September 6, 2026
Uncategorized

ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಫನ್ಪಿನಿಟಿ ಚಿಣ್ಣರ ಪ್ಲೇ ಪಾರ್ಕ್ ಉದ್ಘಾಟನೆ, ಪೋಷಕರಿಗೆ ಆಟೋಟ ಸ್ಪರ್ಧೆ

ಗುರುವಾಯನಕೆರೆ: ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಪೋಷಕರಿಗೆ ಆಟೋಟ ಸ್ಪರ್ದೆ ಮತ್ತು ಎಕ್ಸೆಲ್ ಫನ್ಪಿನಿಟಿ ಚಿಣ್ಣರ ಪ್ಲೇ ಪಾರ್ಕ್ ಇದರ ಉದ್ಘಾಟನೆಯು ಅ 25 ರಂದು ನಡೆಯಿತು.

ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಪ್ಲೇ ಪಾರ್ಕ್ ಉದ್ಘಾಟಿಸಿ, ಬಲೂನು ಎತ್ತರಕ್ಕೆ ಹಾರಿಸುವ ಮೂಲಕ ಎಕ್ಸೆಲ್ ಪೋಷಕರ ಆಟೋಟ ಸ್ಪರ್ದೇಗೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಸುಮಂತ್ ಕುಮಾರ್ ಜೈನ್ ಅವರು ಸಂಸ್ಕಾರಭರಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆಂಬ ಸಂಕಲ್ಪ ನಮ್ಮದು.ಮಕ್ಕಳು ಹೆತ್ತವರಿಗೆ ಒಳ್ಳೆಯ ಮಗನಾಗಿ ದೇಶಕ್ಕೆ ಆಸ್ತಿಯಾಗಬೇಕು.ಅಂತಹ ಶಿಕ್ಷಣವನ್ನು ನಮ್ಮ ವಿದ್ಯಾ ಸಂಸ್ಥೆಯಲ್ಲಿ ನೀಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಅರಮಲೆಬೆಟ್ಟ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರಾದ ಸುಕೇಶ್ ಕುಮಾರ್ ಜೈನ್ ಕಡಂಬು ಮಾತನಾಡಿ ವಿದ್ಯಾಸಂಸ್ಥೆಗಳು ಬೆಳೆದಾಗ ಆ ಊರು,ಪರಿಸರ ಕೂಡ ಅಭಿವೃದ್ದಿ ಹೊಂದುತ್ತದೆ.ಎಕ್ಸೆಲ್ ಸ್ಥಾಪನೆಯಿಂದ ಗುರುವಾಯನಕೆರೆ ಪರಿಸರದ ಸೊಬಗು ಹೆಚ್ಚಿದೆ ಎಂದರು.

ಮುಂಡಾಜೆ ಯಂಗ್ ಚಾಲೇಂಜರ್ಸ್ ಕ್ಲಬ್ ನ ಮುಖ್ಯಸ್ಥರಾದ ನಾಮ್ ದೇವ್ ರಾವ್ ಮುಂಡಾಜೆ ಮಾತನಾಡಿ ಮಕ್ಕಳ ಭವಿಷ್ಯದ ರೂಪಿಸುವ ಶಿಕ್ಷಣ ಎಕ್ಸೆಲ್ ನಲ್ಲಿ ಸಿಗುತ್ತಿದ್ದು ರಾಜ್ಯದ ಉದ್ದಗಲಕ್ಕೂ ಎಕ್ಸೆಲ್ ನ ಕಂಪು ಪಸರಿಸಿದೆ ಎಂದರು. ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ,ಎಕ್ಸೆಲ್ ಟೆಕ್ನೋ ಶಾಲೆಯ ಮುಖ್ಯ ಶಿಕ್ಷಕಿ ಸಹನಾ ಜೈನ್ ಬಿ,ವೇಣೂರು ಎಕ್ಸೆಲ್ ಹೈಸ್ಕೂಲ್ ಶಾಲೆಯ ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ಉಪಸ್ಥಿತರಿದ್ದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಸುಕೇಶ್ ಕುಮಾರ್ ಜೈನ್ ಕಡಂಬು ಮತ್ತು ನಾಮ್ ದೇವ್ ರಾವ್ ಮುಂಡಾಜೆ ಅವರನ್ನು ಸನ್ಮಾನಿಸಲಾಯಿತು. ಎಕ್ಸೆಲ್ ಟೆಕ್ನೋ ಶಾಲೆಯ ಸಂಯೋಜಕಿ ಲೀನಾ ಪ್ಲೋರಿನ್ ಪಿಂಟೋ ಸ್ವಾಗತಿಸಿ,ಶಿಕ್ಷಕಿ ಸ್ವಾತಿ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು.ಗೀತಾ ಕಾರ್ಯಕ್ರಮ ನಿರೂಪಿಸಿದರು. ಚೇತನಾ ವಂದಿಸಿದರು. ಪವಿತ್ರಾ ಕೋಟ್ಯಾನ್ ಹಾಗೂ ಇತರರು ಸಹಕರಿಸಿದರುಬಳಿಕ ವಿದ್ಯಾರ್ಥಿಗಳ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

Related posts

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ಗಾಲಿಕುರ್ಚಿ ಜಾಥಾ

Suddi Udaya

ಬೆಳ್ತಂಗಡಿ: ಯೋಜನೆಯ ಕಚೇರಿ ಸಹಾಯಕರ ಮೂರು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯ ಬಿತ್ತಿ ಪತ್ರ ಅನಾವರಣ

Suddi Udaya

5ನೇ ಕರ್ನಾಟಕ ರಾಜ್ಯ ಹಣಕಾಸು ಆಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದ ಸಭೆ

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ
ಎಕ್ಸ್‌ಪೀರಿಯ-2ಕೆ22 ರಾಜ್ಯ ಮಟ್ಟದ ವಿಜ್ಞಾನ ಮೇಳ ಉದ್ಘಾಟನೆ

Suddi Udaya

ನಾಲ್ಕೂರು: ಕೃಷ್ಣಪ್ಪ ಪೂಜಾರಿ ನಿಧನ

Suddi Udaya
error: Content is protected !!