July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯದಶಮಿ ಪಥಸಂಚಲನ

ಉಜಿರೆ: ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಜಿರೆ ವತಿಯಿಂದ ವಿಜಯದಶಮಿ ಪಥಸಂಚಲನವು ಅ.12 ರಂದು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡು ಸಿದ್ಧವನದವರೆಗೆ ಸಾಗಿ ಮರಳಿ ಉಜಿರೆ ರಥಬೀದಿಗೆ ತಲುಪಿ ಮುಕ್ತಾಯಗೊಂಡಿತು.

ಸ್ವಯಂಸೇವಕರಲ್ಲಿ ಶಿಸ್ತು, ಏಕತೆ ಮತ್ತು ಸಂಘಟನೆಯ ಶಕ್ತಿಯನ್ನು ಬೆಳೆಸುವುದು ಪಥಸಂಚಲನದ ಮೂಲ ಉದ್ದೇಶವಾಗಿದ್ದು, ಪಥಸಂಚಲನದಲ್ಲಿ ಇಪ್ಪತ್ತೈದು ಗ್ರಾಮದಿಂದ 1013 ಸಂಖ್ಯೆಯಲ್ಲಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಪಥಸಂಚಲನ ಪೂರ್ಣಗೊಂಡ ಬಳಿಕ ಉಜಿರೆಯ ಕಾರ್ಯಕರ್ತ ವತಿಯಿಂದ ಪಾನೀಯ ಹಾಗೂ ಬನ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪಥಸಂಚಲನದಲ್ಲಿ ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ, ರಾಮಚಂದ್ರ ಶೆಟ್ಟಿ, ಭರತ್, ಪುತ್ತೂರು ಜಿಲ್ಲಾ ಸಂಘ ಚಾಲಕ್ ವಿನಯ್ ಚಂದ್ರ, ವಿಭಾಗ ವ್ಯವಸ್ಥಾ ಪ್ರಮುಖ್ ಸುಬ್ರಹ್ಮಣ್ಯ ಮಾಣಿ, ಪುತ್ತೂರು ಜಿಲ್ಲಾ ವ್ಯವಸ್ಥಾ ಪ್ರಮುಖ್ ಅರುಣ್ ಬಿಕೆ, ಪ್ರಶಾಂತ್ ಉಜಿರೆ ಉದ್ಯೋಗಿ ಕಾರ್ಯ ಪ್ರಮುಖ್, ತಾಲೂಕು ಕಾರ್ಯವಾಹ ರಾಜೇಶ್ ತೋಟತ್ತಾಡಿ, ತಾಲೂಕು ಸಹ ಕಾರ್ಯವಾಹ ತಿಲಕ್ ಅನಾರು, ಪುತ್ತೂರು ಜಿಲ್ಲಾ ಪ್ರಚಾರ ಪ್ರಮುಖ್ ಗಣೇಶ ಕೊಕ್ಕಡ, ಉಜಿರೆ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ,ಮಂಗಳೂರು ವಿಭಾಗದ ಸಾಮರಸ್ಯ ಪ್ರಮುಖ್ ಶಿವಪ್ರಸಾದ್ ಮಲೆಬೆಟ್ಟು, ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖ್ ರವೀಶ್ ಪಡುಮಲೆ, ಕೃಷ್ಣ ಭಟ್ ಕೊಕ್ಕಡ, ಉದಯ್ ಸುಬ್ರಹ್ಮಣ್ಯ, ಧ್ರುವ, ಗಣೇಶ, ಭರತ್, ಮುಖ್ಯ ಶಿಕ್ಷಕ್ ಸುದರ್ಶನ್ ಕನ್ಯಾಡಿ, ಪ್ರಾರ್ಥನೆ ಪ್ರಮುಖ್ ಯೋಗೀಶ್ ಅರಸಿನಮಕ್ಕಿ, ಗೋಸ್ಟ್ ಪ್ರಮುಖ್ ರಾಮದಾಸ್ ಭಂಡಾರ್ಕರ್, ಶ್ರೇಷ್ಠ ಪಡಿವಾಳ್ ಹಾಗೂ ಕನ್ಯಾಡಿ ಸೇವಾಧಾಮದ ವಿನಾಯಕ ರಾವ್, ಲಕ್ಷ್ಮಣ ಅರಣೆಪಾದೆ, ಜಗದೀಶ್ ನಾಯ್ಕ ನೀರಚಿಲುಮೆ ರವರುಗಳು ವೀಲ್ ಚೇರ್ ಮೂಲಕ ಪಥಸಂಚಲನದಲ್ಲಿ ಭಾಗಿಯಾದರು.

Related posts

ಮಾಗಡಿ ಕನ್ನಡ ಪರ ಸಂಘಟನೆಗಳ ಸದಸ್ಯರ ಧರ್ಮಸ್ಥಳ ಭೇಟಿ

Suddi Udaya

ಉಜಿರೆಯ ವಿಶೇಷ ಮಕ್ಕಳ ಸಾನಿಧ್ಯ ಕೇಂದ್ರದಲ್ಲಿ ದೀಪಾವಳಿ ಸಂಭ್ರಮ

Suddi Udaya

ನೆರಿಯ: ಹಿರಿಯ ದೈವ ನರ್ತಕ ತನಿಯಪ್ಪ ನಲಿಕೆ ನಿಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರದಲ್ಲಿ ಸೆಲ್ಕೋ ಪೌಂಢೇಶನ್ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ಘಟಕಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ತಾಲೂಕು ಸಮಿತಿಯ ಆಶ್ರಯದಲ್ಲಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ‘ವಾಲ್ಮೀಕಿ ಜೀವನಾದರ್ಶ’ ಉಪನ್ಯಾಸ ಕಾರ್ಯಕ್ರಮ

Suddi Udaya

ಬಜಿರೆ: ಚಿರತೆ ಓಡಾಟ-ಜನರಲ್ಲಿ ಆತಂಕ

Suddi Udaya
error: Content is protected !!