ಗ್ರಾಮಾಂತರ ಸುದ್ದಿಚಿತ್ರ ವರದಿ

ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಶ್ರಿಗುರುದೇವ ಕಾಲೇಜಿನ ವಿದ್ಯಾರ್ಥಿಗೆ ಸ್ವರ್ಣ ಪದಕ

ಮೂಡಬಿದ್ರೆ ಕನ್ನಡ ಭವನದಲ್ಲಿ ನಡೆದ ಶೋರಿನ್ ರ್ಯೂ ಕರಾಟೆ ಅಸೋಶಿಯೇಶನ್ (ರಿ) ಇಂಡಿಯಾ ಮತ್ತು ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮೂಡಬಿದ್ರೆಯ ಇದರ ಆಶ್ರಯದಲ್ಲಿ ನಡೆದ 8ನೇ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ಞಾನ್ ಇವರು ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕವನ್ನು ಪಡೆದಿರುತ್ತಾರೆ.

ಇವರು ಬಂದಾರು ಗ್ರಾಮದ ಬೈಪಾಡಿ ದಿ| ಹರೀಶ್ ಪೂಜಾರಿ ಮತ್ತು ಶ್ರೀಮತಿ ಪ್ರೀತಿ ದಂಪತಿಯ ಸುಪುತ್ರರಾಗಿರುತ್ತಾರೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರೀತಿತಾ ಧರ್ಮವಿಜೇತ್, ಟ್ರಸ್ಟಿ ಶ್ರೀಮತಿ ಬಿನುತಾ ಬಂಗೇರ ಹಾಗೂ ಇತರ ಟ್ರಸ್ಟಿಗಳು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಕರಾಟೆ ಶಿಕ್ಷಕ ರಹಿಮಾನ್ , ನಿವೃತ್ತ ಶಿಕ್ಷಕ ಸುರೇಶ್, ಕಾಲೇಜಿನ ಉಪನ್ಯಾಸಕ ರಾಕೇಶ್ ಕುಮಾರ್, ಶೇಕ್ ರಶೀದ್ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ತೆಕ್ಕಾರಿಗೆ ಶಾಸಕ ಹರೀಶ್ ಪೂಂಜಾ ಭೇಟಿ : ಕ್ಷೇತ್ರದ ರಸ್ತೆಗೆ ಶಾಸಕರ ನಿಧಿಯಿಂದ ರೂ‌.10 ಲಕ್ಷ ಡಾಂಬರೀಕರಣ

Suddi Udaya

ಸಾರ್ವಜನಿಕರಿಗೆ ಉಚಿತ ರಕ್ತದೂತ್ತಡ ಹಾಗೂ ಮಧುಮೇಹ ತಪಾಸಣೆ

Suddi Udaya

ಕರಾಯ – ಇಳಂತಿಲ ರಸ್ತೆಯಲ್ಲಿ ಅಲ್ಲಿ ಅಲ್ಲಿ ಬರೆ ಕುಸಿತ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಲಾಯಿಲ: ಶ್ರೀ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವ

Suddi Udaya

ದಿ. ಪ್ರವೀಣ್ ನೆಟ್ಟಾರುರವರ ಮನೆಗೆ ಬೆಳ್ತಂಗಡಿ ಯುವಮೋರ್ಚಾ ಮಂಡಲದ ಪದಾಧಿಕಾರಿಗಳ ಭೇಟಿ

Suddi Udaya
error: Content is protected !!