37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಕೋರಂ ಕೊರತೆ ಹಾಗೂ ಅಧಿಕಾರಿಗಳು ಲೇಟಾಗಿ ಭಾಗವಹಿಸಿದ್ದರಿಂದ ನೆರಿಯ ಗ್ರಾಮಸಭೆ ಮುಂದೂಡಿಕೆ

ನೆರಿಯ: ನೆರಿಯ ಗ್ರಾಮ ತಾಲೂಕಿನಲ್ಲಿ ದೊಡ್ಡ ವ್ಯಾಪ್ತಿಯಿರುವ ಪಂಚಾಯತ್. ಗ್ರಾಮಸಭೆಗೆ ಅಧಿಕಾರಿಗಳು ಬಾರದೆ ಗ್ರಾಮಸಭೆ ಪ್ರಾರಂಭ ಮಾಡುವುದು ಬೇಡ.ಇಲಾಖೆಗಳು ತುಂಬಾ ದುರ್ಬಲವಾಗಿದೆಯ?ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಬೇಕು. ಗಂಟೆ 12 ಕಳೆದರೂ ಬರುವುದಿಲ್ಲ ಯಾಕೇ?ಅವರು ನಾವು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುವುದು. ಗ್ರಾಮಸಭೆಗೆ ಜನರು ಬರಲಿಲ್ಲ,ಅಧಿಕಾರಿಗಳು ಇಲ್ಲ.ಯಾರಿಗೆ ಗ್ರಾಮಸಭೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮುರಳೀಧರ್ ಹಾಗೂ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಸಂತಿ, ಪಿಡಿಓ ಸುಮ ಎ ಎಸ್ ಅವರು ಗ್ರಾಮಸಭೆ ನಡೆಸಲು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು.

ಗ್ರಾಮಸಭೆಗೆ ಅಧಿಕಾರಿಗಳು ಒಬ್ಬೊಬ್ಬರಂತೆ ಲೇಟಾಗಿ ಆಗಮಿಸಿದರು.12 ಗಂಟೆಯ ನಂತರ ಗ್ರಾಮಸಭೆ ಮಾಡುವುದು ಬೇಡಾ ಎಂದು ಹೇಳಿ ಕೆಲವರು ಹೊರ ನಡೆದರು. ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.ಕೆಲವು ಗ್ರಾಮಸ್ಥರು ಗ್ರಾಮಸಭೆ ಬೇಕು ಎಂದಾದರೆ, ಇನ್ನೂ ಕೆಲವರು ಗ್ರಾಮಸ್ಥರು ಬರಲಿಲ್ಲ ಬೇಡಾ ಎಂದು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕೊನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಮಾರ್ಗದರ್ಶಿ ಅಧಿಕಾರಿ ಗ್ರಾಮಸಭೆಯನ್ನು ಮುಂದೂಡಿ,ಮುಂದಿನ ದಿನಾಂಕ ತಿಳಿಸಲಾಗುವುದು ಎಂದರು.

Related posts

ವಾಣಿ ಕಾಲೇಜು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ನಾಲ್ಕೂರು: ಸಮಾಜ ಸೇವಕ ಹೆಚ್. ಧರ್ಣಪ್ಪ ಪೂಜಾರಿಯವರಿಗೆ ಯುವಶಕ್ತಿ ಫ್ರೆಂಡ್ಸ್ ನಿಂದ ಸನ್ಮಾನ

Suddi Udaya

ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

Suddi Udaya

ಮೇಲಂತಬೆಟ್ಟು ವಿಶೇಷಚೇತನರ ಸಮನ್ವಯ ಗ್ರಾಮಸಭೆ

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾರಂಭ

Suddi Udaya
error: Content is protected !!