23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪರಸ್ಪರ ಪರಿಚಯ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಈ ವರ್ಷದ ನೂತನ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ಪರಸ್ಪರ ಪರಿಚಯ ಕಾರ್ಯಕ್ರಮವನ್ನು ಅ. 3 ರಂದು ಕಾಲೇಜಿನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಡಾ. ಜಿ. ಅರುಣ್ ಮಯ್ಯ, ಪ್ರಾಧ್ಯಾಪಕರು ಮತ್ತು ಡೀನ್, ಕಸ್ತೂರಬಾ ವೈದ್ಯಕೀಯ ಕಾಲೇಜು, ಮಣಿಪಾಲ ಇವರು ಇತರೇ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಶೆಟ್ಟಿ ಅವರು ಮಾತನಾಡಿ, ನ್ಯಾಚುರೋಪತಿ ಶಿಕ್ಷಣದ ಮಹತ್ವ ಮತ್ತು ಅದರ ವಿಶಾಲವಾದ ಅವಕಾಶಗಳ ಕುರಿತು ವಿವರಿಸಿದರು. ಉಪಪ್ರಾಂಶುಪಾಲರಾದ ಡಾ. ಸುಜಾತಾ ಕೆ ಜೆ, ಹೊಸ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸ್ವಾಗತ ಕೋರಿದರು.


ಕಾರ್ಯಕ್ರಮದಲ್ಲಿ ಡಾ. ಎಚ್. ಬಿ. ಶಶಿಧರ್, ಪ್ರಾಧ್ಯಾಪಕರು, ರೋಗಶಾಸ್ತ್ರ ವಿಭಾಗ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು; ಡಾ. ಎಚ್. ಎನ್. ದಿನೇಶ್, ಪ್ರಾಧ್ಯಾಪಕರು/ಡೀನ್ ಮತ್ತು ನಿರ್ದೇಶಕರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು; ಹಾಗೂ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ ಡಾ. ಮನೋಜ್ ಕುಟ್ಟೇರಿ, ವೈದ್ಯಕೀಯ ನಿರ್ದೇಶಕರು ಮತ್ತು CEO, ಆತ್ಮನಾಥನ್ ವೆಲ್‌ನೆಸ್ ಸೆಂಟರ್, ಪುಣೆ ಇವರುಗಳು ಉಪಸ್ಥಿತರಿದ್ದರು. ಇವರು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ವ್ಯಾಪಕ ಅವಕಾಶಗಳ ಕುರಿತು ಹಾಗೂ ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು.


ಡಾ. ಬಿಂದು, ಡೀನ್, ಅವರು ಸಂಸ್ಥೆಯ ಬಗೆಗಿನ ಸವಿಸ್ತಾರ ಮಾಹಿತಿ, ಕಾಲೇಜಿನ ಬೋಧಕ ವರ್ಗ ಮತ್ತು ಸಿಬ್ಬಂದಿ ವರ್ಗದವರನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಧ.ಮ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ಡಾ. ಗೀತಾ ಬಿ. ಶೆಟ್ಟಿ, ಪ್ರಾಧ್ಯಾಪಕರು ಮತ್ತು ನ್ಯೂಟ್ರಿಷನ್ ವಿಭಾಗದ ಡೀನ್ ಧನ್ಯವಾದವಿತ್ತರು.

Related posts

ಗುರುವಾಯನಕೆರೆಯಲ್ಲಿ “ಆರ್ವಿಕ್” ಜ್ಯುವೆಲ್ಲರ್ಸ್ & ವರ್ಕ್ಸ್ ಶುಭಾರಂಭ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಪಡಂಗಡಿ ಯುವಕ, ಎಲೆಕ್ಟ್ರಿಷಿಯನ್ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಜೂ. 24: ಪಟ್ರಮೆ ಹಾಗೂ ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ

Suddi Udaya

ಮತದಾನ ಜಾಗೃತಿಗಾಗಿ ಸೆಲ್ಪಿ ಪಾಯಿಂಟ್’ನಾನು ಮತದಾನ ಮಾಡುವೆ ನೀವು ಮಾಡಿ’ ಸಂದೇಶ ಸಾರಿದ ತಾ.ಪಂ.‌ಕಾಯ೯ನಿವಾ೯ಹಣಾಧಿಕಾರಿ ಹಾಗೂ ಸಿಬ್ಬಂದಿಗಳು

Suddi Udaya

ಆರತಕ್ಷತೆ ಊಟ ಸೇವಿಸಿದ ಮಂದಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು: ಓರ್ವೆ ಮಹಿಳೆ ಸಾವು-ಮತ್ತೋರ್ವೆ ಗಂಭೀರ

Suddi Udaya
error: Content is protected !!