25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪದ್ಮುಂಜ ಹಾಲು ಉತ್ಪಾದಕರ ಸ. ಸಂಘದಿಂದ ರಾಸುಗಳ ಭ್ರೂಣ ವರ್ಗಾವಣೆ ಕಾರ್ಯಕ್ರಮ

ಪದ್ಮುಂಜ: ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ , ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ದ.ಕ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ಪದ್ಮುಂಜ ಹಾಲು ಉತ್ಪಾದಕರ ಸ.ಸಂಘದ ನೇತೃತ್ವದಲ್ಲಿ ರಾಸುಗಳ ಭ್ರೂಣ ವರ್ಗಾವಣೆ ಕಾರ್ಯಕ್ರಮ ಸಂಘದ ನಿರ್ದೇಶಕರಾದ ರಾಜೇಶ್ ಜೈನ್ ಅಡೆಂಜ ರವರ ಮನೆಯಲ್ಲಿ ಅ.12ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಪದ್ಮುಂಜ ಸಿ.ಎ ಬ್ಯಾಂಕ್ ನಿವೃತ್ತ ಮ್ಯಾನೇಜರ್ ರಘುಪತಿ ಭಟ್ ಅನಾಬೆ ನೆರವೇರಿಸಿದರು.

ಡಾ| ಜಿತೇಂದ್ರ ಪ್ರಸಾದ್ , ಡಾ| ರಾಜ್ ಕುಮಾರ್, ಡಾ| ಶುಭಂ ಇವರ ನೇತೃತ್ವದಲ್ಲಿ 9 ರಾಸುಗಳಿಗೆ ಭ್ರೂಣ ವರ್ಗಾವಣೆ ಮಾಡಲಾಯಿತು.

ಎಂ. ಜಯರಾಮ್ ಶೆಟ್ಟಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ , ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಶಕರಾದ ಉಮೇಶ್ , ರಮಾನಂದ ಸುನೀಲ್ ಕುಮಾರ್, ಪುರುಷೋತ್ತಮ ಗೌಡ, ಕೃಷ್ಣ ನಾಯ್ಕ, ಶ್ರೀಮತಿ ಶಾರದಾ, ಪ್ರತಿಮಾ, ಸಂಘದ ಪ್ರಭಾರ ಕಾರ್ಯದರ್ಶಿ ಸತೀಶ್ ಕುಮಾರ್, ಹಾಗೂ ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts

ಸಾವ್ಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವಿನ ಅವಶೇಷ ಪತ್ತೆ: ಕೇರಳ ಮೂಲದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು

Suddi Udaya

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

Suddi Udaya

ಪಾಲಡ್ಕ ಯಕ್ಷಮಿತ್ರ ಯಕ್ಷಗಾನ ಬಯಲಾಟ ಸಮಿತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಕಡಿದು ಬಿದ್ದ ವಿದ್ಯುತ್ ತಂತಿ, ಬೈಕ್ ಸವಾರರು ಪಾರು

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಭಾರಿ ರಿಯಾಯಿತಿ

Suddi Udaya
error: Content is protected !!