ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೆ.23 ರಂದು ನಡೆಯಿತು.

ಸಂಘದ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ ಸಂಘವು ಕಳೆದ ಆರು ವರ್ಷಗಳಿಂದ ಉತ್ತಮ ವ್ಯವಹಾರ ಮಾಡುತ್ತ ಸಹಕಾರಿಗಳಿಗೆ ಸಾಲ ಸೌಲಭ್ಯಗಳನ್ನು ವಿತರಿಸುತ್ತಾ ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸಂಘವು ರೂ 151ಕೋಟಿ ವ್ಯವಹಾರ ನಡೆಸಿ,54.56 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 12 ಡಿವಿಡೆಂಟ್ ನೀಡಲಾಗುವುದು. ಜೊತೆಗೆ ಈ ಬಾರಿ ವಿಶೇಷವಾಗಿ ಪ್ರಿಯದರ್ಶಿನಿ ಗೃಹಲಕ್ಷ್ಮಿ ಸಾಲ ಹೊಸ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಗಂಗಾಧರ ಮಿತ್ತಮಾರ್, ನಿರ್ದೆಶಕರಾದ ಉಮೇಶ್ ಎಬಿ,ಬಿ.ಎಂ ಅಬ್ದುಲ್ ಹಮೀದ್,ಜಗದೀಶ್ ಹೆಗ್ಡೆ, ಕೆಎಸ್ ಯೋಗೀಶ್ ಕುಮಾರ್, ಕೆ.ರಾಮಚಂದ್ರ ಗೌಡ, ಶೈಲೇಶ್ ಕುಮಾರ್,ವಿ ರಮೇಶ್ ಪೂಜಾರಿ , ಮೋಹನ್ ಶೆಟ್ಟಿಗಾರ್, ರಾಮಚಂದ್ರ ಭಟ್ ಅರೆಕ್ಕಲ್, ಉಷಾ ಶರತ್, ರಾಗ್ನೇಶ್, ಅಭಿನಂದನ್ ಹರೀಶ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿಗಳು,ಸದಸ್ಯರು ಉಪಸ್ಥಿತರಿದ್ದರು.











