ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಗುರುದೇವ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಪಕ್ಷಿ ವೀಕ್ಷಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮ

ಬೆಳ್ತಂಗಡಿ: ವನ್ಯಜೀವಿ ವಲಯ 71ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಜಮಲಾಬಾದ್ ಕೋಟೆಯ ಪರಿಸರದಲ್ಲಿ ಪಕ್ಷಿ ವೀಕ್ಷಣೆ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬೆಳ್ತಂಗಡಿ ರೇಂಜ್ ಫಾರೆಸ್ಟ್ ಆಫೀಸರ್ ಶ್ರೀಮತಿ ಶರ್ಮಿಷ್ಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಬದುಕು ಅಳಿವು ಮತ್ತು ಜೀವನಚಕ್ರದ ಬಗ್ಗೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಮತ್ತು ಉಪ ಅರಣ್ಯ ಅಧಿಕಾರಿ ಮ್ಯಾಥ್ಯೂ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಯ ಮಹತ್ವವನ್ನ ವಿವರಿಸಿದರು. ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಬಿಎ ಶಮಿವುಲ್ಲಾ ಕಾರ್ಯಕ್ರಮದ ಸಂಪೂರ್ಣ ರೂಪರೇಷೆಯನ್ನ ವಿದ್ಯಾರ್ಥಿಗಳಿಗೆ ವಿವರಿಸಿ , ಕಾರ್ಯಕ್ರಮ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು.

ವಿದ್ಯಾರ್ಥಿಗಳು ಪಕ್ಷಿ ವೀಕ್ಷಣೆಯನ್ನು ಮಾಡಿ ವನ್ಯಪ್ರಾಣಿಗಳ ಬಗ್ಗೆ ತಮಗಿರುವ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಂಡರು. ವಿದ್ಯಾರ್ಥಿಗಳು ಜಮಲಾಬಾದ್ ಪರಿಸರದ ಸುತ್ತಮುತ್ತ ಬಿದ್ದಿರುವ ಕಸ ಕಡ್ಡಿ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಉಪವಲಯ ಅರಣ್ಯ ಅಧಿಕಾರಿ ರವೀಂದ್ರ ಸ್ವಾಗತಿಸಿದರು. ರಾ.ಸೇವಾ ಯೋಜನ ಘಟಕದ ನಾಯಕ ಆಶಿಕ್ ದ್ವಿತೀಯ ಬಿಕಾಂ ಧನ್ಯವಾದ ನೀಡಿದರು.

Related posts

ಗಾಳಿ ಮಳೆಗೆ ಕೂತ್ರೋಟ್ಟು ನಿವಾಸಿ ಗಿರಿಜಾ ಅವರ ಮನೆಗೆ ಮರ ಬಿದ್ದು ಹಾನಿ

Suddi Udaya

ಮಾಜಿ ಶಾಸಕ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಮೊಬೈಲ್ ರಿಟೇಲರ್ ಅಸೋಸಿಯೇಷನ್ ನಿಂದ ನಾಳೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಶ್ರದ್ಧಾಂಜಲಿ ಅರ್ಪಣೆ

Suddi Udaya

ನೇತ್ರಾವತಿ ಕಾರ್ಯಾಚರಣೆ ಸ್ಥಳಕ್ಕೆ ಎಸ್.ಐ.ಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಭೇಟಿ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ

Suddi Udaya

ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಬೆಳ್ತಂಗಡಿ ತಾಲೂಕಿನ ಉತ್ತಮ ಸಂಘ ಪ್ರಶಸ್ತಿ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 23.47 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಟ್ ಘೋಷಣೆ

Suddi Udaya
error: Content is protected !!