ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತಿಮರೋಡಿ ಗಡಿಪಾರು ಪ್ರಕರಣ; ಬಂಟ್ವಾಳ ಡಿ.ವೈ.ಎಸ್.ಪಿ‌ ವಿರುದ್ದ ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ ಹಾಗೂ ಸರಕಾರಕ್ಕೆ ಜಯಂತ್ ಟಿ‌ ದೂರು

ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಮಾಡಲು ಸಹಾಯಕ ಆಯುಕ್ತರ‌ ನ್ಯಾಯಾಲಯ ಪುತ್ತೂರು ಉಪ ವಿಭಾಗಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ ಅವರು ಸುಳ್ಳು ವರದಿ ಸಲ್ಲಿಸಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನೀತಿ ತಂಡದ ಜಯಂತ್ ಟಿ ಕರ್ನಾಟಕ ಲೋಕಾಯುಕ್ತಕ್ಕೆ, ರಾಜ್ಯ ಮಾನವ ಹಕ್ಕುಗಳ‌ ಆಯೋಗಕ್ಕೆ, ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.

ಮಹೇಶ್ ಶೆಟ್ಟಿ ಅವರ ಗಡಿಪಾರು ಪ್ರಕರಣದ‌ ವಿಚಾರಣೆ‌ ವೇಳೆ ಬಂಟ್ವಾಳ ಡಿ ವೈ.ಎಸ್.ಪಿ ಅವರು ಪುತ್ತೂರು ಸಹಾಯಕ ಕಮಿಷನರ್ ಅವರ ನ್ಯಾಯಾಲಯಕ್ಕೆ‌ ಸಲ್ಲಿಸಿರುವ ವರದಿಗಳನ್ನು ಉಲ್ಲೇಘಿಸಿ ದೂರು ನೀಡಲಾಗಿದೆ‌. ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಮಾಡುವಂತೆ ಮಾಡುವ ನಿಟ್ಟಿನಲ್ಲಿ ಪ್ರಭಾವ ಬೀರಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಮಹೇಶ್ ಶೆಟ್ಟಿ ಅವರ ವಿರುದ್ದ 26 ಪ್ರಕರಣಗಳಿದ್ದು ಅದರಲ್ಲಿ 16, ಪ್ರಕರಣಗಳು ಈಗಾಗಲೆ ಖುಲಾಸೆಗೊಂಡಿದೆ‌ ಎಂದು ಮಾಹಿತಿ ನೀಡಿರುವ ಜಯಂತ್ ಬಂಟ್ವಾಳ ಡಿವೈ.ಎಸ್.ಪಿ‌ ಅವರು ಯಾವುದೇ ಸಮರ್ಪಕವಾದ ದಾಖಲೆಗಳನ್ನು ನೀಡದೆ ನ್ಯಾಯಾಲಯದಲ್ಲಿ ಖುಲಾಸೆಯಾದ ಪ್ರಕರಣಗಳ ಬಗ್ಗೆ ಲಿಖಿತವಾದ ಹೇಳಿಕೆಗಳನ್ನು ನೀಡಿದ್ದು ಇದು ನ್ಯಾಯಾಂಗಕ್ಕೆ ಮಾಡಿರುವ ನಿಂದನೆಯಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇದಲ್ಲದೆ ಇನ್ನೂ ಹಲವು ಆರೋಪಗಳನ್ನು ಮಾಡಿದ್ದಾರೆ.


ಗಡಿಪಾರು ಪ್ರಕರಣದ ವಿಚಾರಣೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದರ ನಡುವೆಯೇ ಜಯಂತ್ ಸಾಮಾಜಿಕ ಜಾಲತಾಣಗಳಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ ವಿರುದ್ದ ಹಲವು ಆರೋಪಗಳನ್ನು ಮಾಡಿ ವಿಡಿಯೋ ಒಂದನ್ನು ಹಾಕಿದ್ದು ಈಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ‌ ದಾಖಲಿಸಲಾಗಿದೆ. ಒಟ್ಟಾರೆಯಾಗಿ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ನೀಡುವ ತೀರ್ಪು ಇದೆಲ್ಲ ವಿವಾದಗಳಲ್ಲಿಯೂ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

Related posts

ಮೊಗ್ರು : ಮುಗೇರಡ್ಕದಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ -75 ರ ರಸ್ತೆಗೆ ಸಂಪರ್ಕ ಬಹು ನಿರೀಕ್ಷಿತ ಪ್ರವಾಸೋದ್ಯಮ ದೃಷ್ಟಿಯಿಂದ ಜಾಗ ಕಾಯ್ದಿರಿಸುವ ಬಗ್ಗೆ ಎನ್ಎಚ್ಎಐ ಇಂಜಿನಿಯರ್ ತಂಡ ಭೇಟಿ ಸ್ಥಳ ಪರಿಶೀಲನೆ

Suddi Udaya

ಧರ್ಮಸ್ಥಳ- ಕಾರ್ಯತಡ್ಕ- ಪಾದೆ- ಅರಸಿನಮಕ್ಕಿ -ಶಿಶಿಲ ಮಾರ್ಗವಾಗಿ ಸರ್ಕಾರಿ ಬಸ್ ಸಂಚಾರ ಮರು ಪ್ರಾರಂಭಿಸುವಂತೆ ಕಳೆಂಜ ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಮನವಿ

Suddi Udaya

ಮಾಲಾಡಿ: ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಪಿಕಪ್ ನಡುವೆ ಅಪಘಾತ

Suddi Udaya

ಪುಂಜಾಲಕಟ್ಟೆ: ಪಿಲಾತಬೆಟ್ಟು ನಿವಾಸಿ ಶ್ರೀಮತಿ ಶಶಿಕಲಾ ನಿಧನ

Suddi Udaya

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ : ಮುಂಡಾಜೆಯ ತೇಜಲ್ ಕೆ .ಆರ್ ರವರಿಗೆ ಬೆಳ್ಳಿಯ ಪದಕ

Suddi Udaya

ಬಾರ್ಯ ಪ್ರಾ.ಕೃ.ಪ. ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ

Suddi Udaya
error: Content is protected !!