September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ನಿಧಿ ವಿತರಣೆ

ಮುಂಡಾಜೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ಆಶ್ರಯದಲ್ಲಿ ಊರ ದಾನಿಗಳ ಸಹಕಾರದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ವೈ.ಸಿ.ಭವನದಲ್ಲಿ ಮೇ 31ರಂದು ಜರಗಿತು.


ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ಸುಜಿತ್ ಭಿಡೆ ಶೈಕ್ಷಣಿಕ ನಿಧಿ ವಿತರಿಸಿ ಮಾತನಾಡಿ “ದೇಶದ ಪ್ರಗತಿ, ಸಮಾಜವನ್ನು ಮುಂದುವರಿಸಲು ಪ್ರತಿಭೆಗಳು ಅಗತ್ಯ.ಪ್ರತಿ ಉದ್ಯೋಗವು ಉತ್ಕೃಷ್ಟವು ಅಲ್ಲ, ನಿಕೃಷ್ಟವು ಅಲ್ಲ,ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಪ್ರೀತಿ ಮುಖ್ಯ. ಯಶಸ್ಸಿಗೆ ಹಾದಿ. ಜೀವನದಲ್ಲಿ ಸಂಸ್ಕಾರದ ಜತೆ ಶಿಸ್ತು ಮುಖ್ಯ” ಎಂದರು.


ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಮಾತನಾಡಿ ಶಿಕ್ಷಣ ,ಕ್ರೀಡೆ, ಸಾಂಸ್ಕೃತಿಕ, ಜನಪದ ಕ್ಷೇತ್ರದೊಂದಿಗೆ ನಮ್ಮ ಸಂಸ್ಥೆ ಯುವಜನತೆಯನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಹಲವಾರು ಎಲೆಮರೆಯ ಕಾಯಿಗಳು ಸಂಸ್ಥೆ ಮೂಲಕ ಬೆಳಕಿಗೆ ಬಂದಿರುವುದು ಹೆಮ್ಮೆಯ ವಿಚಾರ.ವಿದ್ಯಾರ್ಥಿಗಳಿಗೆ ಇಂದು ಸಾಕಷ್ಟುಅವಕಾಶಗಳಿವೆ,ಇವುಗಳನ್ನು ಆಯ್ಕೆ ಮಾಡಿ ಮುಂದುವರಿಯುವುದು ಮುಖ್ಯ” ಎಂದರು.


ಉದ್ಯಮಿಗಳಾದ ಜಯಪ್ರಕಾಶ್ ಶೆಟ್ಟಿ ಮುಂಬೈ, ಶಮಂತ ಕುಮಾರ್ ಜೈನ್, ಸ್ವಾತಿ ನವೀನ್, ಮುಂಡಾಜೆ ಸಿಎ ಬ್ಯಾಂಕ್ ನಿರ್ದೇಶಕಿ ಅಶ್ವಿನಿ ಎ. ಹೆಬ್ಬಾರ್, ಉಪನ್ಯಾಸಕ ಸಚಿನ್ ಹೆಬ್ಬಾರ್,ಶಿಕ್ಷಕಿ ಜತೀಕ್ಷಾ ಮತ್ತಿತರರು ಉಪಸ್ಥಿತರಿದ್ದರು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಶಶಿಧರ ಠೋಸರ್ ಸ್ವಾಗತಿಸಿದರು.

Related posts

ಜೆಸಿಂತಾ ಡಿ ಸೋಜ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ: ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಪ್ರಶಸ್ತಿಗಳ ಗರಿ

Suddi Udaya

ಕೊಯ್ಯೂರು: ಬೈಕ್ ಮುಖಾಮುಖಿ ಡಿಕ್ಕಿ: ಶಾಲಾ ಶಿಕ್ಷಕನಿಗೆ ಗಂಭೀರ ಗಾಯ

Suddi Udaya

30ನೇ ವರ್ಷದ ಆಳ್ವಾಸ್ ವಿರಾಸತ್ ಗೆ ಇಂದು ಚಾಲನೆ: ಸಾಂಸ್ಕೃತಿಕ ಮೆರುಗು, ಮೇಳಗಳ ಬೆರಗು : ಕಲಾಸಕ್ತರು, ರೈತರು, ಮಕ್ಕಳು, ಮಹಿಳೆಯರು, ಕುಶಲಕರ್ಮಿಗಳು ಸೇರಿದಂತೆ ಸರ್ವರನ್ನೂ ಸೆಳೆಯುತ್ತಿರುವ ‘ವಿದ್ಯಾಗಿರಿ’  

Suddi Udaya

ಫೆ.6-14: ಗುರುವಾಯನಕರೆ ಉರೂಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಅನುಗ್ರಹ ಆಂ.ಮಾ. ಶಾಲೆ ಬಾಲಕರ ತಂಡಕ್ಕೆ ಪ್ರಶಸ್ತಿ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ “ಸುವರ್ಣ ಸಮ್ಮಿಲನ”: ಮೋಹನ್ ಕುಮಾರ್ ಹಾಗೂ ರವಿ ಕಟಪಾಡಿ ಯವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ಪ್ರದಾನ: ಸೇವಾ ಪಥ ಸ್ಮರಣ ಸಂಚಿಕೆ ಬಿಡುಗಡೆ

Suddi Udaya
error: Content is protected !!