23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಿಜೆಪಿ ಹೊಸಂಗಡಿ ಮತ್ತು ಬಡಕೋಡಿ ಶಕ್ತಿಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ

ಹೊಸಂಗಡಿ :ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲೆ ಮತ್ತು ಬೆಳ್ತಂಗಡಿ ಮಂಡಲದ ವತಿಯಿಂದ ಸೆ.14 ರಂದು ಪೆರಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಬಿಜೆಪಿ ಹೊಸಂಗಡಿ ಮತ್ತು ಬಡಕೋಡಿ ಶಕ್ತಿಕೇಂದ್ರದ ವಿಶೇಷ ಅಭ್ಯಾಸವರ್ಗವು ಯಶಸ್ವಿಯಾಗಿ ನಡೆಯಿತು.

ಬಿಜೆಪಿ ದ.ಕ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶ್ರೀಮತಿ ವಿಜಯಾ ರಮೇಶ್ ಆರಂಬೋಡಿ, ಹೊಸಂಗಡಿ-ಬಡಕೋಡಿ ಶಕ್ತಿ ಕೇಂದ್ರ ಅಭ್ಯಾಸವರ್ಗದ ಪ್ರಭಾರಿ ನಾರಾವಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಹಿರಿಯ ಕಾರ್ಯಕರ್ತರಾದ ಆನಂದ ಕೋಟ್ಯಾನ್, ರಾಮಪ್ಪ ಪೂಜಾರಿ, ಕೃಷ್ಣಪ್ಪ, ದಿನಕರ ಎರ್ಮೋಡಿ ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಅಭ್ಯಾಸವರ್ಗದ ಸಂಘಟನಾ ಅವಧಿಯ ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಪೆರ್ಮುಡ, ಗೋಪಾಲಕೃಷ್ಣ ಹೇರಳೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುಧಾಕರ್ ಬಿ.ಎಲ್ ಲಾಯಿಲ ಭಾಗವಹಿಸಿದ್ದರು.

ಅಭ್ಯಾಸವರ್ಗದ ಸಮಾರೋಪ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶ್ರಮಿಕ ಶಾಸಕ ಹರೀಶ್ ಪೂಂಜರವರು ಭಾಗವಹಿಸಿ ಕಾರ್ಯಕರ್ತ ಬಂಧುಗಳಿಗೆ ರಾಷ್ಟ್ರೀಯತೆ, ಹಿಂದುತ್ವ ಮತ್ತು ಪಕ್ಷ ಸಂಘಟನೆಯ ಬಗ್ಗೆ ವಿಶೇಷ ಮಾರ್ಗದರ್ಶನ ನೀಡಿದರು. ಈ ಸಂದರ್ಭ ವೇದಿಕೆಯಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಹೆಗ್ಡೆ,ಉಪಾಧ್ಯಕ್ಷೆ ಶ್ರೀಮತಿ ಶಾಂತಾ ಕೃಷ್ಣಪ್ಪ,ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ನಾರಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನೇಮಯ್ಯ ಕುಲಾಲ್, ಪ್ರಗತಿಪರ ಕೃಷಿಕರಾದ ಸುಧಾಕರ ಶೆಟ್ಟಿ ಅಂಕರೋಡಿ ಉಪಸ್ಥಿತರಿದ್ದರು.

ಅಭ್ಯಾಸವರ್ಗದಲ್ಲಿ ಹೊಸಂಗಡಿ ಮತ್ತು ಬಡಕೋಡಿ ಶಕ್ತಿಕೇಂದ್ರ ಪ್ರಮುಖರಾದ ಕರುಣಾಕರ ಪೂಜಾರಿ, ರೋಶನ್ ಬಡಕೋಡಿ, ಪೆರಿಂಜೆ ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳು, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರುಗಳು, ಬೂತ್ ಸಮಿತಿಯ ಪದಾಧಿಕಾರಿಗಳು, ಪ್ರಮುಖರು, ಹಿರಿಯರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ದೇವಾಡಿಗ ಬಿಜೆಪಿ ಗೀತೆ ಹಾಡಿದರು. ಕರುಣಾಕರ ಪೂಜಾರಿ ಸ್ವಾಗತಿಸಿದರು. ಸೌಮ್ಯ ಪ್ರಕಾಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Related posts

ನಾರಾವಿ-ಅಳದಂಗಡಿ ಮಹಾಶಕ್ತಿ ಕೇಂದ್ರದ ವತಿಯಿಂದ ಮಾಜಿ ಶಾಸಕರಾದ ವಸಂತ ಬಂಗೇರರ ನಿಧನಕ್ಕೆ ಶ್ರದ್ಧಾಂಜಲಿ

Suddi Udaya

ಶಿಶಿಲ: ಆನೆ ದಾಳಿ ಬಗ್ಗೆ ಗ್ರಾಮಸ್ಥರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಹೆಗ್ಗಡೆಯವರ ಭೇಟಿ ಅಭಿನಂದನೆ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಜನೋಪಯೋಗಿ ಪ್ರಾಜೆಕ್ಟ್‌ಗಳಿಗೆ ಪ್ರಶಸ್ತಿ: ಪ್ರಾಂಶುಪಾಲ ಸಂತೋಷ್ ರವರಿಂದ ಪತ್ರಿಕಾಗೋಷ್ಠಿ

Suddi Udaya

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಐಸಿವೈಎಮ್ ಘಟಕದ ಕ್ರಿಸ್ಮಸ್ ಟ್ಯಾಬ್ಲೊ

Suddi Udaya
error: Content is protected !!