22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಾ. ರೋಹನ್ ದೀಕ್ಷಿತ್ ರೋಟರೀ ಕ್ಲಬ್ ಸದಸ್ಯರಾಗಿ ಪದಗ್ರಹಣ

ಉಜಿರೆ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಇಎನ್ ಟಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ರೋಹನ್ ದೀಕ್ಷಿತ್ ರವರು ಅ.12 ರಂದು ರೋಟರಿ ಕ್ಲಬ್ ಬೆಳ್ತಂಗಡಿಯ ಸದಸ್ಯರಾಗಿ ಸೇರಿದರು.

ಮುಂದಿನ ವರ್ಷದ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಶಶಿಧರ್ ಡೋಂಗ್ರೆಯವರು ಈ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿ ಶುಭ ಹಾರೈಸಿದರು.
ಕೋಶಾಧಿಕಾರಿ ರೋ| ನಾರಾಯಣ ಪೈಯವರು, ತಮ್ಮ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಭವ್ಯ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಪ್ರಾರಂಭದಲ್ಲಿ, ಆ್ಯನ್ ಗೀತಾ ಪ್ರಕಾಶ ಪ್ರಭುರವರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋ. ಪ್ರೊ.ಪ್ರಕಾಶ ಪ್ರಭುಗಳು ಸ್ವಾಗತಿಸಿದರು. ಎಸ್.ಡಿ.ಎಂ ಆಸ್ಪತ್ರೆಯ ಚೀಫ್ ಮೆಡಿಕಲ್ ಆಫೀಸರ್ ಡಾ ಸಾತ್ವಿಕರವರು ಡಾ.ರೋಹನ ದೀಕ್ಷಿತರನ್ನು ಸಭೆಗೆ ಪರಿಚಯಿಸಿದರು. ಡಾ.ರೋಹನ್ ರವರು ತಮಗೆ ಇಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಸದಸ್ಯತ್ವವನ್ನು ನೀಡಿದುದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಡಾ. ಎಂ.ಎಂ ದಯಾಕರರು ಧನ್ಯವಾದವಿತ್ತರು. ರೋಟರಿ ಹಿರಿಯ ಸದಸ್ಯರಾದ ಪುಂಡಲೀಕ ಭಟ್, ಡಾ. ನಿಖಿತ, ರೋಟರೀ ಸದಸ್ಯರು, ಆ್ಯನ್ಸ್ ಗಳು, ಆ್ಯನೆಟ್ಗಳು ಭಾಗವಹಿಸಿದರು.

ಡಾ. ಅಂಕಿತಾ ಭಟ್, ಗೀತಾ ಪ್ರಭು,ಲಿಲ್ಲಿ ಆ್ಯಂಟೋನಿ,ಸುಜಾತ ಅಣ್ಣಿ ಪೂಜಾರಿ, ವೀಣಾ ಮಯ್ಯ, ಡಾ ಶ್ರೀಹರಿ ಮತ್ತು ಪ್ರೊ. ಪ್ರಕಾಶ ಪ್ರಭು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

Related posts

ಮದ್ದಡ್ಕ ಸಮೀಪ ನೇರಳಕಟ್ಟೆಯಲ್ಲಿ ಚಿನ್ನಾಭರಣ ಕಳವು ಪ್ರಕರಣ: ಅಂದಾಜು 56 ಗ್ರಾಂ ಚಿನ್ನಾಭರಣ ಕಳವುಗೈದು ಪರಾರಿಯಾದ ಕಳ್ಳರು

Suddi Udaya

ಶಿಬಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ

Suddi Udaya

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಬೆಂಗಳೂರು ಬಿಲ್ಲವ ಅಸೋಸಿಯೇಷನ್ ನಿಂದ ಪೀತಾಂಬರ ಹೆರಾಜೆ ಅವರಿಗೆ ಅಭಿನಂದನೆ

Suddi Udaya
error: Content is protected !!