22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್. ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೌರತ್ವ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಎಡ್. ಹಾಗೂ ಡಿ.ಇಡ್. ಕಾಲೇಜು ಜಂಟಿಯಾಗಿ 2025 ಶೈಕ್ಷಣಿಕ ವರ್ಷದ ಪೌರತ್ವ ತರಬೇತಿ ಶಿಬಿರವನ್ನು ರತ್ನಮಾನಸ ವಿದ್ಯಾರ್ಥಿ ನಿಲಯ ಉಜಿರೆಯಲ್ಲಿ ಆಯೋಜಿಸಿದ್ದು ಈ ಶಿಬಿರವನ್ನು ಉದ್ಘಾಟಿಸಿದ ಜಗದೀಶ್ ಪ್ರಸಾದ್, ಸಿವಿಲ್ ಇಂಜಿನಿಯರ್ ಇವರು ಮಾತನಾಡಿ “ ಮನುಷ್ಯನು ಬೇರೆ ಬೇರೆ ಸ್ಥರಗಳಲ್ಲಿ ತರಬೇತಿ ಪಡೆಯುತ್ತಾನೆ.

ಇಂತಹ ಪೌರತ್ವ ತರಬೇತಿಗಳು ಮಾನವನ ಜೀವನ ರೂಪಿಸಲು ಸಹಕಾರಿಯಾಗುತ್ತವೆ. ಸಾವಿರ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿ ನಿಮ್ಮಂತಹ ಶಿಕ್ಷಕರಲ್ಲಿದೆ. ಮಕ್ಕಳ ತಪ್ಪುಗಳನ್ನು ತಿದ್ದಿ ಕಷ್ಟಗಳನ್ನು ಎದುರಿಸಲು ನಗುಮೊಗದಿ ತಿಳಿಹೇಳುವುದು ಕೂಡ ಒಂದು ಕಲೆ ” ಎಂದು ಹೇಳಿದರು.


ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಶಶಿಶೇಖರ ಎನ್ ಕಾಕತ್ಕರ್, ಶೈಕ್ಷಣಿಕ ಸಂಯೋಜಕರು, ಶ್ರೀ ಧ. ಮಂ. ಶಿಕ್ಷಣ ಸಂಸ್ಥೆ, ಉಜಿರೆ ಇವರು ಮಾತನಾಡುತ್ತಾ “ ಭಾವೈಕ್ಯತೆ, ಸಹಬಾಳ್ವೆ, ಕರ್ತವ್ಯ ನಿರ್ವಹಣೆ, ಮಾತುಗಾರಿಕೆ ಮತ್ತು ಹೊಂದಾಣಿಕೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಹಾಗೂ ಎಲ್ಲವ ಕಲಿತ ಮಾನವನನ್ನು, ಮಾನವೀಯ ಮೌಲ್ಯಗಳೊಂದಿಗೆ ಬಾಳಲು ಕಲಿಸುವ ಶಿಬಿರಗಳು ಎಲ್ಲರಿಗೂ ಸ್ಫೂರ್ತಿ. ಶಿಕ್ಷಕ ವೃತ್ತಿ ಎನ್ನುವುದು ಪವಿತ್ರವಾದುದು. ಬೋಧನೆ, ಪ್ರೇರಣೆ, ಮೌಲ್ಯಗಳು ಹಾಗೂ ಮಾರ್ಗದರ್ಶನವನ್ನು ನೀಡುವುದು ಶಿಕ್ಷಕನಾದವನ ಆದ್ಯ ಕರ್ತವ್ಯ ” ಎಂದು ಹೇಳಿದರು.


ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಮಂಜು ಆರ್, ರತ್ನಮಾನಸದ ನಿಲಯಪಾಲಕರಾದ ಯತೀಶ್ ಕೆ ಬಳಂಜ ಅವರು ಶಿಬಿರಕ್ಕೆ ಶುಭ ಹಾರೈಸಿದರು. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿ ವೀಕ್ಷಾದೀಪ, ಡಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿ ರಂಝಿಯಾ ಬಾನು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ವೀಕ್ಷಾದೀಪ ಸ್ವಾಗತಿಸಿ, ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಸಾಯಿಧೃತಿ ವಂದಿಸಿ, ವರ್ಷಾ ಅತಿಥಿ ಪರಿಚಯಿಸಿದರು. ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ರಶ್ಮಿ ಕೆ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಮಲವಂತಿಗೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಕೇಂದ್ರದ ಜನ ಗಣತಿಯ ಜೊತೆ ಜಾತಿ ಗಣತಿ ಸ್ವಾಗತಾರ್ಹ : ರಕ್ಷಿತ್ ಶಿವರಾಂ

Suddi Udaya

ಬಿಜೆಪಿ ನಾಯಕರಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಭಾಗಿ

Suddi Udaya

ಮರೋಡಿ ಪಲಾರಗೋಳಿ ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸವ: ಸಾರ್ವಜನಿಕ ಶ್ರೀ ಶನಿಪೂಜೆ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಹುಟ್ಟುಹಬ್ಬ ಹಿನ್ನಲೆ ಬಂದಾರು ಶಾಲೆಯ ವಿದ್ಯಾರ್ಥಿಗಳಿಂದ ಲಕ್ಷ್ಮೀ ಗ್ರೂಪ್ಸ್ ಕಂಪನಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

Suddi Udaya

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ವಾಣಿಜ್ಯ ವ್ಯವಹಾರಗಳ ಅಧ್ಯಯನದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!