September 6, 2026
ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ತಾಲೂಕಿನ ಮುಖ್ಯ ಪುಸ್ತಕ ಬರಹಗಾರರಿಗೆ ಪುಸ್ತಕ ನಿರ್ವಹಣೆ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ

ಬೆಳ್ತಂಗಡಿ ಎನ್ ಆರ್ ಎಲ್ ಎಂ ತಾಲೂಕು ಅಭಿಯಾನ ನಿರ್ವಹಣಾ ಘಟಕ ವತಿಯಿಂದ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರ ತರಬೇತಿ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೆಪ್ಟಂಬರ್ 10 ರಿಂದ 12ರವರೆಗೆ ನಡೆಸಲಾಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿಯ ಒಕ್ಕೂಟಗಳ ಕಾರ್ಯನಿರ್ವಹಣೆ ಮತ್ತು ಎಂಬಿಕೆಯವರ ಪಾತ್ರ ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಕಾರ್ಯಕ್ರಮದ ಉದ್ದೇಶದ ಕುರಿತಂತೆ ಪ್ರಾಸ್ತಾವಿವಾಗಿ ಮಾತನಾಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಲಕ್ಷ್ಮಣ್ ಇವರು ತರಬೇತಿಯನ್ನು ನೀಡಿದರು.

ಬೆಳ್ತಂಗಡಿ ತಾಲೂಕಿನ 48 ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳಿಂದ 48 ಜನ ಮತ್ತು ಬಂಟ್ವಾಳ ತಾಲೂಕಿನ 6 ಜನ ಮುಖ್ಯ ಪುಸ್ತಕ ಬರಹಗಾರರು ತರಬೇತಿಯಲ್ಲಿ ಭಾಗವಹಿಸಿದರು.

ತರಬೇತಿಯ ದಿನಗಳಲ್ಲೂ ಉಜಿರೆ ಸಂಜೀವಿನಿ ಒಕ್ಕೂಟದ ಅಕ್ಕ ಕೆಫೆಯಿಂದ ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ತರಬೇತಿ ಕಾರ್ಯಕ್ರಮದಲ್ಲಿ ತಾಲೂಕು ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರುಗಳು, ಬಿಆರ್ ಪಿ -ಪಿಆರ್ ಐ ಉಪಸ್ಥಿತರಿದ್ದು ತರಬೇತಿಯ ಯಶಸ್ಸಿಗೆ ಸಹಕರಿಸಿದರು.

Related posts

ಉಜಿರೆ: ಸ್ನೇಹ ಕಿರಣ್ ಬೇಬಿ ಸಿಟ್ಟಿಂಗ್ ಗೆ ಮರ ಬಿದ್ದು ಹಾನಿ, ಅಪಾಯದಿಂದ ಪಾರಾದ ಮಕ್ಕಳು

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ತಾಲೂಕಿನ ಆಂಬುಲೆನ್ಸ್ ವಾಹನದ ಚಾಲಕರು ಮತ್ತು ಮಾಲಕರಿಗೆ ಸನ್ಮಾನ

Suddi Udaya

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

Suddi Udaya

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಮತ್ತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಸಹ ಬ್ರಾಂಡಿಂಗ್ ನೂತನವಾಗಿ ತಯಾರಿಸಲಾದ ಅಗರಬತ್ತಿಗಳ ಲೋಕಾರ್ಪಣೆ

Suddi Udaya

ಕೆಸರುಮಯವಾದ ನಾಲ್ಕೂರಿನ ಹುಂಬೆಜಲ್ಕೆ ರಸ್ತೆ: ಸರಿಪಡಿಸುವಂತೆ ಸ್ಥಳೀಯರ ಆಗ್ರಹ

Suddi Udaya

ಶಿಲಾ೯ಲು : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Suddi Udaya
error: Content is protected !!