September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌‌ ವತಿಯಿಂದ ಕರಂಬಾರು ಸ. ಹಿ. ಪ್ರಾ. ಶಾಲೆಯಲ್ಲಿ ‘ಶಾಲೆಡೊಂಜಿ ದಿನ’

ಬೆಳ್ತಂಗಡಿ: ಮೊಬೈಲ್, ಇಂಟರ್ನೆಟ್ ಕಾಲದಲ್ಲಿ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆ, ಆಟ‌ಓಡಾಟಗಳಿಂದ, ತುಳು ಸಂಸ್ಕೃತಿಯಿಂದ ದೂರ ಉಳಿಯುತ್ತಿದ್ದಾರೆ. ಈ ದೂರವು ಮುಂದಿನ ತಲೆಮಾರುಗಳಿಗೆ ಬಹಳ ಗಂಭೀರವಾಗಿ ತಟ್ಟಲಿದೆ, ಹಾಗಾಗಿ ವಿದ್ಯಾರ್ಥಿಗಳಿಗೆ ಆಟ, ಕರಕುಶಲಕಲೆಗಳ, ತುಳುಲಿಪಿ- ಸಂಸ್ಕೃತಿಯ ಪರಿಚಯ ಮಾಡಿಸುನ ದಿಟ್ಟಿಯಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌‌ ನ ಮುತುವರ್ಜಿಯಲ್ಲಿ ಕರಂಬಾರು ಸ. ಹಿ. ಪ್ರಾ. ಶಾಲೆಯಲ್ಲಿ “ಬೊಳ್ಳಿದೋಟಡ್ ಬಂಗಾರ್ ಪುರ್ಪೊಲೆನೊಟ್ಟುಗು” ಎಂಬ ಉಪಶೀರ್ಷಿಕೆಯ ‘ಶಾಲೆಡೊಂಜಿ ದಿನ’ ಎಂಬ ವೈವಿಧ್ಯಮಯ ಕಾರ್ಯಕ್ರಮ ಸೆ.20ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಪುಷ್ಪರಾಜ್ ಎಂ. ಕೆ. ಮಾತನಾಡಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಹಾಗೂ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆ ಷೋಷಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದರೊಂದಿಗೆ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಇನ್ನಷ್ಟು ಸಹಕಾರಿಯಾಗಲಿವೆ ಎಂದು ಹೇಳಿ ಶುಭಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷರು ನಿಶ್ಚಿತ್ ಜಿ ರಾಮಕುಂಜ ಸ್ವಾಗತಿಸಿದರು, ಅತಿಥಿ ಶಿಕ್ಷಕ ಸದಾಶಿವ ಧನ್ಯವಾದವಿತ್ತರು. ವಿದ್ಯಾರ್ಥಿ ಯಶ್ಮಿತ್ ಆಚಾರ್ಯ ಪ್ರಾರ್ಥನೆ ಹಾಡಿದರು, ಶಾಲಾ ಸಿಆರ್ ಪಿ ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳಿಗೆ ಮಡಲ್ ಮೊಡೆಯಲು, ಮೂಡೆ ಕಟ್ಟಲು, ಹಾಗೆಯೇ ಒಲಿಯಲ್ಲಿ ಬೇರೆ ಬೇರೆ ವಿನ್ಯಾಸಗಳನ್ನು, ಚೆನ್ನೆಮಣೆ, ಡೊಂಕ, ಪೊಕ್ಕು ಇಂತಹ ದೇಸೀ ಆಟಗಳನ್ನು ಕಲಿಸಲಾಯಿತು. ಸುಕೇಶ್, ಸುಶಾನ್, ಬ್ಲೆನ್ಸನ್, ನಿಹಾಲ್ ಪೈ, ಅಕ್ಷಯ್ ಕುಮಾರ್, ಪೃಥ್ವಿ, ದಿವಾಕರ್ ಉಬಾರ್, ಪೃಥ್ವಿ ಹಾಗೂ ದಿವಾಕರ್ ಉಬಾರ್ ಸಹಕರಿಸಿದರು.

ಮಧ್ಯಾಹ್ನದ ನಂತರ ಮಕ್ಕಳಿಗೆ ಮಹಿ, ಸುಕೇಶ್, ಪೃಥ್ವಿ ತುಳು ಲಿಪಿಯ ಪರಿಚಯ ಕೊಟ್ಟು ತಮ್ಮ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆಯಲು ತಿಳಿಸಿ ಕೊಟ್ಟರು. ತುಳು ಸಂಬಂಧಿತ ವಿಷಯಗಳ ಆಧಾರದಲ್ಲಿ ಜ್ಞಾಪಕ ಶಕ್ತಿ ಸ್ಪರ್ಧೆ ನಡೆಯಿತು. ನಿಶ್ಚಿತ್ ರಾಮಕುಂಜ ಮಕ್ಕಳಿಗೆ ಡೆನ್ನನ ಡೆನ್ನಾನ ತುಳು ಪದ್ಯ ಹೇಳಿಕೊಟ್ಟರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ವತಿಯಿಂದ ಶಾಲೆಗೆ ಸಿಸಿಟಿವಿ ಉಡುಗೊರೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿಯ ಪುಷ್ಪರಾಜ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಇಂದಿನ ಅವಶ್ಯಕತೆಗಳು, ಇದರ ಜೊತೆಗೆ ತುಳು ಸಂಸ್ಕೃತಿಯ ಮೂಲ ಕೃಷಿಚಟುವಟಿಕೆಯಲ್ಲಿ ಮಾಡುವಂತಹ ಪುಣಿ ಕಟ್ಟುನ, ಕಣಿ ಕೆತ್ತುನ ಇಂತಹ ಸಾಗುವಳಿ ಸಂಬಂಧಿತ ಚಟುವಟಿಕೆಗಳನ್ನು ತಿಳಿಸಿಕೊಟ್ಟರೆ ಇನ್ನೂ ಉತ್ತಮ ಎಂಬ ಅಭಿಪ್ರಾಯ ಹಂಚಿಕೊಂಡರು. ಶಾಲೆಯ ಮುಖ್ಯ ಶಿಕ್ಷಕರು ರಮೇಶ್ ಚೌಹಾನ್ ಮಾತನಾಡಿ, ತುಳು ನೆಲ, ಜಲ, ಗಾಳಿಯ ರಕ್ಷಣೆ ಪ್ರತೀ ತುಳುವನ ಕರ್ತವ್ಯ ಎಂದು ಹೇಳಿದರು. ಶಾಲಾ ಶಿಕ್ಷಕರು ಸಾವಿತ್ರಿ, ಸದಾಶಿವ, ಚೈತ್ರಾ ಶೆಟ್ಟಿ ಹಾಗೆಯೇ ಇತರ ಅತಿಥಿ ಶಿಕ್ಷಕರ ಸಹಕಾರದಿಂದ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಭಾಗವಹಿಸಿದರು. ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ಸದಸ್ಯ ಸುಕೇಶ್ ಮಕ್ಕಳಿಗೆ ಸ್ಟೇಷನರಿ ವಸ್ತುಗಳನ್ನು ಹಂಚಿದರು. ಸ್ಥೀಯರೂ, ಫೌಂಡೇಷನ್‌ನ ಸದಸ್ಯ ಪೃಥ್ವಿರಾಜ್ ಇವರ ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಿಶ್ಚಿತ್ ರಾಮಕುಂಜ ಸ್ವಾಗತಿಸಿ, ಫೌಂಡೇಷನ್‌ನ ಕಾರ್ಯದರ್ಶಿ ಸುಶಾನ್ ಕೋಟ್ಯನ್ ವಂದಿಸಿದರು. ಸುಕೇಶ್ ತುಳುನಾಡ ಗೀತೆ ಹಾಡಿದರು, ಮಹಿ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯ ಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಶ್ರೀಮತಿ ಶೋಭ,ವಸಂತ ನಾಯ್ಕ, ಶಿಕ್ಷಕರಾದ ಶ್ರೀಮತಿ ಸಾವಿತ್ರಿ , ಶ್ರೀಮತಿ ತಸ್ಮಿಯ, ಶ್ರೀಮತಿ ಚೈತ್ರಾ, ಶ್ರೀಮತಿ ಸ್ವಾತಿ, ಬಿಸಿ ಊಟ ನೌಕರರಾದ ಜಯಂತಿ, ಚಂದ್ರಾವತಿ,ಶಾಲಾ ಮಕ್ಕಳು ಮಕ್ಕಳ ಪೋಷಕರು ಪಾಲ್ಗೊಂಡಿದ್ದರು

Related posts

ಅಪರಿಚಿತ ವ್ಯಕ್ತಿ ಮೃತ್ಯು: ವಿಳಾಸ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರ ಮನವಿ

Suddi Udaya

ಪಾಲೇದು: ತಮ್ಮಯ್ಯ ಪೂಜಾರಿ ನಿಧನ

Suddi Udaya

ಉಜಿರೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

Suddi Udaya

ಕಲ್ಮಂಜ: ನಿಡಿಗಲ್ ಅಂಗನವಾಡಿಯಲ್ಲಿ ಪೋಷಣಾ ಅಭಿಯಾನ

Suddi Udaya

ಕೊಕ್ಕಡ: ಕಾಡಾನೆಗಳ ಹಾವಳಿ : ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯ

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೊ ಸ್ಕೂಲ್ “ಲುಮಿನ್ಯಾ” ಪ್ರಾರಂಭೋತ್ಸವ ಆರಂಭ, ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

Suddi Udaya
error: Content is protected !!