September 6, 2026
ನಿಧನ

ನಾರಾವಿ: ಹೊಸಮನೆಯ ಜಿನರಾಜ ಪೂವಣಿ ನಿಧನ

ನಾರಾವಿ: ಇಲ್ಲಿಯ ಹೊಸಮನೆಯ ಹಿರಿಯರು ಹಾಗೂ ಆದರ್ಶ ಮತ್ತು ಸುಸಂಸ್ಕೃತ ನಡವಳಿಕೆಯ ಸ್ನೇಹಪರ ವ್ಯಕ್ತಿತ್ವದ ಜಿನರಾಜ ಪೂವಣಿಯವರು(91ವ) ಮಂಗಳವಾರ ಸಂಜೆ ನಿಧನರಾದರು.

ಮದುವೆಯಾಗಿ ಕೆಲವೇ ಕೆಲವು ವರ್ಷಗಳಲ್ಲಿ ಪತ್ನಿಯನ್ನು ಕಳೆದುಕೊಂಡರಾದರೂ, ಮರು ವಿವಾಹಕ್ಕೆ ಎಷ್ಟೇ ಒತ್ತಡವಿದ್ದರೂ ತನ್ನ ಪುಟ್ಟ ನಾಲ್ಕು ಮಕ್ಜಳ‌ ಭವಿಷ್ಯಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ತ್ಯಾಗಮಯಿ ಎನಿಸಿಕೊಂಡವರು. ಎಳೆಯ ಮಕ್ಕಳನ್ನು ಬಿಟ್ಟು ಉದ್ಯೋಗಕ್ಕೆ ಹೋಗುವುದು ಕಷ್ಟ ಎಂಬುದನ್ನರಿತು ಸಣ್ಣದಾದ ಹೋಟೆಲ್ ನಡೆಸುತ್ತಾ ನಾಲ್ಕು ಮಕ್ಕಳಿಗೂ ತಾಯಿ ಇಲ್ಲ ಎನ್ನುವ ಕೊರಗು ಒಂದು ದಿನವೂ ಬರದಂತೆ ಸಾಕಿ ಸಲಹಿದ ಪರಿಯಂತೂ ಅವರ ಪ್ರಾಂಜಲ ಗುಣಮನಸ್ಸಿಗೆ ಪ್ರತಿಬಿಂಬವಾಗಿದೆ. ಬಡತನ ಬೇಗೆಯ ನಡುವೆಯು ಪತ್ನಿ ಕಳೆದುಕೊಂಡ ಸಂಕಟದಲ್ಲಿಯೂ ಕಷ್ಟವೆಲ್ಲಾ ನನಗಿರಲಿ ಎಂದು ಕಷ್ಟವನ್ನೆಲ್ಲ ಮನದಲ್ಲೆ ನುಂಗಿಕೊಂಡು ಜೀವನ ನಡೆಸಿದ ಪುಣ್ಯಯೋಗಿ ಜಿನರಾಜ ಪೂವಣಿಯವರು‌.

ತಾನು ಹಸಿದುಕೊಂಡಿದ್ದರೂ, ಇನ್ನೊಬ್ಬರ ಸಂಕಷ್ಟಕ್ಕೆ ಸದಾ ಮಿಡಿಯುತ್ತಿದ್ದ ಅವರ ನಿಸ್ವಾರ್ಥ ಮನಸ್ಸು ಮತ್ತು ಗುಣಸ್ವಭಾವ ಅನುಕರಣೀಯ ಮತ್ತು ಅಭಿನಂದನೀಯ.

ಮೂವರು ಸುಪುತ್ರಿಯರು , ಓರ್ವ ಪುತ್ರ ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧುಬಳಗವನ್ನು ಅಗಲಿದ್ದಾರೆ.

Related posts

ಆಟೋ ಚಾಲಕ ಯಶೋಧರ ಗೌಡ ಅಸೌಖ್ಯದಿಂದ ನಿಧನ

Suddi Udaya

ಗರ್ಡಾಡಿ ಧರ್ಮಣ್ಣ ಸಾಲಿಯಾನ್ ನಿಧನ

Suddi Udaya

ಬಳಂಜ ಬೊಂಟ್ರೋಟ್ಟು ಗುತ್ತು ಮನೆತನದ ಶಾಂಭವಿ ಅನಾರೋಗ್ಯದಿಂದ ನಿಧನ

Suddi Udaya

ಶಿರ್ಲಾಲು:ಕೃಷಿಕ ಮುಡ್ಜಾಲು ವಸಂತ ಪೂಜಾರಿ ನಿಧನ

Suddi Udaya

ಕಾರ್ಯಕ್ರಮ ನಿರೂಪಕ ಅರುಣ್ ಗರ್ಡಾಡಿ ಅಸೌಖ್ಯದಿಂದ ನಿಧನ

Suddi Udaya

ಸಕಲೇಶಪುರದ ಯುವಕ ನಾಪತ್ತೆ ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

Suddi Udaya
error: Content is protected !!