ಅಂಡಿಂಜೆ ಗ್ರಾಮದ ಕಂಚ ಎಂಬಲ್ಲಿ ಟಿಪ್ಪರ್ ವಾಹನದಲ್ಲಿ ಅಕ್ರಮ ಮರಳು ಸಾಗಟ ನಡೆಸುತ್ತಿದ್ದ ವೇಳೆ ವೇಣೂರು ಪೊಲೀಸರು ದಾಳಿ ನಡೆಸಿದ ಘಟನೆ ಅ.10 ರಂದು ನಡೆದಿದೆ.
ಘಟನೆ ವಿವರ: ಪೊಲೀಸ್ ಉಪನಿರೀಕ್ಷಕ ಅಕ್ಷಯ್ ಸಿಬ್ಬಂದಿಗಳೊಂದಿಗೆ ಅ.10 ರಂದು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ದೊರೆತ ಖಚಿತ ಮಾಹಿತಿ ಮೇರೆಗೆ ಅಂಡಿಂಜೆ ಗ್ರಾಮದ ಕಂಚ ಎಂಬಲ್ಲಿಗೆ ಬೆಳಿಗ್ಗೆ ಆರೋಪಿತರುಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು ಪೊಲೀಸ್ ಉಪನಿರೀಕ್ಷಕ ಅಕ್ಷಯ್ ರವರನ್ನು ಕಂಡು ಓಡಿ ಪರಾರಿಯಾಗಿದ್ದು ಸ್ಥಳದಲ್ಲಿ ಆರೋಪಿತರುಗಳು ನದಿ(ತೋಡು) ಯಿಂದ ಅಕ್ರಮ ಮರಳುಗಾರಿಕೆ ನಡೆಸಿ ಟಿಪ್ಪರ್ ವಾಹನ ನಂಬ್ರ KL05V0939 ನೇದರಲ್ಲಿ ಅರ್ಧದಷ್ಟು ಲೋಡ್ ಮಾಡಿ ಸುಮಾರು ಒಂದೂವರೆ ಯೂನಿಟ್ ಮರಳು ತುಂಬಿಸಿದ್ದು ಇದರ ಅಂದಾಜು ಮೌಲ್ಯ 7,000/-ರೂ ಆಗಬಹುದು.











