31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಬ್ಯಾಂಕ್ ಆಫ್ ಬರೋಡದಿಂದ ಇಂಡಿಯಾ ಫಸ್ಟ್ ಲೈಫ್ ಕಛೇರಿ ಉದ್ಘಾಟನೆ

ಬೆಳ್ತಂಗಡಿ: ಬ್ಯಾಂಕ್ ಆಫ್ ಬರೋಡದಿಂದ ಇಂಡಿಯಾ ಫಸ್ಟ್ ಲೈಫ್ ಕಛೇರಿ ಉದ್ಘಾಟನೆಯು ಜೂ.30 ರಂದು ಬೆಳ್ತಂಗಡಿ ಚರ್ಚ್ ರೋಡ್ ವೈಭವ್ ಆರ್ಕೇಡ್‌ನಲ್ಲಿ ನಡೆಯಿತು.

ಕಚೇರಿ ಉದ್ಘಾಟನೆಯನ್ನು ಹೆಚ್‌ಒಎ ಜೈಕುಮಾರ್ ಕೆ.ಪಿ. ಉದ್ಘಾಟಿಸಿದರು. ಕಾರ್ಯಕ್ರಮವನ್ನು ಸಿಡಿಒ ಸುಮೀತ್ ಸಾಹ್ನಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಮುಖ್ಯಸ್ಥ ನಾಣಯ್ಯ ಕೆ.ಎಸ್., ಎಬಿಹೆಚ್ ಆಂಜನೇಯ ಆರ್.ಎನ್., ಮಂಗಳೂರು ಬ್ಯುಸಿನೆಸ್ ಅಸೋಸಿಯೇಟ್ ಮೈಕಲ್ ಡಿ ‘ಸೋಜಾ, ಟ್ರೈನರ್ ಸ್ಮಿತಾ ಶೆಟ್ಟಿ, ಮಂಗಳೂರು ಕಚೇರಿ ಮೆನೇಜರ್ ಗಳಾದ ಹರೀಶ್, ವಿಶ್ವಾಸ್, ಎಂಸಿಸಿ ಬ್ಯಾಂಕ್ ಮೆನೇಜರ್ ಜೋಯಿಟಾ, ಎಸ್ ಬಿ ಐ ಲೈಫ್ ಕಚೇರಿ ಮೆನೇಜರ್ ಜೋಯಲ್, ಬೆಳ್ತಂಗಡಿ ಚೀಫ್ ಬ್ಯುಸಿನೆಸ್ ಅಸೋಸಿಯೇಟ್ ದಿನಕರ್ ಕೆ., ಸೀನಿಯರ್ ಬ್ಯುಸಿನೆಸ್ ಅಸೋಸಿಯೇಟ್ ಯೋಗೀಶ್ ಆಲಂಬಿಲ, ಬ್ಯುಸಿನೆಸ್ ಅಸೋಸಿಯೇಟ್ ಗಳಾದ ಪ್ರದೀಪ್ ಕುಮಾರ್ ಶೆಟ್ಟಿ, ಉದಯ ಕುಮಾರ್, ಪ್ರವೀಣ್ ಕೊಯಿಲ, ಫ್ರಾನ್ಸಿಸ್ ವಿ. ವಿ., ವಿನಯ ಕೆ., ಸುನಿತ್ ಎ., ಶಾಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಬಹುಮಾನ ನೀಡಲಾಯಿತು. ಶಾಲಿನಿಯವರು ತನ್ನ ಅನುಭವಗಳನ್ನು ಹಂಚಿಕೊಂಡರು. ಬೆಳ್ತಂಗಡಿ ಕಚೇರಿ ಮೆನೇಜರ್ ಪ್ರಜ್ವಲ್ ಟಿ. ಕೆ ಸಾಧಕರ ಪಟ್ಟಿ ವಾಚಿಸಿದರು. ಸುಮಿತ್ ಸಾಹ್ನಿ, ಜೈಕುಮಾರ್, ನಾಣಯ್ಯ, ಆಂಜನೇಯರವರನ್ನು ಗೌರವಿಸಲಾಯಿತು. ಮೈಕಲ್ ಡಿ ‘ಸೋಜಾ ಪ್ರಾಸ್ತವಿಕವಾಗಿ ಮಾತನಾಡಿದರು.


ಗೀತಾ ಕಡಬ ಪ್ರಾರ್ಥಿಸಿದರು. ದಿನಕರ್ ಕೆ. ಸ್ವಾಗತಿಸಿದರು. ಬ್ಯುಸಿನೆಸ್ ಅಸೋಸಿಯೇಟ್ ನಾಗರಾಜ್ ಎನ್. ಕೆ.ಕಡಬ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ವಿಗೆ ಪಾರ್ಟ್ನರ್ಸ್, ಅಡ್ವೈಸರ್ಸ್, ಸಿಬ್ಬಂದಿ ವರ್ಗದವರು ಸಹಕರಿಸಿದರು.

Related posts

ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ರಾಜ ಕೇಸರಿ ಸಂಘಟನೆಯಿಂದ ಸ್ವಚ್ಛತಾ ಕಾರ್ಯ

Suddi Udaya

ಟೀಮ್ ದೇವರಗುಡ್ಡೆ ವತಿಯಿಂದ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕೈತೋಟ ರಚನೆ

Suddi Udaya

ಜ.26: ಉಜಿರೆಯಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ: ಪಿ. ಎಂ. ಶ್ರೀ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಪಕ್ವಾಡದ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಾಗಾರ

Suddi Udaya

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನ ಸಭೆ

Suddi Udaya

ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!