32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಿತ್ತಬಾಗಿಲು ಸುಜ್ಞಾನ ಸಂಜೀವಿನಿ ಒಕ್ಕೂಟದ ಮಹಾಸಭೆ

ಮಿತ್ತಬಾಗಿಲು : ಸುಜ್ಞಾನ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಮಿತ್ತಬಾಗಿಲು ಇದರ 2024-2025 ಸಾಲಿನ ವಾರ್ಷಿಕ ಮಹಾಸಭೆಯನ್ನು ಸೆ.26 ರಂದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವತ್ಸಲಾ ಕೆ.ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಉದ್ಘಾಟನೆಯನ್ನು ಅಧ್ಯಕ್ಷ ವಿನಾಯಚಂದ್ರ ರವರು ನೆರವೇರಿಸಿ ಶುಭ ಹಾರೈಸಿದರು .ವಲಯ ಮೇಲ್ವಿಚರಕರಾದ ಜಯಾನಂದ್ ಸಂಜೀವಿನಿ ಯೋಜನೆಯ ದ್ಯೆಯೋದ್ದೇಶ ಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸದಸ್ಯರಿಗೆ ಮನಮುಟ್ಟುವಂತೆ ನೀಡಿದರು. ಶ್ರೀಮತಿ ಗೋಪಿ ಕೃಷಿ ಉದ್ಯೋಗ ಸಖಿ ರವರು ವಾರ್ಷಿಕ ವರದಿಯನ್ನು ಮಂಡಿಸಿ, ಹಾಗೂ ಶ್ರೀಮತಿ ಪ್ರತಿಮಾ ಬಿಸಿಸಖಿ ಇವರು ಶಾಸನಬದ್ಧ ಲೆಕ್ಕಪರಿಶೋಧನವರದಿಯನ್ನು ಮಂಡಿಸಿದರು. ಸಿಹೆಚ್ ಒ ರವರು ಲಿಂಗತ್ವಧಾರಿತ ದೌರ್ಜನ್ಯದ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಒಕ್ಕೂಟದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞೆಯನ್ನು ಮಾಡಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವತ್ಸಲಾ ರವರು ಸಂಜೀವಿನಿ ಯೋಜನೆಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಸಂಜೀವಿನಿ ಸದಸ್ಯರಾದ ಮಲ್ಲಿಕಾ ರವರು ಪ್ರಾರ್ಥಿಸಿ, ಶ್ರೀಮತಿ ವಿನೋದ ಸ್ವಾಗತಿಸಿ, ಸುಷ್ಮಾ ಕಾರ್ಯಕ್ರಮವನ್ನು ನಿರೂಪಿಸಿ, ವನಿತಾ ಧನ್ಯವಾದವಿತ್ತರು.

Related posts

ನಡ:ಯುವವಾಹಿನಿ ಡೆನ್ನಾನ ಡೆನ್ನನ 2024 ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಧರ್ಮಸ್ಥಳ: ನೇರ್ತನೆ ನಿವಾಸಿ ಉದ್ಯಮಿ ಆ್ಯಂಟನಿ ಎ.ಜೆ ನಿಧನ

Suddi Udaya

ತೆಕ್ಕಾರು ಕುಟ್ಟಿಕಳ ಸ. ಹಿ ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕಾಯರ್ತಡ್ಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರಿಗೆ ಸನ್ಮಾನ

Suddi Udaya

ಮಾಲಾಡಿ: ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಪಿಕಪ್ ನಡುವೆ ಅಪಘಾತ

Suddi Udaya
error: Content is protected !!