September 6, 2026
ತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಕಾಜೂರು ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ೨೦೨೫-೨೮ ಸಾಲಿನ ಅದ್ಯಕ್ಷರಾಗಿ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿಯಾಗಿ ಡಿ.ವೈ ಉಮರ್ ಕುಕ್ಕಾವು, ಉಪಾಧ್ಯಕ್ಷರಾಗಿ ಮುಹಮ್ಮದ್ ಬಶೀರ್ ಅಹ್ಸನಿ ಇವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ನಿರ್ದೇಶಕರುಗಳಾಗಿ ಅಬ್ದುಲ್ ಸಲೀಂ, ಕೆ. ಯು ಹನೀಫ್, ಬದ್ರುದ್ದೀನ್ ಹೆಚ್, ಅಬ್ದುಲ್ ಹಕೀಂ ಕೆ.ಕೆ, ಕೆ.ಯು ಮುಹಮ್ಮದ್ ಸಖಾಫಿ, ಶರೀಫ್ ಸಅದಿ ಮತ್ತು ಯಾಕೂಬ್ ಎನ್ ಎಂ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.

ವಕ್ಫ್ ನಿಯಮಾವಳಿಯಂತೆ ಇತ್ತೀಚೆಗೆ ಮತದಾನದ ಮೂಲಕ ೧೧ ಮಂದಿಯ ಆಯ್ಕೆ ನಡೆದಿತ್ತು. ಚುನಾಯಿತ ಪ್ರತಿನಿಧಿಗಳು ಸೆ.೧೭ ರಂದು ಸಭೆ ಸೇರಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿದರು. ಅಧ್ಯಕ್ಷತೆಗೆ ನಡೆದ ಗುಪ್ತ ಮತದಾನದಲ್ಲಿ ಬಶೀರ್ ಅಹ್ಸನಿ ಮತ್ತು ಕೆ.ಯು ಇಬ್ರಾಹಿಂ ಅವರು ಸ್ಪರ್ಧಿಸಿ ಮತದಾನದ ವೇಳೆ ಕೆ.ಯು ಇಬ್ರಾಹಿಂ ಅವರು ೬ ಮತಗಳು ಮತ್ತು ಬಶೀರ್ ಅಹ್ಸನಿ ಅವರು ೫ ಮತಗಳನ್ನು ಪಡೆದರು.

ಸಯ್ಯಿದ್ ಕಾಜೂರು ತಂಙಳ್‌ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ವೀಕ್ಷಕರಾಗಿ ಮತ್ತು ಚುನಾವಣಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಮಂಗಳೂರು ಸಬೆ ನಡೆಸಿಕೊಟ್ಟರು.

Related posts

ಸುನ್ನೀ ಮ್ಯಾನೇಜ್ ಮೆಂಟ್ ಅಸೋಶಿಯೇಷನ್ ನ ಬೆಳ್ತಂಗಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್

Suddi Udaya

ಪಣಕಜೆ ನಿವಾಸಿ ನೀಲಯ್ಯ ಮೂಲ್ಯ ಕಡ್ತ್ಯಾರ್ ನಿಧನ

Suddi Udaya

ಓಡಿಲ್ನಾಳ: ಮೇಗಿನ‌ ಮೈರಾರು ನಿವಾಸಿ ವೆಂಕಟೇಶ್‌ ಬೈಪಾಡಿತ್ತಾಯ ನಿಧನ

Suddi Udaya

ವಿ.ಹಿಂ.ಪ. ಬಜರಂಗದಳ ಮಾತೃಮಂಡಳಿ ದುರ್ಗವಾಹಿನಿ ಹಾಗೂ ಮುಂಡಾಜೆ ಮಂಜುಶ್ರೀ ಭಜನಾಮಂಡಳಿಯಿಂದ ಧನಸಹಾಯ ಹಾಗೂ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಕರಾಯ ಮೂರ್ತೆದಾರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಕೊಯ್ಯೂರಿನ ಮಹಿಳೆ ನಾಪತ್ತೆ; ದೂರು ದಾಖಲು

Suddi Udaya
error: Content is protected !!