22.6 C
ಪುತ್ತೂರು, ಬೆಳ್ತಂಗಡಿ
July 23, 2026
ಆರೋಗ್ಯ

ಅರಸಿನಮಕ್ಕಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಅರಸಿನಮಕ್ಕಿ (ಸೆ. 14): ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.),ಅರಸಿನಮಕ್ಕಿ ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ಲೇಡಿಗೋಶನ್ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ಹಾಗೂ ಸೇವಾಭಾರತಿ (ರಿ.), ಕನ್ಯಾಡಿ ಇದರ ಆರೋಗ್ಯಂ ಯೋಜನೆಯಡಿ 102ನೇ ಶಿಬಿರ ಸಂಯೋಜನೆ ಸೆಪ್ಟೆಂಬರ್ 14 ರಂದು ಬೃಹತ್ ರಕ್ತದಾನ ಶಿಬಿರವು ಅರಸಿನಮಕ್ಕಿಯ ಹತ್ಯಡ್ಕ ಸಿ. ಎ. ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.

ಶ್ರೀ ಗುಡ್ರಾಮಲೇಶ್ವರ ದೇವಸ್ಥಾನ ಗುಡ್ರಾಧಿ ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ಗೌಡ ಕೈಕುರೆ ಉದ್ಘಾಟಿಸಿ, ಶಿಬಿರಕ್ಕೆ ಶುಭ ಹಾರೈಸಿದರು. ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ.), ಅರಸಿನಮಕ್ಕಿ ಅಧ್ಯಕ್ಷರಾದ ಶ್ರೀ ರಾಘವೇಂದ್ರ ನಾಯಕ್ ಬರ್ಗುಳ ಅಧ್ಯಕ್ಷತೆ ವಹಿಸಿ, ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ ಹಾಗೂ ಈ ಭಾಗದ ಜನರಿಗೆ ತುರ್ತು ರಕ್ತದ ಅಗತ್ಯವಿದ್ದಲ್ಲಿ, ರಕ್ತದ ಅವಶ್ಯಕತೆಯನ್ನು ಪೂರೈಸಲು ಹೆಲ್ಪ್ ಲೈನ್ ನಂಬರ್ ನೀಡುವುದಾಗಿ ತಿಳಿಸಿದರು. ಸೇವಾಧಾಮ ಸಂಸ್ಥಾಪಕ ಹಾಗೂ ಸೇವಾಭಾರತಿ (ರಿ.) ಕನ್ಯಾಡಿಯ ಖಜಾಂಚಿ ಕೆ. ವಿನಾಯಕ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ರೊI ಪ್ರೊ. ಟಿ. ಪ್ರಕಾಶ್ ಪ್ರಭು, ಅರಸಿನಮಕ್ಕಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ. ಎಸ್, ಎಲ್ ಐ ಸಿ ಆಫ್ ಇಂಡಿಯಾ ಡೆವಲಪ್ಮೆಂಟ್ ಆಫೀಸರ್ ಶ್ರೀ ಉದಯ ಶಂಕರ್, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.), ಅರಸಿನಮಕ್ಕಿ ಉಪಾಧ್ಯಕ್ಷರಾದ ಶ್ರೀ ರಾಜು ಕೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ರಕ್ತ ನಿಧಿ ವಿಭಾಗದ ಜಿಲ್ಲಾ ಸಂಯೋಜಕರಾದ ಪ್ರವೀಣ್ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದ ಯಶಸ್ಸಿಗೆ ರೋಟರಿ ಕ್ಲಬ್ ಬೆಳ್ತಂಗಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ-ಅರಸಿನಮಕ್ಕಿ, ನವಶಕ್ತಿ ರಿಕ್ಷಾ ಚಾಲಕ ಮಾಲಕರ ಸಂಘ ಅರಸಿನಮಕ್ಕಿ, ಚೈತನ್ಯ ಮಿತ್ರ ಕಲಾವೃಂದ ಅರಸಿನಮಕ್ಕಿ, ಹಾಲು ಉತ್ಪಾದಕರ ಸಹಕಾರಿ ಸಂಘ ಅರಸಿನಮಕ್ಕಿ, ಅಶ್ವಮೇಧ ಫ್ರೆಂಡ್ಸ್ ಅರಸಿನಮಕ್ಕಿ, ಗ್ರಾಮ ಪಂಚಾಯತ್ ಅರಸಿನಮಕ್ಕಿ, ಶ್ರೀ.ಕ್ಷೇ.ಧ. ಗ್ರಾ. ಯೋಜನೆ ಅರಸಿನಮಕ್ಕಿ ವಲಯ, ವನದುರ್ಗಾ ಗೆಳೆಯರ ಬಳಗ ಅರಿಕೆಗುಡ್ಡೆ ಹತ್ಯಡ್ಕ, ಕಾಪು ಉಳ್ಳಾಲ್ತಿ ಗೆಳೆಯರ ಬಳಗ, ಉಪ್ಪರಡ್ಕ, ಸ್ವಸ್ತಿಕ್ ಫ್ರೆಂಡ್ಸ್ ಬೂಡ್ತಮಕ್ಕಿ, ಕಪಿಲ ಕೇಸರಿ ಗೆಳೆಯರ ಬಳಗ ಕುಂಟಾಲಪಳಿಕೆ, ಗ್ರಾಮ ಪಂಚಾಯತ್ ಶಿಶಿಲ, ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಶಿಶಿಲ, ಹಾಲು ಉತ್ಪಾದಕರ ಸಹಕಾರಿ ಸಂಘ ಶಿಶಿಲ, ಹಿಂದೂ ಜಾಗರಣಾ ವೇದಿಕೆ ಶಿಶಿಲ, ಬ್ರಹ್ಮಶ್ರೀ ಫ್ರೆಂಡ್ಸ್ ಓಟ್ಲ ಶಿಶಿಲ, ದೇನೋಡಿ ಗೆಳೆಯರ ಬಳಗ ಶಿಶಿಲ, ಆಟೋ ಚಾಲಕ ಮಾಲಕರ ಸಂಘ ಶಿಶಿಲ, ಜೈ ಶ್ರೀರಾಮ್ ಗೆಳೆಯರ ಬಳಗ ಶಿಬಾಜೆ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ, ವಿಶ್ವ ಹಿಂದೂ ಪರಿಷತ್ ಭಜರಂಗದಳ ರೆಖ್ಯ, ಹಾಲು ಉತ್ಪಾದಕರ ಸಹಕಾರಿ ಸಂಘ ರೆಖ್ಯ ಗ್ರಾಮ ಪಂಚಾಯತ್ ಶಿಬಾಜೆ ಸಹಕರಿಸಿದ್ದಾರೆ

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾದ ಶ್ರೀ ವರದ ಶಂಕರ್ ನಿರೂಪಿಸಿ, ನಿರ್ದೇಶಕರಾದ ಶ್ರೀ ಬೇಬಿ ಕಿರಣ್ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರ್ದೇಶಕರಾದ ಶ್ರೀ ರತೀಶ್ ಬಿ ಧನ್ಯವಾದವಿತ್ತರು. ಶಿಬಿರದಲ್ಲಿ ಒಟ್ಟು 53 ಯೂನಿಟ್ಸ್ ರಕ್ತವನ್ನು ಸಂಗ್ರಹಿಸಲಾಯಿತು.

Related posts

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ

Suddi Udaya

ಲಾಯಿಲ: ಪ್ರಸನ್ನ ಆಯುರ್ವೇದ ಆಸ್ಪತ್ರೆಯಲ್ಲಿ ಸುಶ್ರುತ ಜಯಂತಿ ಅಂಗವಾಗಿ ಅಗ್ನಿಕರ್ಮ ನೋವು ನಿವಾರಕ ಕಾರ್ಯಾಗಾರ

Suddi Udaya

ಯಕ್ಷ ಭಾರತಿ.ರಿ ಸಂಸ್ಥೆಯಿಂದ ಲೇಖನ ಸಾಮಗ್ರಿಗಳ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಂ ಅನುದಾನಿತ ಶಾಲೆಯಲ್ಲಿ ಆರೋಗ್ಯ ಕಾರ್ಯಕ್ರಮ

Suddi Udaya

ಬೆನಕ  ಹೆಲ್ತ್ ಸೆಂಟರ್ ನ ಔಷಧಾಲಯ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಜೂ.21: ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!