25.7 C
ಪುತ್ತೂರು, ಬೆಳ್ತಂಗಡಿ
March 7, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

ಉಜಿರೆ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಂಗಳೂರು, ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಬೆಳ್ತಂಗಡಿ ವಿಭಾಗದ ಕಾರ್ಯಕಾರಿ ಸಮಿತಿಯ ಸಭೆ ಸೆ.19 ರಂದು ರಾಜ್ಯದ ಸಂಯೋಜಕ ಟಿ. ಜೆ ಮ್ಯಾಥ್ಯು ದ.ಕ ಜಿಲ್ಲಾ ಗೌರವಾಧ್ಯಕ್ಷ ಡಾ.ಗೋಪಾಲಕೃಷ್ಣ ಕಾಂಚೋಡು, ದ.ಕ ಜಿಲ್ಲಾಧ್ಯಕ್ಷ ನೊರ್ಬಟ್ ರೊಡ್ರಿಗಸ್ ಇವರುಗಳ ನೇತೃತ್ವದಲ್ಲಿ ಸೆ.19ರಂದು ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.

ಜಿಲ್ಲಾ ಉಪಾಧ್ಯಕ್ಷ ರುಡಾಲ್ಫ್ ಡಿ’ಸೋಜ, ಖಜಾಂಜಿ ಚಂದಪ್ಪ ಡಿ. ಎಸ್, ಕಡಬ ತಾಲೂಕು ಅಧ್ಯಕ್ಷ ಸೆಬಾಸ್ಟಿಯಾನ್, ಕಡಬದ ನಿಕಟಪೂರ್ವ ಅಧ್ಯಕ್ಷ ಸೈಮನ್ ಟಿ.ಜಿ ಉಪಸ್ಥಿತರಿದ್ದರು.

ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಮ್. ಜೆ ಮಣಿ, ಅಧ್ಯಕ್ಷರಾಗಿ ಎನ್.ಪಿ ತಂಗಚ್ಚನ್, ಉಪಾಧ್ಯಕ್ಷ ರವಿ ಪ್ರಸಾದ್, ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್ ಗೌಡ, ಜತೆ ಕಾರ್ಯದರ್ಶಿಯಾಗಿ ರಾಜೇಶ್, ಸಂಘಟನಾ ಕಾರ್ಯದರ್ಶಿ ಎನ್. ಸುರೇಶ್, ಖಜಾಂಜಿ ವಾಲ್ಟರ್ ಸಿಕ್ವೇರಾ, ಜತೆ ಖಜಾಂಜಿ ಪ್ರಾನ್ಸಿಸ್, ಪ್ರಧಾನ ಸಲಹೆಗಾರರಾಗಿ ಎ.ಕೆ ಶಿವನ್, ಮೋಹನ ಶೆಟ್ಟಿ ಮುದ್ದಿಗೆ, ಶಿವರಾಮ ಭಟ್, ಎಮ್.ಬಿ ಪಿಂಟೋ, ಹರೀಶ್ ರೈ, ಕಾಂತಪ್ಪ ಗೌಡ, ವೆಂಕಟರಮಣ ಶರ್ಮ, ಕೃಷ್ಣಾನಂದ ಶೆಟ್ಟಿ , ಚೇರಿಯನ್ ಟಿ ಉಜಿರೆ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Related posts

ಕುಂಟಿನಿ ಅಲ್ ಬುಖಾರಿ ಹಾಗೂ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸ ಆಡಳಿತ ಸಮಿತಿಯ ಮಹಾಸಭೆ: ಸಮಿತಿ ರಚನೆ

Suddi Udaya

ಉಜಿರೆ ರುಡ್‌ಸೆಟ್‌ನಲ್ಲಿ ಅಕೌಂಟಿಂಗ್ ಟ್ಯಾಲಿ ತರಬೇತಿ ಸಮಾರೋಪ

Suddi Udaya

ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯ ಅಭಿವೃದ್ಧಿಗೆ ರೂ.57.93 ಲಕ್ಷ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಕುಂಟಿನಿ ದ.ಕ ಜಿ.ಪಂ.ಕಿ.ಪ್ರಾ ಶಾಲೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಮತ್ತು ಶಾಲಾ ಕೈತೋಟ ರಚನೆ

Suddi Udaya

ಗುರುವಾಯನಕೆರೆ; ವಾರ್ಷಿಕ “ದಿಕ್ರ್ ಹಲ್ಖಾ” ಕಾರ್ಯಕ್ರಮ: ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Suddi Udaya

ನಾಗೇಶ್ ಕುಮಾರ್ ಗೌಡ ರವರ ಅಭಿಮಾನಿ ಬಳಗದಿಂದ ಮಂಗಳೂರಿನ ಸಮಾಜ ಸೇವಕ ಪ್ರಮೋದ್ ಸಾಲಿಯಾನ್ ಬಲ್ಲಾಳ್ ಬಾಗ್ ಭೇಟಿ

Suddi Udaya
error: Content is protected !!