September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

ಕಳಿಯ ಗ್ರಾಮ ಪಂಚಾಯತ್ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ನಾಗರೀಕ ಬಂಧುಗಳ ಸದುಪಯೋಗಕ್ಕಾಗಿ ಆಧಾರ್ ತಿದ್ದುಪಡಿ, ಹತ್ತು ವರ್ಷಗಳ ಅಪ್ಡೇಟ್, ಹದಿನೆಂಟು ವರ್ಷದ ಕೆಳಗಿನ ಹೊಸ ಆಧಾರ್ ಕಾರ್ಡ್, ವಿಳಾಸ ಬದಲಾವಣೆ ಇತ್ಯಾದಿಗಳ ಕ್ಯಾಂಪ್ ಎರಡು ದಿನ ನಡೆಸಲಾಗಿ ಸುಮಾರು ನೂರಕ್ಕೂ ಹೆಚ್ಚು ಮಂದಿಯು ಪ್ರಯೋಜನ ಪಡೆದುಕೊಂಡರು. ಜೊತೆಗೆ ಅಂಚೆ ಇಲಾಖೆಯ ವಿಶಿಷ್ಟ ಪ್ರಜಾ ಸ್ನೇಹಿ ಆರೋಗ್ಯ ವಿಮೆ, ಜೀವ ವಿಮೆ, ಸುಕನ್ಯಾ ಯೋಜನೆಯ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ ನಾಗರೀಕರ ಭಾಗವಹಿಸುವಿಕೆಯಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದ ಉದ್ಘಾಟನೆ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್ ಮೆದಿನ ನೆರವೇರಿಸಿದರು. ಉಪಾಧ್ಯಕ್ಷೆ ಶ್ರೀಮತಿ ಇಂದಿರಾ, ಗ್ರಾ.ಪಂ. ಸದಸ್ಯರಾದ ವಿಜಯ ಕುಮಾರ್, ಕೆ.ಎಮ್. ಅಬ್ದುಲ್ ಕರೀಮ್, ಹರೀಶ್ ಕುಮಾರ್, ಸುಧಾಕರ ಮಜಲು, ಲತೀಫ್ ಭಾಗವಹಿಸಿದರು.
ಅಂಚೆ ಇಲಾಖೆ ಪುತ್ತೂರು ಅಧಿಕಾರಿ ಗುರುಪ್ರಸಾದ್, ಅಂಚೆ ವಿಭಾಗ ಬೆಳ್ತಂಗಡಿ ಮೇಲ್ವಿಚಾರಕಿ ವಿಮಲ, ಕುವೆಟ್ಟು ಎ.ಬಿ.ಜೆ.ಎಮ್ ಕೆ ಸುಂದರ ಸಾಲಿಯಾನ್, ಶಿರ್ತಾಡಿ ಎ.ಬಿ.ಜೆ.ಎಮ್ ಹರ್ಷಿತ, ಕೊಯ್ಯೂರು ಅಂಚೆ ಪಾಲಕರು ಸಂತೃಪ್ತಿ ಅಂಚೆ ಇಲಾಖಾ ವತಿಯಿಂದ ಭಾಗವಹಿಸಿದರು.


ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಪಿ.ಡಿ.ಓ ಕುಂಞ ಕೆ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ರವಿ ಹೆಚ್ ವಂದಿಸಿದರು. ಸಿಬ್ಬಂದಿಯವರಾದ ಶ್ರೀಮತಿ ಸುಚಿತ್ರ, ಸುರೇಶ್ ಕುಮಾರ್, ಶ್ರೀಮತಿ ಪ್ರಮೀಳಾ, ಶ್ರೀಮತಿ ನಂದಿನಿ P ರೈ, ಶ್ರೀಮತಿ ಶಶಿಕಲಾ ಸಹಕರಿಸಿದರು.

Related posts

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆ ಕಾರ್ಯಕ್ರಮ

Suddi Udaya

ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಕಿರಣ್ ಆಗ್ರೋಟೆಕ್ ಉಜಿರೆ -ಕೊಕ್ಕಡ ಇವರ 2025ರ ಕ್ಯಾಲೆಂಡರ್ ಬಿಡುಗಡೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನ ಹರೀಶ್ ಶೆಟ್ಟಿ ಸಬ್ ಲೆಫ್ಟಿನೆಂಟ್ ರ‍್ಯಾಂಕ್ 

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾನ್ಸೂನ್ ಡೇ

Suddi Udaya

ಎಸ್.ಡಿ.ಎಂ ಸೈನಾಥಾನ್ 2026 – ‘ಎ ರನ್ ಟು ಹಾನರ್ ಅವರ್ ಹೀರೋಸ್’;

Suddi Udaya
error: Content is protected !!