32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಜೈನ ಸಮಾಜದಿಂದ ತಹಶೀಲ್ದಾರರಿಗೆ ಮನವಿ

ಬೆಳ್ತಂಗಡಿ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಪುರಾತನ ಬಸದಿಗಳ ಮಾಹಿತಿಗಳನ್ನು ಕೇಳಿದ್ದು ಕೆಲವೊಂದು ಬಸದಿಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲು ಪ್ರಯತ್ನಿಸುತ್ತಿರುವುದು ತಿಳಿದುಬಂದಿದ್ದು ಇದನ್ನು ನಾವು ತೀವ್ರವಾಗಿ ವಿರೋಧಿಸುತಿದ್ದೇವೆ ಎಲ್ಲಾ ಬಸದಿಗಳಲ್ಲಿ ನಿತ್ಯ ಪೂಜೆಗಳು ನಡೆಯುತ್ತಿದ್ದು ಜೈನ ಸಮಾಜದ ಶ್ರದ್ದಾ ಕೇಂದ್ರಗಳಾಗಿದ್ದು ಪುರಾತತ್ವ ಇಲಾಖೆ ನಿರ್ಧಾರದಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ತಹಸೀಲ್ದಾರ್ ಅವರಿಗೆ ಮನವಿ ನೀಡಿ ಎಲ್ಲ ಬಸದಿಗಳ ಸ್ಥಳ ಪರಿಶೀಲನೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗದಂತೆ ಹಾಗೂ ಪುರಾತತ್ವ ಇಲಾಖೆಗೆ ಸೇರಿಸುವ ಅಗತ್ಯ ಇಲ್ಲದಿರುವ ಬಗ್ಗೆ ಪುರಾತತ್ವ ಇಲಾಖೆಗೆ ವರದಿ ನೀಡಬೇಕಾಗಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಯಶೋಧರ್ ಬಳ್ಳಾಲ್ ಬಂಗಾಡಿ ಅರಮನೆ., ವಿಜಯಕುಮಾರ್ ಸಿದ್ದಾರ್ಥ್ ನಿಲಯ, ಯುವರಾಜ್ ಪೂವಣಿ, ಜಿನರಾಜ ಪೂವಣಿ, ಪಣಿ ರಾಜ್ ಜೈನ್, ಶ್ರೀಮತಿ ಸುರಭಿ, ಅಭಿನಂದನ್, ವೀರೇಂದ್ರ ಜೈನ್, ಸುರೇಂದ್ರ ಕುಮಾರ್ ಧರ್ಮಸ್ಥಳ, ವಿನಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಕಾಶಿಬೆಟ್ಟುನಲ್ಲಿ ರಸ್ತೆ ಮಧ್ಯೆ ಕೈಕೊಟ್ಟ ಟ್ರಕ್: ತಾಸುಗಟ್ಟಲೆ ವಾಹನ ಬ್ಲಾಕ್

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮುಸ್ಕಾನ್ ಕೌಸರ್ ರಿಗೆ ಸನ್ಮಾನ

Suddi Udaya

ತುಳುನಾಡ್ ಜವಾನೆರ್ ವೇಣೂರು ಮತ್ತು ಗೋಳಿಯಂಗಡಿ ಕೇದಗೆ ಯುವಕೇಸರಿ ಫ್ರೆಂಡ್ಸ್ ಕ್ಲಬ್‌ನಿಂದ ಪುಸ್ತಕ ವಿತರಣೆ

Suddi Udaya

ಯೂಟ್ಯೂಬ್ ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ಮಹೇಶ್ ಶೆಟ್ಟಿ ತಿಮರೋಡಿ ಯವರನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಂಗ ಬಂಧನ

Suddi Udaya

ಜ.22: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ: ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!