September 6, 2026
ವರದಿಶಾಲಾ ಕಾಲೇಜು

ಎಸ್.ಡಿ.ಎಮ್ ಪಾಲಿಟೆಕ್ನಿಕ್ : “ರೋಬೊ ರೇಸ್ -2025”

ಉಜಿರೆ: ಸದಾ ಕೌಶಲ್ಯಭರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಕೇವಲ ಥಿಯರಿ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ಪ್ರಾಯೋಗಿಕ ಜ್ಞಾನವನ್ನೂ ಗಾಢವಾಗಿ ಅರಿತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗವು “ರೋಬೊ ರೇಸ್ -2025” ಎಂಬ ತಾಂತ್ರಿಕ ಸ್ಪರ್ಧೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ರೋಬೋ ರೇಸ್ ಕಾರನ್ನು ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಕಾಲೇಜಿನ 25 ತಂಡಗಳು ಭಾಗವಹಿಸಿದ್ದು, ಕಾಲೇಜಿನ ವಿದ್ಯಾರ್ಥಿಗಳೇ ಸುಮಾರು 100 ಮೀ ಉದ್ದದ ಟ್ರ್ಯಾಕ್ ತಯಾರಿಸಿದ್ದರು. 10 ವಿವಿಧ ಅಡೆತಡೆಗಳನ್ನು ಹೊಂದಿದ್ದ ಟ್ರ್ಯಾಕ್ ನಲ್ಲಿ ಮಣ್ಣು, ಮರಳು, ಕಲ್ಲು, ಏರಿಳಿತ, ನೇತಾಡುವ ಸೇತುವೆ, ಎಣ್ಣೆಯನ್ನು ಬಳಸಿ ಜಾರುವ ರೀತಿಯ ವ್ಯವಸ್ಥೆಯನ್ನು ಮಾಡಿದ್ದು ವಿಶೇಷವಾಗಿತ್ತು.

ಕಾಲೇಜಿನ ಒಟ್ಟು 25 ತಂಡಗಳು ಭಾಗವಹಿಸಿದ್ದು, ಕಾಲೇಜಿನ ವಿದ್ಯಾರ್ಥಿಗಳೇ ಸುಮಾರು 100 ಮೀ ಉದ್ದದ ಟ್ರ್ಯಾಕ್ ತಯಾರಿಸಿದ್ದರು. 10 ವಿವಿಧ ಅಡೆತಡೆಗಳನ್ನು ಹೊಂದಿದ್ದ ಟ್ರ್ಯಾಕ್ ನಲ್ಲಿ ಮಣ್ಣು, ಮರಳು, ಕಲ್ಲು, ಏರಿಳಿತ, ನೇತಾಡುವ ಸೇತುವೆ, ಎಣ್ಣೆಯನ್ನು ಬಳಸಿ ಜಾರುವ ವ್ಯವಸ್ಥೆಯನ್ನು ಮಾಡಿದ್ದು ವಿಶೇಷವಾಗಿತ್ತು. ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮೇರಿ ಸ್ಮಿತಾ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕಲ್ಮಂಜ: ಅಕ್ಷಯ ನಗರದಲ್ಲಿ ಕಾಡಾನೆ ಓಡಾಟ

Suddi Udaya

ಬಡಗಕಾರಂದೂರು ಸ.ಹಿ.ಪ್ರಾ, ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ ಕ್ರೀಡಾ ಬೇಸಿಗೆ ಶಿಬಿರಕ್ಕೆ ಚಾಲನೆ

Suddi Udaya

ಉರುವಾಲು-ಕಾಯರ್ಪಾಡಿ ಸಂಪರ್ಕ ರಸ್ತೆ ಮರು ಡಾಮರೀಕರಣ: ಶಾಸಕರಿಗೆ ಗ್ರಾಮಸ್ಥರ ಕೃತಜ್ಞತೆ

Suddi Udaya

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೇದೆ ಸುಬ್ಬ ಪೂಜಾರಿ, ಮಿತ್ತಮಾರು ಬಿರ್ಮಣ್ಣ ಪೂಜಾರಿ, ಕುಂಜೀರ ಯಾನೆ ಸಿದ್ದಪ್ಪ ಪೂಜಾರಿ,ಸಮಾಜದ ಹಿರಿಯರು,ಮಾಜಿ ಶಾಸಕ ಕೆ.ವಸಂತ ಬಂಗೇರರವರು ಸೇರಿ ಸ್ಥಾಪಿಸಿದ ಸಂಘ ಬ್ರಹ್ಮಶ್ರೀ ನಾರಾಯಣ ಗುರುಗಳ ತಥವ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜಮುಖಿ ಸೇವಾ ಕಾರ್ಯ

Suddi Udaya

ಪದ್ಮುಂಜ ಸರಕಾರಿ ಪ. ಪೂ. ಕಾಲೇಜಿಗೆ ಶೇ. 86.04 ಫಲಿತಾಂಶ

Suddi Udaya
error: Content is protected !!