23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ರವರು ಕಲಾನಿಧಿ ಪ್ರಶಸ್ತಿಗೆ ಆಯ್ಕೆ

ಬೆಳ್ತಂಗಡಿ: ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿಯಿಂದ ಕಲಾನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಅ.18ರಂದು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. 2024ನೇ ಸಾಲಿನ ಕಲಾ ನಿಧಿ ಪ್ರಶಸ್ತಿಗೆ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ಆಯ್ಕೆಯಾಗಿದ್ದಾರೆ.

ಮೂಲತಃ ವಿಟ್ಲ ನಿವಾಸಿಯಾಗಿರುವ ವಿಶ್ವನಾಥ ಕೆ ವಿಟ್ಲ ರವರು ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಚಿತ್ರ ಕಲಾ ಶಿಕ್ಷಕರಾಗಿದ್ದಾರೆ. ಅವರು ಪ್ರಾಥಮಿಕ ಶಿಕ್ಷಣವನ್ನು ಚಂದಳಿಕೆ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಉನ್ನತ ಶಿಕ್ಷಣವನ್ನು ವಿಠಲ ಪ.ಪೂ ಕಾಲೇಜು ವಿಟ್ಲದಲ್ಲಿ ಮುಂದುವರಿಸಿದರು.

ಪ್ರಸ್ತುತ ಉಜಿರೆ ನಿವಾಸಿಯಾಗಿರುವ ವಿಶ್ವನಾಥ ಗೌಡ ಕೆ.ರವರು ಕಲಾ ಕ್ಷೇತ್ರದಲ್ಲಿ ‘ವಿ.ಕೆ.ವಿಟ್ಲ’ ಎಂದೇ ಪ್ರಸಿದ್ಧರಾಗಿರುವವರು. ಇವರ ಸೃಜನಶೀಲ ಕಲ್ಪನೆಗೆ ಸೂಕ್ತ ತರಬೇತಿ ನೀಡಿ ಪರಿಪೂರ್ಣತೆಯ ಹಂತಕ್ಕೆ ತಿದ್ದಿ ತೀಡಿದ್ದು ಮಂಗಳೂರಿನ ಹೆಸರಾಂತ ಮಹಾಲಸ ಕಲಾವಿದ್ಯಾಲಯ. ಇವರ ಕಲಾವಿದ ಮನಸ್ಸಿಗೆ ವೃತ್ತಿ ರೂಪದಲ್ಲಿ ವೇದಿಕೆ ನೀಡಿದ್ದು ಸುಬ್ರಹ್ಮಣೇಶ್ವರ ಪ್ರೌಢಶಾಲೆ ಬಿಳಿನೆಲೆ. ಬಳಿಕ ಉಜಿರೆ ಎಸ್‌ಡಿಎಂನಲ್ಲಿ ಡಾ|ವೀರೇಂದ್ರ ಹೆಗ್ಗಡೆಯವರ ಸಾಮೀಪ್ಯದಲ್ಲಿ ಕಲಾ ಸೇವೆ, ಬೋಧಕ ಸೇವೆ ನಡೆಸಿರುವ ಹಿರಿಮೆ ಇವರದ್ದು. ಶಿಲ್ಪಕಲೆ, ಗೋಡೆ ಬರಹ, ಗೌರಿ, ಗಣೇಶ ವಿಗ್ರಹಗಳು ಇವರನ್ನು ಇನ್ನಷ್ಟು ಪಕ್ವಗೊಳಿಸಿದ ಕಲಾ ಪ್ರಾಕಾರಗಳು. ಉತ್ತಮ ಕಲಾಪೋಷಕರು, ಕಲಾ ಕಾರ್ಯಕ್ರಮಗಳ ಸಂಘಟಕರೂ ಆಗಿರುವ ಇವರು ನೂರಕ್ಕೂ ಹೆಚ್ಚು ಬೇಸಿಗೆ ಶಿಬಿರ, ಕಲಾ ಶಿಬಿರ, ಉಚಿತ ಚಿತ್ರಕಲಾ ತರಬೇತಿಗಳನ್ನು ಅನಾವರಣಗೊಳಿಸಿದ್ದಾರೆ.

ಶಾಲಾ ಪಠ್ಯಪುಸ್ತಕ ಪ್ರಾಧಿಕಾರ ಬೆಂಗಳೂರು ಇಲ್ಲಿ ಎಂಟನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕ ಸಮಿತಿ ಸದಸ್ಯನಾಗಿಯೂ ಇವರು ಕೆಲಸ ನಿರ್ವಹಿಸಿದ್ದಾರೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್ ವತಿಯಿಂದ ಆರಂಭಗೊಂಡ ಜ್ಞಾನಾಧಾರಿತ, ಮೌಲ್ಯಾಧಾರಿತ ಪುಸ್ತಕಗಳ ಪರಿಕಲ್ಪನೆ, ಚಿತ್ರ ವಿನ್ಯಾಸಗಳಲ್ಲಿ ವಿ.ಕೆ.ವಿಟ್ಲ ಅವರ ಸಲಹೆ, ಸೂಚನೆ, ಕೊಡುಗೆ ಅಪಾರ. ಇವರ ಕಲಾಸೇವೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಇದೀಗ ರಾಜ್ಯ ಮಟ್ಟದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Related posts

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮ ಸಮಿತಿಯ ತ್ರೈಮಾಸಿಕ ಸಭೆ ಹಾಗೂ ವನಮಹೋತ್ಸವ

Suddi Udaya

ಗೋಪಾಲಕೃಷ್ಣ ದೇವಸ್ಥಾನ ಬೆಂದ್ರಾಳ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಆಟೋಟ ಸ್ಪರ್ಧೆ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ದೀಪಾವಳಿ ಸಂಭ್ರಮ

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಾಹನ ಪೂಜೆ

Suddi Udaya

ಕಡಬದ ನವ ಜೀವನ ಸದಸ್ಯರಿಂದ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಶಾಲಿನಿ ಸೇವಾ ಪ್ರತಿಷ್ಠಾನ ವತಿಯಿಂದ ಶಾಲಿನಿಯ 13ನೇ ವರ್ಷದ ಪುಣ್ಯ ಸ್ಮರಣೆ

Suddi Udaya
error: Content is protected !!