September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಹಾಗೂ ಸನ್ಮಾನ

ಮಿತ್ತಬಾಗಿಲು: ಶ್ರೀ ದುರ್ಗಾಪರಮೇಶ್ವರಿ/ ಶ್ರೀ ದುರ್ಗಾದೇವಿ ಯಕ್ಷಗಾನ ಮಂಡಳಿ ಕೊಲ್ಲಿ ಇವರಿಂದ ಕೊಲ್ಲಿ ಕ್ಷೇತ್ರದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ವಹಿಸಿದರು.

ಮುಖ್ಯ ಅತಿಥಿಗಳಾಗಿ ಕಿರಣ್ ಚಂದ್ರ ಡಿ. ಪುಷ್ಪಗಿರಿ , ವಾಸುದೇವರಾವ್ ಕಕ್ಕೆನೇಜಿ ಆಡಳಿತ ಮೊಕ್ತೇಸರರು ಸದಾಶಿವ ದೇವಸ್ಥಾನ, ಕೂಡಬೆಟ್ಟು , ಸತೀಶ್ ಕಾಮತ್ ಗೌರವಾಧ್ಯಕ್ಷ ಆಡಳಿತ ಸಮಿತಿ ಕೊಲ್ಲಿ, ದಾಸಪ್ಪ ಗೌಡ ಅಧ್ಯಕ್ಷ ಆಡಳಿತ ಸಮಿತಿ ಕೊಲ್ಲಿ, ರಂಜಿತ್ ಕುಮಾರ್ ಅರಣ್ಯಾಧಿಕಾರಿ, ಬೆಳ್ತಂಗಡಿ, ರವಿ ಸುವರ್ಣ ಅಧ್ಯಕ್ಷ ಯಕ್ಷಗಾನ ಮಂಡಳಿ ಕೊಲ್ಲಿ, ವಿನಯಚಂದ್ರ ಸೇನರಬೆಟ್ಟು ಅಧ್ಯಕ್ಷ ಗ್ರಾಮ ಪಂಚಾಯತ್ ಮಿತ್ತಬಾಗಿಲು, ಶ್ರೀಮತಿ ವಿಜಯಲಕ್ಷ್ಮೀ ಉಪಾಧ್ಯಕ್ಷೆ ಗ್ರಾಮ ಪಂಚಾಯತ್ ಮಿತ್ತಬಾಗಿಲು ಉಪಸ್ಥಿತರಿದ್ದರು.

ಸೋಮಪ್ಪ ಪೂಜಾರಿ ಬಂಡಾರಿಕೋಡಿ ಪ್ರಸ್ತಾವಿಕ ಮಾತನಾಡಿದರು. ಈ ವೇಳೆ ನಿವೃತ್ತ ಯೋಧ ಬಾಲಚಂದ್ರ ಗೌಡ ಪುತ್ತೂರು ಇವರನ್ನು ಗೌರವಿಸಲಾಯಿತು.

ಕೊರಗಪ್ಪ ಶೆಟ್ಟಿ ಅರ್ವ ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದರು, ಚಂದ್ರಶೇಖರ್ ಯಕ್ಷಗಾನ ಕಲಾವಿದರು ಮುಂಡಾಜೆ, ದೇವರಾಜ್ ಅಮೈ ರಾಷ್ಟ್ರಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕರು , ಕೇಶವ ಬಿ. ಷಡರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕರು, ವಿಠಲ ನಿವೃತ್ತ ಪ್ರಭಾರ ಮುಖ್ಯಶಿಕ್ಷಕರು ಕಿಲ್ಲೂರು ಶಾಲೆ (ಪಡುಬಿದ್ರೆ) ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮೀನಾ ಮಾಲೂರು , ಕೋಶಾಧಿಕಾರಿ ಸತೀಶ್ ಪೂಜಾರಿ ಮಾಲೂರು, ಜತೆ ಕಾರ್ಯದರ್ಶಿ ಯಶೋಧ ಕಿಲ್ಲೂರು, ಕಾರ್ಯದರ್ಶಿ ಗೋಪಾಲ ಶಾಂತಿಗುಡ್ಡೆ, ಗೌರವ ಸಲಹೆಗಾರರಾದ ಧರ್ಣಪ್ಪ ಶೆಟ್ಟಿ, ಶ್ರೀಧರ ಪೂಜಾರಿ ಶಿರ್ಲಾಲು, ಸೋಮಪ್ಪ ಪೂಜಾರಿ ಬಂಡಾರಿಕೋಡಿ, ನಾರಾಯಣ ಗೌಡ ನೇತ್ರಕೊಡಂಗೆ, ಸೂರಪ್ಪ ಗೌಡ ನಡ್ತಿಕಲ್ಲು, ಸಂಪತ್ ಪೂಜಾರಿ ಕಜಕೆ, ಪೂಣಿಮಾ ಡಿ. ಶೆಟ್ಟಿ ಕೊಲ್ಲಿ, ಭಾಸ್ಕರ ಬಂಗಾಡಿ ಯಕ್ಷಗುರುಗಳು ಹಾಗೂ ಸಮಿತಿಯ ಸದಸ್ಯರು , ಊರವರು ಉಪಸ್ಥಿತರಿದ್ದರು.

ಜಯಂತ್ ಹೆಗ್ಡೆ, ವಿನಯ್ ನಡುಬೈಲು ಕಾರ್ಯಕ್ರಮ ನಿರೂಪಿಸಿದರು.

Related posts

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಬೆಳ್ತಂಗಡಿ ಪ. ಪಂ. ವ್ಯಾಪ್ತಿಯಲ್ಲಿ ಮೊಬೈಲ್ ಆಪ್ ಮೂಲಕ ಸಮೀಕ್ಷೆ

Suddi Udaya

ಗೇರುಕಟ್ಟೆ : ಪರಪ್ಪು ಮಸೀದಿಯಲ್ಲಿ ತಾಜುಲ್ ಉಲಮಾ ಉಳ್ಳಾಲ ತಂಙಳ್ ಉರೂಸ್ ಪೋಸ್ಟರ್ ಬಿಡುಗಡೆ

Suddi Udaya

ನೆರಿಯ: ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಗೆ ಡಿವೈಎಸ್ಪಿ ಸಿ.ಕೆ ರೋಹಿಣಿ ಭೇಟಿ

Suddi Udaya

ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ಗುರುವಾಯನಕೆರೆ ಅದ್ಭುತ ಸಾಧನೆ

Suddi Udaya

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯವೈಖರಿಗೆ ಪ್ರಧಾನಿಯವರಿಂದ ಮೆಚ್ಚುಗೆ

Suddi Udaya

ಡಿ.28-ಜ.1: ಓಡಿಲ್ನಾಳ ಕಿರಾತಮೂರ್ತಿಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!