September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎನ್ ಡಿ ಎ ಫಲಿತಾಂಶ : ಗುರುವಾಯನಕೆರೆ ಎಕ್ಸೆಲ್ ವಿದ್ಯಾರ್ಥಿಗಳ ಮಹೋನ್ನತ ದಾಖಲೆ

ಗುರುವಾಯನಕೆರೆ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆಯೆನಿಸಿಕೊಂಡ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯ ಫೇಸ್ ಟೂ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ.


ಎನ್ ಡಿ ಎ ಪರೀಕ್ಷೆ ಬರೆದ ಸಮ್ಯಕ್ ವಿಜಯ್, ಸ್ವಸ್ತಿಕ್ ಎಂ ಜೈನ್, ಅಕ್ಷಯ್ ಎ, ಯತಿನ್ ಬಿ ಎಸ್ , ಪ್ರಜ್ವಲ್ ಗೌಡ ಆರ್ ಎಸ್, ಶಶಾಂಕ್ ಗೌಡ ಆರ್, ಅಭಿಷೇಕ್ ಅಡಪ್ಪ, ಲಕ್ಷ ಮಹಾಜನ್, ತೇಜಲ್ ವಿ, ಅಮೃತ್ ನಾಯಕ್, ಶಮಿತ್ ಗೌಡ ಎ ಎಸ್ ಇವರು ಎನ್ ಡಿ ಎ ಎಕ್ಸಾಂ ಫೇಸ್ ಒನ್ ನ್ನು ಯಶಸ್ವಿಯಾಗಿ ಬರೆದು, ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.

ನಿರಂತರವಾಗಿ ದೊಡ್ಡ ಮೊತ್ತದ ಸ್ಟೈಫಂಡ್ ಸಿಗುವ , ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ, ರಾಷ್ಟ್ರ ಮಟ್ಟದಲ್ಲಿ ಕೇವಲ 400 ಸೀಟ್ ಗಳಿರುವ ಈ ಪರೀಕ್ಷೆಗೆ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಿಸುತ್ತಾರೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಆಯ್ಕೆ ಎನ್ ಡಿ ಎ ಆಗಿರುತ್ತದೆ. ಅತ್ಯುತ್ತಮ ಟೀಚಿಂಗ್ – ಕೋಚಿಂಗ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ಎನ್ ಡಿ ಎ ಯನ್ನು ಕ್ಲಿಯರ್ ಮಾಡಲು ಸಾಧ್ಯ.

ಎಕ್ಸೆಲ್ ಕಾಲೇಜಿನ 11 ಜನ ವಿದ್ಯಾರ್ಥಿಗಳು ಒಂದೇ ಬಾರಿಗೆ ಎನ್ ಡಿ ಎ ಕ್ಲಿಯರ್ ಮಾಡಿರುವುದು ನಿಜಕ್ಕೂ ಅಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಎಕ್ಸೆಲ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ,ಪ್ರಾಂಶುಪಾಲರು, ಪ್ರಾಧ್ಯಾಪಕರು,ಸಂಯೋಜಕರಾದ ಜೋಸ್ಟಮ್ ಎ ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ನೆರಿಯ: ಶ್ರೀ ಕ್ಷೇತ್ರ ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya

ಮುಂಡಾಜೆ ಪ. ಪೂ. ಕಾಲೇಜು: ಜಾಗೃತ ಜಾಗೃತಿ ಸಪ್ತಾಹ

Suddi Udaya

ಮುಂಡಾಜೆ: ಮಲ್ಲಡ್ಕ ಸ.ಕಿ.ಪ್ರಾ. ಶಾಲೆಯಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ನಾವೂರು ವ್ಯಾಪ್ತಿಯಲ್ಲಿ 20 ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಧರಾಶಾಹಿ

Suddi Udaya

ಜೆಸಿಐ ಬೆಳ್ತಂಗಡಿ ಜೆಸಿ ಸಪ್ತಾಹ ಅಂಗವಾಗಿ ಗಣೇಶ್ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Suddi Udaya

ಸೋಣಂದೂರು: ಅಪರಿಚಿತ ವ್ಯಕ್ತಿ ಶವ ಪತ್ತೆ

Suddi Udaya
error: Content is protected !!