25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ನವಧ್ವನಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವೆಬ್ ಸೈಟ್ ಲೋಕಾರ್ಪಣೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದಲ್ಲಿ ನವಧ್ವನಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವೆಬ್ ಸೈಟ್ ಅ.14 ರಂದು ಲೋಕಾರ್ಪಣೆಗೊಳಿಸಿ ಶುಭ ಕೋರಿದರು.

ಭಾರತ ಸರಕಾರದ ಕಂಪೆನಿ ಸ್ ಆಕ್ಸ್ ನಲ್ಲಿ ಮಾನ್ಯತೆ ಪಡೆದು ಪ್ರಾರಂಭಗೊಂಡ ಸಂಸ್ಥೆ ಇದಾಗಲೇ ದಾವಣಗೆರೆ ಮತ್ತು ಬೆಳ್ತಂಗಡಿಯಲ್ಲಿ ಶಾಖೆ ಹೊಂದಿದೆ. ಈ ಸಂಸ್ಥೆಯ ಉದ್ದೇಶ – ಆರ್ಥಿಕ, ಕಾನೂನು, ಲೈಸನ್ನಿಂಗ್ ಮತ್ತು ಆಡಳಿತ ಸಲಹೆಗಳನ್ನು ಒಂದೇ ವೇದಿಕೆಯ ಮೇಲೆ ಒದಗಿಸುವುದು. ನವಧ್ವನಿ ಕನ್ಸಲ್ಟಿಂಗ್ ಗ್ರಾಹಕರಿಗೆ ಪಾರದರ್ಶಕತೆ, ನೈತಿಕತೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ನೀಡುವ ನಂಬಿಕಾರ್ಹ ಸಂಸ್ಥೆಗಳಲ್ಲಿ ಒಂದಾಗಬೇಕೆಂಬ ಆಶಯದೊಂದಿಗೆ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.

ಮ್ಯಾನೇಜಿಂಗ್ ಡೈರೆಕ್ಟರ್ ವಿನಯ ಕುಮಾರ್ ಪಿ. ಎಸ್,ಚಾರ್ಟಡ್ ಅಕೌಂಟೆಂಟ್ ಮತ್ತು ಕಂಪೆನಿ ಸೇಕ್ರೆಟರಿ ಗಾಯತ್ರಿ ರಾವ್, ಡೈರೆಕ್ಟರ್ ಗಳಾದ ಶ್ರೀಮತಿ ನಾಗ ನಂದಿನಿ ಪಿ.ಎನ್., ಶ್ರೀಮತಿ ಚೈತ್ರ ಟಿ, ಆದಿತ್ಯ.ಎಸ್. ರಾವ್, ಚೇತನ್ ಜಿ. ಎಮ್ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ನಿಧಿ ವಿತರಣೆ

Suddi Udaya

ಸಕಾಲಿಕ ಚಿಕಿತ್ಸೆ: ಮಹಿಳೆಯ ಜೀವ ರಕ್ಷಿಸಿದ ಕಕ್ಕಿಂಜೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕ

Suddi Udaya

ಬೆಳ್ತಂಗಡಿ ತಾಲೂಕಿನ ಪಂಚ ಗ್ಯಾರಂಟಿ ಸಮಾವೇಶ

Suddi Udaya

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ ವೈ ವಿಜಯೇಂದ್ರರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಗುರುವಾಯನಕೆರೆಯಲ್ಲಿ ಸಂಭ್ರಮದ ಬಂಟೋತ್ಸವ

Suddi Udaya

ನಾವೂರು: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!