22.9 C
ಪುತ್ತೂರು, ಬೆಳ್ತಂಗಡಿ
March 7, 2026
ಚಿತ್ರ ವರದಿ

ಉಜಿರೆ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಬೆಳ್ತಂಗಡಿ ಸೆಂಟರ್ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

ಬೆಳ್ತಂಗಡಿ : ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಬೆಳ್ತಂಗಡಿ ಸೆಂಟರ್ ಮತ್ತು ಎಸ್ ಡಿ ಎಂ ಐಟಿ ಉಜಿರೆ ಹಾಗೂ ಎಸ್ ಡಿ ಎಂ ಪಾಲಿಟೆಕ್ನಿಕ್ ಉಜಿರೆ ಸಹಯೋಗದಲ್ಲಿ ಇಂಜಿನಿಯರ್ಸ್ ಡೇ – 2025 ಕಾರ್ಯಕ್ರಮ ಆಯೋಜಿಸಲಾಯಿತು.

ಬೆಳ್ತಂಗಡಿಯಿಂದ ಎಸ್ ಡಿ ಎಂ ಐಟಿ ವರೆಗೆ ಮೋಟಾರ್ ರ್ಯಾಲಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.ಎಸ್ ಡಿ ಎಂ ಐಟಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಅತಿಥಿಗಳಿಂದ ದೀಪ ಪ್ರಜ್ವಲನ ಹಾಗೂ ವಿಶ್ವೇಶರಯರಿಗೆ ಪುಷ್ಪಾರ್ಚನೆ ನೆರವೇರಿತು.

ಸ್ವಾಗತ ಭಾಷಣವನ್ನು Er. ತೃಪ್ತಿ ರತನ್ (HOD, SDM ಪಾಲಿಟೆಕ್ನಿಕ್) ಮಾಡಿದರು.ಎಮಿನೆಂಟ್ ಇಂಜಿನಿಯರ್ 2025 ಗೌರವವನ್ನು Er. ಆನಂದ ಭಟ್ ಮತ್ತು Er. ವಿಜಯ ವಿಷ್ಣು ಮಯ್ಯ ಟಿ. ಅವರಿಗೆ ನೀಡಲಾಯಿತು. SDMIT ಮತ್ತು SDM ಪಾಲಿಟೆಕ್ನಿಕ್‌ನ ಶ್ರೇಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನ ನೀಡಲಾಯಿತು.

ಪ್ರಾಂಶುಪಾಲರ ಸಂದೇಶದ ನಂತರ Er. ಜಗದೀಶ್ ಪ್ರಸಾದ್ ಎನ್. (ಅಧ್ಯಕ್ಷರು, ACCE[I] ಬೆಳ್ತಂಗಡಿ ಕೇಂದ್ರ) KPCEA 2024 ಕುರಿತ ಮಾಹಿತಿ ಹಂಚಿದರು. ಕಾರ್ಯಕ್ರಮದ ನಿರೂಪಣೆ Dr. ರವೀಶ್ ಪಡುಮಲೆ (HOD, SDM IT, ಉಜಿರೆ) ನಡೆಸಿದರು.

ಕೊನೆಯಲ್ಲಿ Er. ಕೇಶವ್ ವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸೆಂಟರ್‌ನ ಅನೇಕ ಇಂಜಿನಿಯರ್‌ಗಳು, SDM ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya

ತಾಲೂಕು ಮಟ್ಟದ ಕರಾಟೆ ಪಂದ್ಯಾಟ : ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರ ಮತ್ತು ಗ್ರಾಮೀಣ ಘಟಕದ ಪದಾಧಿಕಾರಿಗಳ ಸಭೆ

Suddi Udaya

ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಬೆಳ್ತಂಗಡಿಗೆ ಆಗಮಿಸಿದ ವಿ.ಸೋಮಣ್ಣರವರಿಗೆ ಬಿಜೆಪಿಯಿಂದ ಅದ್ದೂರಿ ಸ್ವಾಗತ:

Suddi Udaya

ಮೊಗ್ರು ಸರಕಾರಿ ಶಾಲೆಯಲ್ಲಿ ಆಂ.ಮಾ. ಶಿಕ್ಷಣ ನೀಡಲು ಅನುಮತಿ: ಟ್ರಸ್ಟ್ ನ ಪ್ರಯತ್ನ | ಶಾಸಕರ ಸಾಥ್ | ಸರಕಾರದ ನಿರ್ಧಾರ

Suddi Udaya

ಬಿಜೆಪಿ ಕುವೆಟ್ಟು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಚಂದ್ರ ದಾಸ್, ಕುಕ್ಕಳ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಆಯ್ಕೆ

Suddi Udaya
error: Content is protected !!