25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರಿಗೆ ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದಿಂದ ಗೌರವಾರ್ಪಣೆ

ಬೆಳ್ತಂಗಡಿ: ಕರ್ನಾಟಕ ಸರಕಾರದ ಕಾರ್ಮಿಕ ಸಚಿವರು ಉತ್ಸಾಹಿ ಕಾರ್ಮಿಕ ಇಲಾಖೆಯಲ್ಲಿ ಜನೋಪ ಯೋಗಿ ಯೋಜನೆಗಳನ್ನು ತಂದು ಮೋಟಾರ್ ಸಾರಿಗೆ ಸಂಬಂಧಿತ ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಗಳನ್ನು ನೀಡಿದ ಸಂತೋಷ್ ಲಾಡ್ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ಜಿಲ್ಲಾ ಸಂಘ ಹಾಗೂ ವಲಯಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಳಿಂದ ಶಾಲು ಹೊದಿಸಿ ಹೂಗುಚ್ಛ ನೀಡಿ ಫಲ ಪುಷ್ಪಾದಿ ಗೌರವಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ನಾಜಿಯ ಸುಲ್ತಾನ್ ಹಾಗೂ ಕಾರ್ಮಿಕ ಅಧಿಕಾರಿ ಉಪವಿಭಾಗ ಶ್ರೀಮತಿ ವಿಲ್ಮಾ ಎಲಿಜಬೆತ್ ತಾವ್ರ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ವಲಯಗಳಿಂದ ಉತ್ತಮವಾದ ಪ್ರೋತ್ಸಾಹ ದೊರೆಯಿತು. ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಪುತ್ತೂರು, ಕಡಬ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು ,ಸದಸ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಗ್ಯಾರೇಜ್ ಮಾಲಕರ ಸಂಘದ ಕೊಡುಗೆಯನ್ನು ನೀಡಿದರು. ಕಾರ್ಮಿಕ ಇಲಾಖೆಯ ಈ ಕಾರ್ಯಕ್ರಮವು ಬಹಳ ಅಚ್ಚುಗಟ್ಟಾಗಿ ನೂರಾರು ಕಾರ್ಮಿಕರ ಉಪಸ್ಥಿತಿಯಲ್ಲಿ ನಡೆಯಿತು.

Related posts

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಗುರು ವಸಂತ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಸ್ಪರ್ಧೆ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ

Suddi Udaya

ಕೊಕ್ಕಡ, ಅರಸಿನಮಕ್ಕಿಯಲ್ಲಿ ಹರೀಶ್ ಪೂಂಜರ ಬಿರುಸಿನ ಪ್ರಚಾರ ಸಭೆ

Suddi Udaya

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ಉಜಿರೆ: ಪಾಂಡುರಂಗ ಕಾಕತ್ಕರ್ ನಿಧನ

Suddi Udaya
error: Content is protected !!