32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ

ಮಡಂತ್ಯಾರು : 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಕ್ಷೀರ ಗಂಗಾ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಕೇಶವ ಪೂಜಾರಿ ಪಿ.ನಾಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘವು ಲಾಭ ಗಳಿಸಲು ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಿರುವುದರಿಂದ ರೂ. 53837821.70 ವ್ಯವಹಾರ ನಡೆಸಿ, ವರದಿ ಸಾಲಿನಲ್ಲಿ ರೂ. 2,22,174.98 ಲಾಭ ಗಳಿಸಿದೆ. ಅದುದರಿಂದ ಸದಸ್ಯರಿಗೆ ಶೇ. 6 ಡಿವಿಡೆಂಡ್ ಘೋಷಣೆ ಮಾಡಿದರು.


ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಸೌಮ್ಯ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ದ.ಕ.ಹಾಲು ಒಕ್ಕೂಟ ಮಾಜಿ ನಿರ್ದೇಶಕ ಪದ್ಮನಾಭ ಅರ್ಕಜೆ, ವರ್ಗಾವಣೆ ಹೊಂದಿರುವ ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ನಾಳ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಮಜಲು, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರನ್ನು ಮತ್ತು ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಿದರು.

ಸಂಘದ ನಿರ್ದೇಶಕರಾದ ಸುಧಾಕರ ಮಜಲು, ಬಾಲಕೃಷ್ಣ ಶೆಟ್ಟಿ, ವಿಠ್ಠಲ ಗೌಡ, ಬೊಮ್ಮಣ್ಣ ಗೌಡ, ಶ್ರೀಧರ ಪೂಜಾರಿ, ರಮೇಶ್‌ ಶೆಟ್ಟಿ, ಜಗದೀಶ, ರೇಖಾ, ರೀತಾ ಕೆ., ವಿಜಯ, ಲೀಲಾವತಿ ಹಾಗೂ ಸಂಘದ ಸದಸ್ಯರು ಮತ್ತಿತರರಿದ್ದರು.

Related posts

ಕಳಿಯ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಗೆ ಸದಸ್ಯರ ನೇಮಕ : ದಾಖಲೆಗಳನ್ನು ಹಾಜರು ಪಡಿಸುವಂತೆ ಹೈಕೋರ್ಟ್ ಸೂಚನೆ

Suddi Udaya

ಲಾಯಿಲ: ಶ್ರೀ ಗಾಯತ್ರೀ ವಿಶ್ವಕರ್ಮ ಮಹಿಳಾ ಸಂಘದಿಂದ ಶ್ರೀ ಕಾಳಿಕಾಂಬಾ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಕುವೆಟ್ಟು, ಓಡಿಲ್ನಾಳ ಗ್ರಾಮದ ಕಾಂಗ್ರೆಸ್ ಬೂತ್ ಸಮಿತಿಯ ಸಭೆ

Suddi Udaya

ಸರಗಳ್ಳತನದ ಆರೋಪಿಯನ್ನು ಬಂಧಿಸಿ, ರೂ 5,05,000 ಮೌಲ್ಯದ ಸೊತ್ತನ್ನು ವಶಪಡಿಸಿದ ಉಪ್ಪಿನಂಗಡಿ ಠಾಣಾ ಪೊಲೀಸರು

Suddi Udaya

ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಸಂಭ್ರಮ ತಾಲೂಕಿನ ನಂಬರ್ 1 ವಾರಪತ್ರಿಕೆ ಸುದ್ದಿ ಉದಯ ಬಳಗದಿಂದ ಗೌರವಾರ್ಪಣೆ

Suddi Udaya
error: Content is protected !!