26 C
ಪುತ್ತೂರು, ಬೆಳ್ತಂಗಡಿ
October 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಗ್ರಾಮ ಸಮೃದ್ಧಿ ಸ್ಥಿತಿ ಸ್ಥಾಪಕತ್ವ ಯೋಜನೆ ತರಬೇತಿ

ಬೆಳ್ತಂಗಡಿ: ಸಂಜೀವಿನಿ – ಎನ್.ಆರ್.ಎಲ್.ಎಮ್ ತಾಲೂಕು ಅಭಿಯಾನ ನಿರ್ವಹಣಾ ಘಟಕ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್.ಸಿ.ಆರ್.ಪಿ), ಕೃಷಿಸಖಿ ಮತ್ತು ಪಶುಸಖಿಯವರಿಗೆ 2025-26ನೇ ಸಾಲಿನ ಗ್ರಾಮ ಸಮೃದ್ಧಿ ಸ್ಥಿತಿ ಸ್ಥಾಪಕತ್ವ ಯೋಜನೆ (ವಿ.ಪಿ.ಆರ್.ಪಿ)ಯ ಮೊದಲ ಹಂತದ ಒಂದು ದಿನದ ತರಬೇತಿ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೆ. 08 ರಿಂದ 11 ರವರೆಗೆ ನಡೆಯಿತು.

ದ.ಕ. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೋ.ಇ ಜಯರಾಮ್ ಉಪಸ್ಥಿತರಿದ್ದು ಗ್ರಾಮ ಸಮೃದ್ಧಿ ಸ್ಥಿತಿ ಸ್ಥಾಪಕತ್ವ ಯೋಜನೆ (ವಿ.ಪಿ.ಆರ್.ಪಿ) ದತ್ತಾಂಶ ದಾಖಲೀಕರಣದ ಕುರಿತು ಮಾರ್ಗದರ್ಶನ ಮಾಡಿದರು.

ಬೆಳ್ತಂಗಡಿ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಪ್ರತಿಮಾ ಇವರು ವಿ.ಪಿ.ಆರ್.ಪಿ ಯೋಜನೆ ಅನುಷ್ಠಾನ ಕುರಿತಂತೆ ಹಾಗೂ ಬಿ.ಆರ್.ಪಿ (ಪಿ.ಆರ್.ಐ) ಶ್ರೀಮತಿ ಶ್ರೀಕಲಾ ವಿ.ಪಿ.ಆರ್.ಪಿ ಕಾನ್ಸೆಪ್ಟ್ ಸೀಡಿಂಗ್ ಮಾಹಿತಿ ನೀಡಿದರು. ಟಿ.ಎಮ್.ಐ.ಎಸ್ ಶ್ರೀ ವಿನೋದ್ ಪ್ರಸಾದ್ ಕಲ್ಲಾಜೆ ಗ್ರಾಮ ಸಮೃದ್ಧಿ ಸ್ಥಿತಿ ಸ್ಥಾಪಕತ್ವ ಯೋಜನೆ (ವಿ.ಪಿ.ಆರ್.ಪಿ) ತಂತ್ರಾಂಶದಲ್ಲಿ ಮಾಹಿತಿ ದಾಖಲೀಕರಣ ಕುರಿತು ತರಬೇತಿ ನೀಡಿದರು.

ಬೆಳ್ತಂಗಡಿ ತಾಲೂಕಿನ 48 ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಂದ 96 ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, 48 ಕೃಷಿಸಖಿ, 48 ಪಶುಸಖಿಯರು ಒಟ್ಟು 192 ಸಿ.ಆರ್.ಪಿ ಗಳು 48 ಜನರ ನಾಲ್ಕು ತಂಡವಾಗಿ ತಲಾ 01 ದಿನದಂತೆ 04 ದಿನಗಳಲ್ಲಿ ತರಬೇತಿಯಲ್ಲಿ ಭಾಗವಹಿಸಿದರು.

ತರಬೇತಿಯ 04 ದಿನಗಳಲ್ಲೂ ಉಜಿರೆಯ ಸಂಜೀವಿನಿ ಅಕ್ಕ ಕೆಫೆಯಿಂದ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಬೆಳ್ತಂಗಡಿ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ಕೃಷಿಯೇತರ ವ್ಯವಸ್ಥಾಪಕರು ನಿತೀಶ್, ತಾಲೂಕು ಕೃಷಿ ವ್ಯವಸ್ಥಾಪಕರು ಬಂಗಾರಪ್ಪ, ವಲಯ ಮೇಲ್ವಿಚಾರರಾದ ಜಯಾನಂದ್, ಸ್ವಸ್ತಿಕ್, ಶ್ರೀಮತಿ ವೀಣಾಶ್ರೀ ಕೆ.ಕೆ, ತರಬೇತಿಯ ಯಶಸ್ಸಿಗೆ ಸಹಕರಿಸಿದರು.

Related posts

ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ 80 ನೇ ಸ್ವಾತಂತ್ರ್ಯೋತ್ಸವ

Suddi Udaya

ಸಹೋದರರಿಬ್ಬರು ಒಂದೇ ದಿನ ನಿಧನ

Suddi Udaya

ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ಕಾರ್ಯಕಾರಣಿ ಸಭೆ

Suddi Udaya

ವೇಣೂರು ಮಸೀದಿಯ ಅಧ್ಯಕ್ಷ ಹಾಜಿ ವಿ. ಅಬೂಬಕ್ಕರ್ ನಿಧನ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಸ್ತಾಂತರ

Suddi Udaya
error: Content is protected !!