27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟೀಚರ್ಸ್ ಡೇ ಮತ್ತು ಓಣಂ ಹಬ್ಬದ ಆಚರಣೆ

ಬೆಳ್ತಂಗಡಿ: ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜು, ಬೆಳ್ತಂಗಡಿಯಲ್ಲಿ ಟೀಚರ್ಸ್ ಡೇ ಹಾಗೂ ಓಣಂ ಹಬ್ಬವನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸ್ಥಾಪಕಾಧ್ಯಕ್ಷ, ಮುಖ್ಯಸ್ಥ ಹಾಗೂ ಪ್ರಾಂಶುಪಾಲರಾದ ಎಂ.ಜಿ. ತಲ್ಹತ್ ಸವಣಾಲು ಅವರು ಮಾತನಾಡಿ: “ಶಿಕ್ಷಕರು ಸಮಾಜದ ದೀಪಸ್ತಂಭರಾಗಿದ್ದಾರೆ. ಒಬ್ಬ ವಿದ್ಯಾರ್ಥಿಯ ಜೀವನವನ್ನು ಬೆಳಗಿಸಲು ಅವರು ತಮ್ಮ ಶ್ರಮವನ್ನು ಅರ್ಪಿಸುತ್ತಾರೆ. ಆದ್ದರಿಂದಲೇ ಶಿಕ್ಷಕರ ದಿನವು ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಮಹತ್ವದ ದಿನವಾಗಿದೆ. ಓಣಂ ಹಬ್ಬವು ಒಗ್ಗಟ್ಟು ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ವಿಭಿನ್ನ ಧರ್ಮ, ಸಂಸ್ಕೃತಿಯ ಜನರು ಒಂದಾಗಿ ಸಂತೋಷ ಹಂಚಿಕೊಳ್ಳುವ ಹಬ್ಬವೆಂದರೆ ಅದು ಓಣಂ. ಈ ಮೌಲ್ಯಗಳನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಅವರು ಉತ್ತಮ ನಾಗರಿಕರಾಗಿ ಬೆಳೆದೀತರು,” ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ನಿರ್ದೇಶಕ ಜಿತೇಶ್ ಕುಮಾರ್ ಅವರು”ವಿದ್ಯಾರ್ಥಿಗಳು ಪಾಠ್ಯಕ್ರಮದ ಜೊತೆಗೆ ಕಲೆ-ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅದು ಅವರ ವ್ಯಕ್ತಿತ್ವವನ್ನು ಸಂಪೂರ್ಣಗೊಳಿಸುತ್ತದೆ. ಶಿಕ್ಷಕರ ದಿನಾಚರಣೆ ನಮ್ಮ ಜೀವನದಲ್ಲಿ ಗುರುಗಳ ಸ್ಥಾನ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೆನಪಿಸುತ್ತದೆ. ಓಣಂ ಹಬ್ಬವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಹಬ್ಬ,” ಎಂದು ಹೇಳಿದರು.

ಫ್ಯಾಷನ್ ಡಿಸೈನರ್, ಮಹಿಳಾ ಉದ್ಯಮಿ ಹಾಗೂ ರಾಜ್ಯ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಝೀನತ್ ಉಜಿರೆ ಉಪಸ್ಥಿತರಿದ್ದರು. ಕಾಲೇಜಿನ ನಿರ್ದೇಶಕ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಸ್ವಾಗತಿಸಿ. ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಧನ್ಯವಾದವಿತ್ತರು.

ಕಾರ್ಯಕ್ರಮವನ್ನು ಫ್ಯಾಷನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿನಿಯರಾದ ಸಬಾ ಕಕ್ಕಿಂಜೆ, ಉಸೈಮಾ ಆಲ್ದೂರು ಮತ್ತು ಫೈರ್ ಅಂಡ್ ಸೇಫ್ಟಿ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ರಾಫಿ ಸಮರ್ಪಕವಾಗಿ ನಿರೂಪಿಸಿದರು.

ಫೈರ್ ಅಂಡ್ ಸೇಫ್ಟಿ, ಏರೋನಾಟಿಕಲ್, ಮೆರೈನ್ ಸೇಫ್ಟಿ ಇಂಜಿನಿಯರಿಂಗ್, ಏರ್‌ಕಂಡೀಷನಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ, ಗಾಯನ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಆಟೋಟ ಸ್ಪರ್ಧೆಗಳನ್ನೂ ಆಯೋಜಿಸಿದ್ದರು.

Related posts

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕವಿ ಸಮ್ಮಿಲನ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಗೈಡ್ ವಿದ್ಯಾರ್ಥಿನಿ ನಿಷ್ಕ ಹೆಗ್ಡೆ ಇವರ ಕೈಚಳಕದಿಂದ ಮೂಡಿದ ಪರಿಸರ ಸ್ನೇಹಿ ಗಣಪತಿ

Suddi Udaya

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಪ್ರಾಧ್ಯಾಪಕ ಈಶ್ವರ ಗೌಡ ಪಿ. ಅವರಿಗೆ ಪಿ. ಎಚ್.ಡಿ ಪದವಿ ಪ್ರದಾನ

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

Suddi Udaya

ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ಸಾರ್ಟಿಸಿ ಬಸ್ ಮಂಜೂರು – ಶಾಸಕರ ಶಿಫಾರಸ್ಸಿನಂತೆ ಬಸ್ಸು ಮಂಜೂರಾಗಿದ್ದರೆ, ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ- ಬಸ್ಸು ಮಂಜೂರು ಮಾಡಿಸಿದ್ದು, ನಾನೇ ಎಂದು ನಾನು ಪ್ರಮಾಣ ಮಾಡುತ್ತೇನೆ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು

Suddi Udaya
error: Content is protected !!