28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜ.22: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ: ಆಮಂತ್ರಣ ಪತ್ರ ಬಿಡುಗಡೆ

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ ಕಾರ್ಯಕ್ರಮದ ಆಮಂತ್ರಣ ಪತ್ರ ಜ.1 ರಂದು ಬಿಡುಗಡೆಮಾಡಲಾಯಿತು.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲ್ಲಿರುವ ಶ್ರೀ ರಾಮನ ಪ್ರತಿಷ್ಠಾ ದಿನದ ಪ್ರಯುಕ್ತ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ 1001 ಶ್ರೀ ರಾಮ ಜಪ ಯಜ್ಞ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಶಿಶಿಲದಿಂದ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ ಶೀನಪ್ಪ ಮುಚ್ಚಿರಡ್ಕ ಇವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಉಪಾಧ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ಕರುಣಾಕರ ಶಿಶಿಲ, ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಿನ್ ಡಿ., ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಶಿಶಿಲ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ದೀಪಕ್ ಶಾಲೆಗುಡ್ಡೆ, ಕೊರಗಪ್ಪ ಗೌಡ ಪಡ್ಪು, ರೂಪೇಶ್ ಬೈಪಾಡಿ, ಯತೀಶ್ ಪೇರಿಕೆ, ಯೋಗೀಶ್ ಅಂಬೆಲ್ತಡ್ಕ, ಸಂತೋಷ ಅಮ್ಮುಡಂಗೆ ಮೊದಲಾದವರು ಉಪಸ್ಥಿತರಿದ್ದರು.

Related posts

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಕಾಯರ್ತಡ್ಕ ದಿವ್ಯಜ್ಯೋತಿ ಶಾಲಾ ವಿದ್ಯಾರ್ಥಿ ಆ್ಯಡ್ಲಿನ್ ಎಲಿಜಬೆತ್ ಜೆರಿನ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ

Suddi Udaya

ವೇಣೂರಿನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Suddi Udaya

ಗುರುವಾಯನಕೆರೆ ಮಂಜುಬೆಟ್ಟುವಿನಲ್ಲಿ ಎಫ್.ಎಮ್ ಗಾರ್ಡನ್ & ಕನ್ವೆನ್ಶನ್ ಎ.ಸಿ ಸಭಾಂಗಣ ಉದ್ಘಾಟನೆ

Suddi Udaya

ಉಜಿರೆ: ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಅಂಬಡಬೆಟ್ಟು ಸೇತುವೆ ಶಿಥಿಲ: ಘನ ವಾಹನಗಳ ಸಂಚಾರ ನಿಷೇಧ: ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚರಿಸುವಂತೆ ಸೂಚನೆ

Suddi Udaya

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಸಪ್ತಾಹ ಕಾರ್ಯಕ್ರಮ

Suddi Udaya

ಅತ್ಯುತ್ತಮ ಸೇವೆಗೆ ಹೆಸರುವಾಸಿ ಗುರುವಾಯನಕೆರೆಯ ಹೋಟೆಲ್ ರೇಸ್ ಇನ್

Suddi Udaya
error: Content is protected !!