September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಕಂಡೊದ ಕಲೊಟ್ಟು ಬಿರುವೆರೆ ಗೊಬ್ಬು

ಲಾಯಿಲ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಲಾಯಿಲ ಮಹಿಳಾ ಬಿಲ್ಲವ ವೇದಿಕೆ ಲಾಯಿಲ ಮತ್ತು ಯುವ ಬಿಲ್ಲವ ವೇದಿಕೆ ಲಾಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಕಂಡೊದ ಕಲೊಟ್ಟು ಬಿರುವೆರೆ ಗೊಬ್ಬು ಎಂಬ ಕೆಸರಿನ ಕ್ರೀಡಾಕೂಟವು ಇತ್ತೀಚೆಗೆ ಲಾಯಿಲ ಗ್ರಾಮದ ಹಂದೆವೂರು ಬೊಟ್ಟು ಎಂಬಲ್ಲಿ ನಡೆಯಿತು.

ಬೆಳಿಗ್ಗೆ ಕೈಪ್ಲೋಡಿಯ ಕೃಷ್ಣಪ್ಪ ಪೂಜಾರಿಯವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಕಂಬಳದ ಕೋಣಗಳನ್ನು ಬ್ಯಾಂಡ್ ವಾಲಗದ ಮೂಲಕ ಗದ್ದೆಗೆ ಇಳಿಸಿ, ಉಳುಮೆ ಮಾಡಿ, ಕೋಳಿ ಅಂಕದ ಪ್ರಾತಕ್ಷಿಕೆ ನಡೆಸಲಾಯಿತು. ಹಿರಿಯರಾದ ದರ್ಖಾಸು ಸಂಜೀವ ಪೂಜಾರಿಯವರು ಗದ್ದೆಗೆ ಹಾಲು, ತುಪ್ಪ, ಎಳನೀರನ್ನು ಎರೆಯುವ ಮೂಲಕ ಕೆಸರಿನ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಮಧ್ಯಾಹ್ನ ಬಿ ಲಕ್ಷ್ಮಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಇದರ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ., ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಶ್ರೀಮತಿ ಸುಮತಿ ಪ್ರಮೋದ್, ಎಂ. ಕೆ. ಪ್ರಸಾದ್, ಗುರುರಾಜ್ ಗುರಿಪಳ್ಳ ಹಾಗೂ ಸಂಘದ ನಿರ್ದೇಶಕರು ಮತ್ತು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಸಂತ್ ಸುವರ್ಣ ಲಾಯಿಲ, ಬಹುಮಾನ ವಿತರಕರಾಗಿ ಶೈಲೇಶ್ ಆರ್. ಜೆ. ಭಾಗವಹಿಸಿದ್ದರು. ಕಾರ್ಯದರ್ಶಿ ಸೌಮ್ಯ ಲಾಯಿಲ ಸ್ವಾಗತಿಸಿ, ಸ್ನೇಕ್ ಅಶೋಕ್ ವಂದಿಸಿದರು. ಜಯಾನಂದ ಅಂಕಾಜೆಯವರು ನಿರೂಪಿಸಿದರು.

Related posts

ಎಸ್‌ಡಿಎಂ ಪಾಲಿಟೆಕ್ನಿಕ್ ಉಜಿರೆಯಲ್ಲಿ ಕ್ಯಾಂಪಸ್ ನೇಮಕಾತಿ ಚಾಲನೆ

Suddi Udaya

ನಿಡ್ಲೆ ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಹಾಗೂ ಹಣ್ಣು ಹಂಪಲು ಸಸಿಗಳ ವಿತರಣೆ

Suddi Udaya

ಬಳಂಜ ಅಮೃತ ಮಹೋತ್ಸವ ಸಮಿತಿಯಿಂದ ರಕ್ಷಿತ್ ಶಿವರಾಮ್ ರವರನ್ನು ಭೇಟಿ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಬೆಳ್ತಂಗಡಿ: ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ; ಶಾಸಕ ಹರೀಶ್ ಪೂಂಜರಿಂದ‌ ಅಧಿಕಾರಿಗಳೊಂದಿಗೆ ಸಭೆ

Suddi Udaya

ಕಳಿಯ : ಬೆರ್ಕೆತ್ತೋಡಿ ಬಾಕಿಮಾರು ಗಿರಿಯಪ್ಪ ಗೌಡರ ಮನೆಗೆ ಮರ ಬಿದ್ದು ಹಾನಿ

Suddi Udaya
error: Content is protected !!