25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ಗುರುವಾಯನಕೆರೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇವರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಶಾರದಾ ರೈಯವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ರವರು ಕಾಲೇಜ್ ವಿದ್ಯಾರ್ಥಿಗಳಿಗೆ, ದುಶ್ಚಟಗಳಿಗೆ ಬಲಿಯಾದ ವಿದ್ಯಾರ್ಥಿಗಳ ಬದುಕು ಬಲು ನರಕದ ಬದುಕು, ಅಮಲು ಸೇವನೆಯಿಂದ ಮರಣ, ಅಪಘಾತ, ಆತ್ಮಹತ್ಯೆ ಮುಂತಾದವು ಸಂಭವಿಸುತ್ತದವೆ. ಪೋಷಕರಿಗೆ ತಮ್ಮ ಮಕ್ಕಳು ಮಾಣಿಕ್ಯವಿದ್ದಂತೆ ಆದ್ದರಿಂದ ಶಾಲಾ ಕಾಲೇಜುಗಳು ಶಿಕ್ಷಣದ ಪಾಠವನ್ನು ಹೇಳಿಕೊಟ್ಟರೆ, ಸ್ವಾಸ್ಥ್ಯ ಸಂಕಲ್ಪದಂತ ಕಾರ್ಯಕ್ರಮಗಳು ಮೌಲ್ಯಧಾರಿತ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ ಎಂಬ ಬಹಳ ಅರ್ಥಪೂರ್ಣವಾದ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ದುರಭ್ಯಾಸಗಳಿಗೆ ಬಲಿಯಾಗದಂತೆ ಪ್ರಮಾಣ ವಚನ ಮಾಡಿಸಲಾಯಿತು. ಶ್ರೀ. ಕ್ಷೇ. ಧ. ಗ್ರಾ ಯೋಜನೆ ಬಿ ಸಿ ಟ್ರಸ್ಟ್ (ರಿ) ಗುರುವಾಯನಕೆರೆ ತಾಲೂಕಿನ ಯೋಜನಾಧಿಕಾರಿಯವರಾದ ಅಶೋಕ್ ರವರು ಕಾರ್ಯಕ್ರಮ ದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಅವರು ಮಾತನಾಡಿ , ಮದ್ಯ,ಮಾದಕ ವಸ್ತುಗಳ ಬಗ್ಗೆ ಯುವ ಜನತೆ ಎಚ್ಚರದಲ್ಲಿರಬೇಕು. ಸ್ನೇಹಿತರೊಂದಿಗೆ ವಿನೋದಕ್ಕಾಗಿ ಪ್ರಾರಂಭವಾಗುವ ಮದ್ಯ, ಮಾದಕ ಬಳಕೆ ಕೊನೆಗೆ ಚಟವಾಗಿ ಬಿಟ್ಟು, ಚಟ್ಟವೇರಿಸಿ ಬಿಡುತ್ತವೆ ಎಂದರು.

ವಿದ್ಯಾರ್ಥಿನಿ ಅನುಜ್ಞಾ ಸಾಲಿಯಾನ್ ಪ್ರಾರ್ಥಿಸಿದರು. ಉಪನ್ಯಾಸಕರಾದ ಜಯರಾಮ್ ಹಾಗೂ ವರುಣ್ ದೇವ್ ನಿರೂಪಿಸಿದರು.ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಗುರುವಾಯನಕೆರೆ ವಲಯದ ಮೇಲ್ವಿಚಾರಕಿಯಾದ ಯಶೋಧ ಧನ್ಯವಾದ ಸಮರ್ಪಣೆ ಮಾಡಿದರು. ಸೇವಾ ಪ್ರತಿನಿಧಿ ಭಾರತೀ, ಕಾಲೇಜು ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.

Related posts

ಭೂಮಿ ಬಾನೊದ ಸೊರೊ ತುಳು ಜನಪದ ವಿಡಿಯೋ ಹಾಡು ಹಾಗೂ “ವಿಸ್ಮೃತಿ – ಐತಿಹಾಸಿಕ ಸ್ಮಾರಕಗಳ ಮನನ ಕನ್ನಡ ಅಲ್ಬಂ ಹಾಡು ಲೋಕಾರ್ಪಣೆ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಕನ್ಯಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ದೇಣಿಗೆ

Suddi Udaya

ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ ಇದರ ಸ್ವಂತ ಕಟ್ಟಡ “ಆಶಾಕಿರಣ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಸಂಘದ ಪ್ರಧಾನ ಕಚೇರಿ ಉದ್ಘಾಟನೆ

Suddi Udaya

ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ. 7 ಡಿವಿಡೆಂಟ್

Suddi Udaya

ವಾಣಿ ಕಾಲೇಜು: ಅಕ್ಷರವಾಣಿ ಭಿತ್ತಿಪತ್ರಿಕೆ ಅನಾವರಣ

Suddi Udaya

ಉಜಿರೆ : ಅನುಗ್ರಹ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ವ್ಯಕ್ತಿತ್ವ ವಿಕಸನ

Suddi Udaya
error: Content is protected !!