ಉಜಿರೆ: ಉಜಿರೆ ಶಾಂತಿನಗರ ನಿವಾಸಿ,ನಿವೃತ್ತ ಕಾಫಿ ಬೋರ್ಡ್ ಅಧಿಕಾರಿ ಸೀತಾರಾಮ ಪುತ್ರಾಯ ( 77 ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಅ 9 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು .
ಸರಳ,ಸಾತ್ವಿಕ ಸ್ವಭಾವದ ಅವರು ಕೊಡುಗೈ ದಾನಿಯಾಗಿ ತುಳು ಶಿವಳ್ಳಿ ಸಂಘಟನೆಯಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದರು. ಕಾಫಿ ಬೋರ್ಡ್ ನಲ್ಲಿ ಸೂಪರ್ವೈಸರ್, ಫೀಲ್ಡ್ ಆಫೀಸರ್, ಅಧಿಕಾರಿಯಾಗಿ ಚಿಕ್ಕಮಗಳೂರು, ಬೇಲೂರು, ಹಾಸನ, ಸಕಲೇಶಪುರ ಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಅವರು ಪತ್ನಿ ಲತಾ ಸೀತಾರಾಮ ಪುತ್ರಾಯ ,, ಪುತ್ರ ಹರ್ಷ ಎಸ್ ಪಿ, ,, ಪುತ್ರಿ ದಿವ್ಯ ಸುಧೀರ್ ಹಾಗು ಕುಟುಂಬ ವರ್ಗವನ್ನು ಅಗಲಿದ್ದಾರೆ.











