September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ: ಸರ್ವಧರ್ಮೀಯರು ಆಚರಿಸುವ ವಿಶ್ವವಿಖ್ಯಾತ ಹಬ್ಬ ದೀಪಾವಳಿ: ಪ್ರಕಾಶ ಶೆಟ್ಟಿ ನೊಚ್ಚ

ಬೆಳ್ತಂಗಡಿ: ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ದೀಪಾವಳಿ, ಈದ್, ಕ್ರಿಸ್ಮಸ್ ಎಲ್ಲವನ್ನೂ ಆಚರಿಸುತ್ತಾ ಬರುತ್ತಿರುವುದು ಸೌಹಾರ್ದತೆಯ ಮಾದರಿ ಕಾರ್ಯ. ದೀಪಾವಳಿ ಆಚರಣಾ ಕ್ರಮದಲ್ಲಿ ಪ್ರಾದೇಶಿಕವಾಗಿ ಕೆಲವು ವ್ಯತ್ಯಾಸಗಳಿರಬಹುದೇ ಹೊರತು ಸರ್ವಧರ್ಮೀಯರು ಸೇರಿ ಇಡೀ ವಿಶ್ವದಲ್ಲೇ ಆಚರಿಸುವ ವಿಶ್ವ ವಿಖ್ಯಾತ ವಿಶಿಷ್ಟ ಹಬ್ಬ ದೀಪಾವಳಿ ಎಂದು ಪಿಡಿಒ ಪ್ರಕಾಶ ಶೆಟ್ಟಿ ನೊಚ್ಚ ಹೇಳಿದರು.


ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ನ.15 ರಂದು ಹಮ್ಮಿಕೊಂಡಿದ್ದ ಸಾಮೂಹಿಕ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು‌.
ಲಯನ್ಸ್ ಕ್ಲಬ್ ಪ್ರಥಮ ಮಹಿಳೆ ಸವಿತಾ ಉಮೇಶ್ ಶೆಟ್ಟಿ ಉದ್ಘಾಟಿಸಿದರು.
ನಿಕಟಪೂರ್ವ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ, ಕಾರ್ಯಕ್ರಮ ಸಂಯೋಜಕ ಸುರೇಶ್ ಶೆಟ್ಟಿ ಲಾಯಿಲ ಶುಭ ಕೋರಿದರು. ಕೋಶಾಧಿಕಾರಿ ಶುಭಾಷಿಣಿ ಉಪಸ್ಥಿತರಿದ್ದರು.
ಧರಣೇಂದ್ರ ಕೆ ಜೈನ್ ವೇದಿಕೆಗೆ ಆಹ್ವಾನಿಸಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾರ್ಥನೆ ಹಾಡಿದರು. ಸುಶೀಲಾ ಹೆಗ್ಡೆ ನೀತಿ ಸಂಹಿತೆ ವಾಚಿಸಿದರು. ಧ್ವಜವಂದನೆಯನ್ನು ನಿತ್ಯಾನಂದ ನಾವರ ನಡೆಸಿದರು. ಲಾಂಗೂಲ ಚಾಲಕ ರಾಮಕೃಷ್ಣ ಗೌಡ ನಗೆ ಚಟಾಕಿ ಹಾರಿಸಿದರು. ಕಾರ್ಯದರ್ಶಿ ಅನಂತಕೃಷ್ಣ ವಂದಿಸಿದರು.

ಉಪಹಾರದ ಪ್ರಾಯೋಜಕ ದಿನೇಶ್ ಉಜಿರೆ ಅವರನ್ನು ಗೌರವಿಸಲಾಯಿತು. ದೀಪಾವಳಿ ಪ್ರಯುಕ್ತ ಸಾಮೂಹಿಕ ಹಣತೆ ಪ್ರದರ್ಶನ, ಸುಡುಮದ್ದು ಪ್ರದರ್ಶನ ನಡೆದವು. ಹಾಸ್ಯ ಭರಿತ ಸ್ಪರ್ಧೆ ನಡೆಸಿ ವಿಜೇತರಾದ ಸುಂದರಿ ನಾಣ್ಯಪ್ಪ ದಂಪತಿಯನ್ನು, ಕಿರಿಯರ ವಿಭಾಗದ ರಿದಿ ಶೆಟ್ಟಿ ಅವರನ್ನು ಬಹುಮಾನ ನೀಡಿ ಪುರಸ್ಕರಿಸಲಾಯಿತು.

Related posts

ಮುಂಡಾಜೆ: ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ: ನಿವೃತ್ತಿ ಹೊಂದಿದ ಪಂಪು ಚಾಲಕ ಕೊರಗಪ್ಪರಿಗೆ ಬೀಳ್ಕೊಡುಗೆ

Suddi Udaya

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತನುಶ್ರೀಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

Suddi Udaya
error: Content is protected !!