ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಸಂಭ್ರಮ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ದೀಪಾವಳಿ ಆಚರಣೆಯನ್ನು ಸಂಭ್ರಮಿಸಲಾಯಿತು. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಮಗು ಹಾಗೂ ತಂದೆಯೊಂದಿಗೆ ಗ್ರೀಟಿಂಗ್ ಕಾರ್ಡ್ ತಯಾರಿಯ ಸ್ಪರ್ಧೆಯನ್ನು ನೆರವೇರಿಸಲಾಯಿತು.

ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯ ಶೃಂಗಾರ ಸ್ಪರ್ಧೆಯನ್ನು ಆಯೋಜಿಸಲಾಯಿತು. 9ನೇ ಎ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ 9ನೇ ಬಿ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಪ್ರಕಾಶ್ ಕಾಮತ್ ಪ್ರಾಂಶುಪಾಲರು ಎಸ್ ಡಿ ಎಂ ಮಹಿಳಾ ಪೊಲಿಟೆಕ್ನಿಕ್ ಕಾಲೇಜ್ ಉಜಿರೆ, ಇವರು ಭಾಗವಹಿಸಿ ಶುಭಾಶಯಗಳು ವ್ಯಕ್ತಪಡಿಸಿದರು. ಅಲ್ಲದೆ ದೀಪಾವಳಿಯ ಆಚರಣೆಯಲ್ಲಿ ನಮ್ಮ ಸಂಸ್ಥೆಗಳು ಮಕ್ಕಳಿಗೆ ಹೊಸ ಮೆರಗನ್ನು ನೀಡುತ್ತಿದೆ ಎಂಬುದರೊಂದಿಗೆ, ದೀಪ, ಹಣತೆ ಬೆಳಗಿಸಿ, ಲಕ್ಷ್ಮಿ ಪೂಜೆಯೊಂದಿಗೆ, ದೀಪಾವಳಿಗೆ ನೀರು ತುಂಬಿಸುವ ವಿಶೇಷತೆಯೊಂದಿಗೆ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ ಶಿಕ್ಷಕರುಗಳಾದ ಮೇನಿತಾ ಶೆಟ್ಟಿ, ಚೇತನ, ಕಾರೂಣ್ಯ, ಮುರಳಿ, ಪ್ರಮೀಳಾ ರವರ ಸಂಘಟನೆಯೊಂದಿಗೆ ಅಧ್ಯಾಪಕ ವೃಂದ ದವರ ಸಹಕಾರದೊಂದಿಗೆ, ಕುಮಾರಿ ನಿಧಿಶಾ ನಿರೂಪಿಸಿ, ಕುಮಾರಿ ದಿಶಾ ಡಿಎ ಸ್ವಾಗತಿಸಿ, ಆಧ್ಯಾ ಜೈನ್ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಕಬ್- ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್- ಗೈಡ್ಸ್ ಮೇಳ, ರೋವರ್ಸ್‌ – ರೇಂಜರ್ಸ್‌ ಸಮಾಗಮ

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ಸ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ದೀಪಾವಳಿ ಸ್ಪೆಷಲ್ ಆಫರ್

Suddi Udaya

ಕಾಜೂರು: ಬೈಕ್ ಗೆ ಸ್ಕೂಟರ್ ಡಿಕ್ಕಿ: ಸವಾರನಿಗೆ ಗಾಯ

Suddi Udaya

ಲಾಯಿಲ ಪ್ರಸನ್ನ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ: ಎಸ್ಡಿಪಿಐ ಮುಖಂಡರಿಂದ ಸಮಸ್ಯೆ ಬಗೆಹರಿಸಲು ಮನವಿ

Suddi Udaya

ಸ್ಟಾರ್ ಲೈನ್ ಶಾಲೆ ಮಂಜೊಟ್ಟಿ : ಶಾಲೆಯ ಸಲಹಾ ಸಮಿತಿ ಪ್ರಧಾನ ಸಲಹೆಗಾರರಾಗಿ ಡಾ. ಸಯ್ಯದ್ ಅಮೀನ್ ಅಹಮದ್ ಅಧಿಕಾರ ಸ್ವೀಕಾರ

Suddi Udaya
error: Content is protected !!