26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ : ಸೌಜನ್ಯ ತಾಯಿ ದೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಅ. 9 ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಹೋರಾಟಗಾರ ಪ್ರಸನ್ನ ರವಿ ಜತೆ ಠಾಣೆಗೆ ಬಂದ ಕುಸುಮಾವತಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವ ಆರು ಮಂದಿ ವಿರುದ್ದ ದೂರು ನೀಡಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಪ್ರಸನ್ನ ರವಿ, 13 ಜನರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಸೌಜನ್ಯ ತಾಯಿ ಕುಸುಮಾವತಿ ಅವರ ತೇಜೋವಧೆ ಮಾಡುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಕೆಲವು ದಿನಗಳ ಹಿಂದೆಯೇ ನಾನು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದೆ ಇದಾದ ಬಳಿಕವೂ ಇವರಲ್ಲಿ 6 ಮಂದಿ ತಮ್ಮ ದುಷ್ಕೃತ್ಯ ಮುಂದುವರಿಸಿದ್ದಾರೆ. ಹೀಗಾಗಿ ವೈಯಕ್ತಿಕವಾಗಿ ಅಂಥವರ ವಿರುದ್ಧ ದೂರು ನೀಡುವಂತೆ ಎಸ್‌ಪಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇವತ್ತು 6 ಮಂದಿ ವಿರುದ್ಧ ದೂರು ನೀಡಿದ್ದೇನೆ ಎಂದರು

ಕಾನೂನು ಸಲಹೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಇನ್ನು ಮುಂದೆಯೂ ಅವರು ತೇಜೋವಧೆ ಮುಂದುವರಿಸಿದರೆ ಆಗ ನಾವು ಕಾನೂನು ಕೈಗೆತ್ತಿಕೊಳ್ಳಲು ಅವಕಾಶವನ್ನು ಪೊಲೀಸರೇ ಸೃಷ್ಟಿ ಮಾಡಬಾರದು. ಎಸ್‌ಪಿ ಅವರ ಮಾತಿನ ಮೇಲೆ ನಮಗೆ ಭರವಸೆ ಇದೆ. ಅವರು ಈ ಕೃತ್ಯದ ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸಿದ್ದು, ಕಾನೂನು ಕ್ರಮದ ಭರವಸೆ ನೀಡಿದ್ದಾರೆ ಎಂದರು.
ತೇಜೋವಧೆ ಮಾಡುತ್ತಿರುವ ಕೆಲವರು ಅದು ತಮ್ಮ ಖಾತೆಯಲ್ಲ, ನಕಲಿ ಖಾತೆ ಎಂದು ಸಮಜಾಯಿಷಿ ನೀಡುತ್ತಿರುವುದು ಗೊತ್ತಾಗಿದೆ. ನಕಲಿ ಖಾತೆಯೇ ಆಗಿದ್ದರೆ ಅದರಲ್ಲಿ ಆ ವ್ಯಕ್ತಿಯ ದಿನಚರಿಯ ಎಲ್ಲ ಫೋಟೋಗಳು ದಿನಂಪ್ರತಿ ಅಪ್ ಲೋಡ್ ಆಗುವುದಾದರೂ ಹೇಗೆ ? ನಕಲಿ ಖಾತೆ ಎಂದಾದರೆ ಆ ವ್ಯಕ್ತಿ ಪೊಲೀಸ್ ದೂರು ನೀಡಿ, ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ದುರುಪಯೋಗ ಮಾಡುತ್ತಿದ್ದಾರೆ ಎಂದು ಪೊಲೀಸ್ ದೂರು ನೀಡಬಹುದಿತ್ತಲ್ವ ಎಂದು ಪ್ರಸನ್ನ ರವಿ ಪ್ರಶ್ನಿಸಿದರು.

Related posts

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಜನಜಾತಿಯ ಗರೀಮಾ ಉತ್ಸವ

Suddi Udaya

ರುಡ್ ಸೆಟ್ ಶಿಬಿರಾರ್ಥಿಗಳಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಜು. 15: ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಚಾರ್ಮಾಡಿ ಹಾಗೂ ಮಿತ್ತಬಾಗಿಲು ಗ್ರಾ.ಪಂ.ನಲ್ಲಿ ಜನಸ್ಪಂದನ ಕಾರ್ಯಕ್ರಮ

Suddi Udaya

ನಾರಾವಿ ವಲಯ ಬಂಟರ ಸಂಘದ ಕುತ್ಲೂರು ಗ್ರಾಮ ಸಮಿತಿ ಸಭೆ

Suddi Udaya

ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಅರಸಿನಮಕ್ಕಿ ಪಂ.ಅ. ಅಧಿಕಾರಿಯವರಿಗೆ ಮನವಿ

Suddi Udaya
error: Content is protected !!