September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಗ್ರಾಮ ಪಂಚಾಯತ್ ಸ್ತ್ರೀಶಕ್ತಿ ಗೊಂಚಲಿನ ಸಭೆ

ಬೆಳಾಲು ಗ್ರಾಮ ಪಂಚಾಯತ್ ಸ್ತ್ರೀಶಕ್ತಿ ಗೊಂಚಲಿನ ಸರ್ವ ಸದಸ್ಯರ ಸಭೆಯನ್ನು ಗೊಂಚಲಿನ ಅಧ್ಯಕ್ಷೆ ಆಶಾ ಭಟ್ ಇವರ ಉಪಸ್ಥಿತಿಯಲ್ಲಿ ನಡೆಯಿತು.

ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಗೊಂಚಲಿನ ಕಾರ್ಯದರ್ಶಿ ಹರಿಣಾಕ್ಷಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾರದಾ, ಗೊಂಚಲಿನ ಕೋಶಾಧಿಕಾರಿ ವಸಂತಿ ಉಪಸ್ಥಿತರಿದ್ದರು.

. ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಇವರು ನಾವೆಲ್ಲ ಸಮವಸ್ತ್ರ ಧರಿಸಿ ಒಟ್ಟಿಗೆ ಇದ್ದಾಗ ನಾವೆಲ್ಲ ಒಂದೇ ಎಂಬ ಭಾವನೆ ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿರಲು ಸಾಧ್ಯ, ನಮಗೆ ತಿಳಿದಿರುವುದನ್ನು ಇನ್ನೊಬ್ಬರಿಗೆ ತಿಳಿಸಿ ಅವರನ್ನು ಮೇಲೆ ತರಬೇಕು ಎಂದು ಹಿತನುಡಿದರು.

ನಂತರ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಕಮಲ, ಉಪಾಧ್ಯಕ್ಷರಾಗಿ ಭಾರತಿ, ಕಾರ್ಯದರ್ಶಿಯಾಗಿ ಲಲಿತ, ಜೊತೆ ಕಾರ್ಯದರ್ಶಿಯಾಗಿ ಸುಮತಿ, ಕೋಶಾಧಿಕಾರಿಯಾಗಿ ಚಿತ್ರ ಇವರನ್ನು ಆಯ್ಕೆ ಮಾಡಿ ನಿರ್ಣಯ ಪುಸ್ತಕ ನೀಡುವುದರ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಲತಾ ಇವರು ಕಪಿಲ ವಿವಿದೋದ್ಧೇಶ ಸಹಕಾರ ಸಂಘ ದಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾರದಾ ಇವರು ಸ್ತ್ರೀಶಕ್ತಿ ಸಂಘದ ಸದಸ್ಯರು ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಯಾವುದೂ ಕೂಡ ಆಗುವುದಿಲ್ಲ ಅಂತ ಹಿಂದೆ ಸರಿಯಬಾರದು. ಎಲ್ಲದರಲ್ಲೂ ಮುಂದೆ ಬರಬೇಕು ಎಂದು ತಿಳಿಸಿದರು. ಆಶಾ ಸ್ವಾಗತಿಸಿದರು. ಲತಾ ಕಾರ್ಯಕ್ರಮವನ್ನು ನಿರೂಪಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು. ಅಂಗನವಾಡಿ ಕಾರ್ಯಕರ್ತೆ ಭಾರತಿ ವಂದಿಸಿದರು.

Related posts

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

Suddi Udaya

ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

Suddi Udaya

ಸುಲ್ಕೇರಿಮೊಗ್ರು ಸ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲದ ರಚನೆ ಹಾಗೂ ಮೇಲುಸ್ತುವಾರಿ ಸಮಿತಿಯ ರಚನೆ

Suddi Udaya

ಅರಸಿನಮಕ್ಕಿ ಬಂಟರ ಸಂಘದ ಕಛೇರಿ ಆವರಣದ ಗೇಟ್ ಉದ್ಘಾಟನೆ

Suddi Udaya

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಕುತ್ಲೂರು ಸರಕಾರಿ ಶಾಲೆಯ ಕೈತೋಟದಲ್ಲಿ ಬೆಳೆದ ತರಕಾರಿ ಹಸ್ತಾಂತರ

Suddi Udaya

ಆ.1: ವಿದ್ಯುತ್ ನಿಲುಗಡೆ

Suddi Udaya
error: Content is protected !!