ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ಅ.18 ರಂದು ಆಯೋಜಿಸಲಾಗಿತ್ತು.

ರಕ್ಷಕ – ಶಿಕ್ಷಕ ಸಂಘದ 2024 – 25 ನೇ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ರಕ್ಷಕ – ಶಿಕ್ಷಕ ಸಂಘದ ಸಂಚಾಲಕ ಪ್ರೊ. ಸಂತೋಷ್ ಪ್ರಭು .ಎಮ್ ಮಂಡಿಸಿದರು. ನಂತರ 2024 – 25 ನೇ ಸಾಲಿನಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜಿನ 2024 – 25 ನೇ ಸಾಲಿನ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಶ್ಯಾಮರಾವ್ ಉಂಡೆಮನೆ ಇವರ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ನಂತರ 2025 -26ನೇ ಸಾಲಿನ ನೂತನ ರಕ್ಷಕ ಶಿಕ್ಷಕ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಗಣೇಶ ಆಚಾರ್ಯ ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಇದರ ನಿರ್ದೇಶಕರಾದ ಪ್ರೊ.ಸೀತಾರಾಮ ಕೇವಳ ಮಾತನಾಡಿ “ಮಕ್ಕಳ ಜೀವನವನ್ನು ರೂಪಿಸುವಲ್ಲಿ ಪೋಷಕರ ಪಾತ್ರ”, ಹಾಗೂ “ಸಹಕಾರದಿಂದಲೇ ಸಾಧನೆ” ಎಂದು ಪೋಷಕರ ಮನಮುಟ್ಟುವ ಪ್ರೇರಣಾದಾಯಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷ ಪ್ರೊ.ಮಾಧವ ಅವರು ಕಾಲೇಜಿನ ಅಭಿವೃದ್ಧಿಯಲ್ಲಿ ರಕ್ಷಕ ಶಿಕ್ಷಕ ಸಂಘದ ಸಹಕಾರವನ್ನು ಉಲ್ಲೇಖಿಸಿ, ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ರಕ್ಷಕ – ಶಿಕ್ಷಕ ಸಂಘದ ಸಂಚಾಲಕರಾದ ಪ್ರೊ. ಸಂತೋಷ್ ಪ್ರಭು.ಎಮ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವೈಶಾಲಿ .ಯು ,ಐಕ್ಯೂಎಸಿ ಸಂಚಾಲಕರಾದ ಡಾ. ಅವಿತಾ ಮರಿಯಾ ಕ್ವಾಡ್ರಸ್, ರಕ್ಷಕ – ಶಿಕ್ಷಕ ಸಂಘದ ಸಹ ಸಂಚಾಲಕರಾದ ಪ್ರೊ. ಪ್ರವೀಣ್ ಇವರು ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಚಾಲಕರಾದ ಡಾ. ಅವಿತಾ ಮರಿಯಾ ಕ್ವಾಡ್ರಸ್ ಸ್ವಾಗತಿಸಿ , ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವೈಶಾಲಿ. ಯು ವಂದಿಸಿದರು. ಹಾಗೂ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪ್ರೊ. ರೇಖಾ ಯು.ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.











