September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಂಚಿ ಕಾಮಕೋಟಿ ಪೀಠದ ರಿಕ್ಷಾ ಕೊಡುಗೆ

ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಆಚರಣೆಯ ಸಂದರ್ಭದಲ್ಲಿ ಅ.24ರಂದು ಕಂಚಿಕಾಮಕೋಟಿ ಪೀಠದ ಸ್ವಾಮೀಜಿಯವರು ಬಳಸುತ್ತಿದ್ದ ಪವಿತ್ರ ರಿಕ್ಷಾವನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಲಾಯಿತು.

ಭಕ್ತರು ತಂದ ರಿಕ್ಷಾವನ್ನು ಧರ್ಮಸ್ಥಳದಲ್ಲಿ ಮಾಹಿತಿ ಕಚೇರಿ ಬಳಿಯಿಂದ ಭವ್ಯ ಮೆರವಣಿಗೆಯಲ್ಲಿ ಹೆಗ್ಗಡೆಯವರ ನಿವಾಸ ಬೀಡಿಗೆ ತರಲಾಯಿತು.

ಕಂಚಿ ಕಾಮಕೋಟಿ ಸ್ವಾಮೀಜಿಯವರು ತಮ್ಮ  ಪಾದಯಾತ್ರೆಯ ಸಂದರ್ಭದಲ್ಲಿ ಅವಶ್ಯಕ ವಸ್ತುಗಳಾದ ಪಾದುಕೆಗಳನ್ನು, ಅನುಷ್ಠಾನ ಪಾತ್ರೆಗಳನ್ನು ಮತ್ತು ದರ್ಭಾಸನದ ಸಾಗಾಣಿಕೆಗೆ ಇದನ್ನು ಬಳಸುತ್ತಿದ್ದರು.

ಪೂಜ್ಯ ಹೆಗ್ಗಡೆಯವರು ಈ ವಿಶಿಷ್ಟ ಕೊಡುಗೆಯನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.

ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.

Related posts

ಶಿರ್ಲಾಲು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ವೇಣೂರು: ಮಹಾವೀರ ನಗರ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಬಳಂಜ ಸ.ಹಿ.ಪ್ರಾ. ಶಾಲೆಯ ಅಭಿವೃದ್ಧಿಗೆ ರೂ. 2.00 ಕೋಟಿ ಅನುದಾನ ಮಂಜೂರುಗೊಳಿಸುವಂತೆ ಶಾಸಕ ಹರೀಶ್ ಪೂಂಜರಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಮನವಿ

Suddi Udaya

ಪೆರ್ಲ -ಬೈಪಾಡಿ ಅಂಚೆ ಇಲಾಖೆಯ ನೂತನ ಶಾಖೆಯ ಮುಂಭಾಗದಲ್ಲಿ ಆಧಾರ್ ಅದಾಲತ್, ನೋಂದಣಿ, ತಿದ್ದುಪಡಿ, ಹಾಗೂ ಅಂಚೆ ಇಲಾಖೆಯ ಹೊಸ ಖಾತೆ ತೆರೆಯುವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಹಬ್ಬ ಕೇವಲ ಎರಡೇ ದಿನಗಳು ಬಾಕಿ

Suddi Udaya

ಬಾಲಕ ಸುಮಂತ್ ಸಾವು ಪ್ರಕರಣ: ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭ

Suddi Udaya
error: Content is protected !!