27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು ಯುವ ಶಕ್ತಿ ಪ್ರೆಂಡ್ಸ್ ಸಂಕೇಶ ವತಿಯಿಂದ ಕೆಸರ್ ದ ಕಂಡೊಂಡು ಒಂಜಿ ದಿನ ಕಾರ್ಯಕ್ರಮ

ಇಂದಬೆಟ್ಟು : ನಮ್ಮ ನೆಲದ ಆಚಾರ ವಿಚಾರ ಸಂಸ್ಕೃತಿಗಳನ್ನು ಉಳಿಸುವುದರಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಉದ್ಯಮಿಗಳು, ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಡಿ ಪುಷ್ಪಗಿರಿ ಇವರು ಅಭಿಪ್ರಾಯ ಪಟ್ಟರು.

ಅವರು ಯುವ ಶಕ್ತಿ ಪ್ರೆಂಡ್ಸ್ ಸಂಕೇಶ ಇಂದಬೆಟ್ಟು ಇದರ ನೇತೃತ್ವದಲ್ಲಿ ಕಜೆ ಶ್ರೀ ದೇವಕಿ ಆಚಾರ್ಯ ಇವರ ಗದ್ದೆಯಲ್ಲಿ ನಡೆದ ಕೆಸರ್ ದ ಕಂಡೊಂಡು ಒಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿವಪ್ರಸಾದ್ ಕೊಡಂಗೆ ಹೊಸಮನೆ ವಹಿಸಿದ್ದರು. ವೇದಿಕೆಯಲ್ಲಿ ಬಂಗಾಡಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ, ಇಂದಬೆಟ್ಟು ಗ್ರಾಂ.ಪಂ.ಮಾಜಿ ಅಧ್ಯಕ್ಷ ಆನಂದ ಹಡಿಲು, ಇಂದಬೆಟ್ಟು ನವಭಾರತ್ ಗೆಳೆಯರ ಬಳಗ ಅಧ್ಯಕ್ಷ ರಮೇಶ್ ನೂಜಿಲೆ , ಗೆಳೆಯರ ಬಳಗ ನೇತ್ರಾವತಿ ನಗರ ಅಧ್ಯಕ್ಷ ಹರೀಶ್, ಶಾಂತಿನಗರ ಕಜೆ ಹಾ.ಉ.ಸ.ಸಂಘದ ಅಧ್ಯಕ್ಷ ಉಮೇಶ್ ಮುದೆಲ್ಕಾಡಿ, ಇಂದಬೆಟ್ಟು ದೇವನಾರಿ ಶ್ರೀ ಅರ್ಧನಾರೀಶ್ವರ ಯಕ್ಷಗಾನ ಬಯಲಾಟ ಸೇವಾ ಸಮಿತಿ ಅಧ್ಯಕ್ಷ ಸಂಜೀವ ಗೌಡ ಮನ್ನಡ್ಕ., ಸರ್ವೊದಯ ಸ್ಪೋರ್ಟ್ಸ್ ಕ್ಲಬ್ ಶಾಂತಿನಗರ ಅಧ್ಯಕ್ಷ ಅವಿನಾಶ್ ಕಟ್ನಡ್ಕ, ಶ್ರೀ ಗಣೇಶ್ ಭಜನಾ ಮಂದಿರ ಕಜೆ ಶಾಂತಿನಗರ ಅಧ್ಯಕ್ಷ ಗಂಗಾಧರ ಎಸ್ ಪರಾರಿ, ಇಂದಬೆಟ್ಟು ಹಾ.ಉ.ಸ.ಸಂಘ ಅಧ್ಯಕ್ಷೆ ಶ್ರೀಮತಿ ರೇಣುಕಾ ವಸಂತ ಗೌಡ ಕಲ್ಲಾಜೆ, ಗುರಿಪಳ್ಳ ಜಯನಗರ ಹಾ.ಉ‌.ಸ.ಸಂಘದ ಅಧ್ಯಕ್ಷೆ ಸೌಮ್ಯಲತಾ ಜಯಂತ ಗೌಡ ಮತ್ತು ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸಂತೋಷ್ ಗೌಡ ಕೊಯಮಜಲುರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೋಗಾಸನ ತಾಲೂಕು ಜಿಲ್ಲೆ ರಾಜ್ಯ ಅಂತರ್ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಮೋಹಿತ್ ಗೌಡ ಕಂಬಳದಡ್ಡು ಕನ್ಯಾಡಿ ಇವರನ್ನು ಸನ್ಮಾನಿಸಲಾಯಿತು. ಸುಂದರ‌.ಎ ಇಂದಬೆಟ್ಟು ಸ್ವಾಗತಿಸಿ, ನಿತಿನ್ ಮನ್ನಡ್ಕ ಧನ್ಯವಾದವಿತ್ತರು. ಸತೀಶ್ ಮನ್ನಡ್ಕ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಅನುಗ್ರಹ ಶಾಲೆಯಲ್ಲಿ “ಸ್ವಭಾವವನ್ನು ಬೆಳೆಸಿ, ಭವಿಷ್ಯವನ್ನು ರೂಪಿಸೋಣ” ವಿಶೇಷ ಕಾರ್ಯಕ್ರಮ

Suddi Udaya

ನೆರಿಯ: ಕುಡುಮಡ್ಕ ಸೌಗಂಧಿಕ ಮನೆಯ ನೀಲಮ್ಮ ನಿಧನ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಸಚಿವ ಮಾಂಕಾಳ್ ಎಸ್. ವೈದ್ಯ ಭೇಟಿ

Suddi Udaya

ಕಾಕ೯ಳದಲ್ಲಿ ಚಾಕುವಿನಿಂದ ಇರಿದು ನವೀನ್ ಪೂಜಾರಿ ಹತ್ಯೆ : ಆರೋಪಿ ನಡ ಗ್ರಾಮದ ಪರೀಕ್ಷಿತ್ ಬಂಧನ

Suddi Udaya

ಡಿ.10: ಕರಾಯದಲ್ಲಿ ವಿದ್ಯುತ್ ನಿಲುಗಡೆ

Suddi Udaya

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬಸ್ಸು ಚಾಲಕರಿಗೆ “ಸ್ಟೇರಿಂಗ್ ಟುವರ್ಡ್ಸ್ ಸೇಫ್ಟಿ” ಕಾರ್ಯಾಗಾರ

Suddi Udaya
error: Content is protected !!