಲತಾಣಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲಾತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಕಲಾ ಪ್ರತಿಭೆಗಳು ಸಂಸ್ಥೆಯ 5ನೇ ವರ್ಷದ ಸಂಭ್ರಮ: ಆಮಂತ್ರಣ ವಿಜಯ ಕುಮಾರ್ ಜೈನ್ ಅಳದಂಗಡಿ ರವರಿಗೆ ಸನ್ಮಾನ

Suddi Udaya

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ನ ಸುವರ್ಣ ಸೇವಾ ಸಂಭ್ರಮ

Suddi Udaya

ಅಳದಂಗಡಿ: ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ಹಸ್ತಾಂತರ

Suddi Udaya
error: Content is protected !!