September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬುರುಡೆ ಪ್ರಕರಣ: ನಾಲ್ಕು ಮಂದಿ ಎಸ್.ಐ.ಟಿ ವಿಚಾರಣೆಗೆ ಹಾಜರಾಗದ ಕಾರಣ ವಿನಾಯಿತಿ ಕೇಳಿದ ವಕೀಲರು

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆಗೆ ಇನ್ನೂ ಹಾಜರಾಗದ ಕಾರಣ ನಾಲ್ಕು ಮಂದಿ ಪರ ವಕೀಲರು ಒಂದು ವಾರ ವಿನಾಯಿತಿ ಕೇಳಿದ್ದಾರೆ.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಅ.27 ರಂದು ಮಹೇಶ್ ಶೆಟ್ಟಿ ತಿಮರೋಡಿ , ಗಿರೀಶ್ ಮಟ್ಟಣ್ಣವರ್, ಜಯಂತ್. ಟಿ, ವಿಠಲ್ ಗೌಡ ವಿಚಾರಣೆಗೆ ಈವರೆಗೂ ಹಾಜರಾಗಿಲ್ಲ. ಈ ನಾಲ್ಕು ಮಂದಿ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ‌. ಸುಜಾತ ಭಟ್ ಮಾತ್ರ ಎಸ್.ಐ.ಟಿ ಸೂಚನೆಯಂತೆ ವಿಚಾರಣೆಗೆ ಹಾಜರಾಗಿದ್ದಾರೆ.

ತಿಮರೋಡಿ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣವರ್, ಜಯಂತ್. ಟಿ, ಸೌಜನ್ಯ ಮಾವ ವಿಠಲ್ ಗೌಡ ನಾಲ್ಕು ಮಂದಿ ಈವರೆಗೂ ಎಸ್.ಐ.ಟಿ ಕಚೇರಿಗೆ ಹಾಜರಾಗಿಲ್ಲ. ಈ ನಡುವೆ ಉಡುಪಿಯಿಂದ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದ ವಕೀಲೇ ಅಂಬಿಕಾ ಪ್ರಭು ಅ.27 ರಂದು ಬಂದು ನಾಲ್ಕು ಮಂದಿಗೆ 7 ದಿನಗಳ ಕಾಲ ವಿಚಾರಣೆಗೆ ವಿನಾಯಿತಿ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

ಇನ್ನೂ ನಾಲ್ಕು ಮಂದಿಗೆ ಎಸ್.ಐ.ಟಿ ಅಧಿಕಾರಿಗಳು 7 ದಿನಗಳ ಕಾಲ ವಿನಾಯಿತಿ ನೀಡುತ್ತಾ ಎಂದು ಕಾದು ನೋಡಬೇಕಾಗಿದೆ.

Related posts

ಡಿ.13: ಕಕ್ಕಿಂಜೆಯಲ್ಲಿ ಮರ್ಹೂಂ ಅಝ್ಲೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya

ಶಿಬಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಬೆಳ್ತಂಗಡಿಗೆ ಆಗಮಿಸಿದ ಎಸ್.ಐ.ಟಿ ಒಂದು ತಂಡ :ಬೆಳ್ತಂಗಡಿಯ ಎಸ್.ಐ.ಟಿ ಕಚೇರಿ ಪರಿಶೀಲನೆ

Suddi Udaya

ಫೆ.8: ಅಗ್ರಿಲೀಫ್ 2.0 – ‘ರೈತರ ಜೊತೆ ವಿಶ್ವದ ಕಡೆ’ ವಿಸ್ತೃತ ಘಟಕದ ಉದ್ಘಾಟನೆ

Suddi Udaya

ಶ್ರೀ.ಧ.ಮಂ.ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪೂರೈಸಿದ 114 ಮಂದಿಗೆ ಪದವಿ ಪ್ರದಾನ:

Suddi Udaya
error: Content is protected !!