23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್

ಎಸ್.ಐ.ಟಿ ಯ ಮಂಜುನಾಥ್ ಗೌಡ ಲೋಕಾಯುಕ್ತ ಡಿವೈಎಸ್ಪಿಯಾಗಿ ನೇಮಕ

ಬೆಳ್ತಂಗಡಿ : ಎಸ್.ಐ.ಟಿ ತಂಡದಲ್ಲಿ ಸೂಪರ್ ಕಾಪ್ ಎಂದು ಹೆಸರು ಪಡೆದು ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನಿಂದ ಸತ್ಯ ಕಕ್ಕಿಸಿ ಜೈಲಿಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಇವರಿಗೆ ಸರಕಾರ ಡಿವೈಎಸ್ಪಿ ಆಗಿ ಪದೋನ್ನತಿ ನೀಡಿತ್ತು ಇದೀಗ ಲೋಕಾಯುಕ್ತ ಇಲಾಖೆಗೆ ಡಿವೈಎಸ್ಪಿಯಾಗಿ ನೇಮಕ ಮಾಡಿದೆ. ಆದ್ರೆ ಧರ್ಮಸ್ಥಳ ಪ್ರಕರಣ ಮುಗಿಯುವವರೆಗೆ ಎಸ್.ಐ.ಟಿ ಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಮೂಲತಃ ಮಂಡ್ಯ ಜಿಲ್ಲೆಯ ನಿವಾಸಿ ಮಂಜುನಾಥ್ ಗೌಡ ಇವರನ್ನು ಸರಕಾರ ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ ಗೆ ನೇಮಕ ಮಾಡಿದ್ದರು. ಅ.13 ರಂದು ಸರಕಾರ ಡಿವೈಎಸ್ಪಿ ಹುದ್ದೆಗೆ ಪದೋನ್ನತಿ ನೀಡಿತ್ತು.‌ಎಸ್.ಐ.ಟಿ ಪ್ರಕರಣ ಮುಕ್ತಾಯವಾದ ಬಳಿಕ ಲೋಕಾಯುಕ್ತ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಚಿನ್ನಯ್ಯನ ಬೆಂಬಲಿಗರು ಸುಳ್ಳು ಆರೋಪಗಳನ್ನು ಎದುರು ಹಾಕಿಕೊಂಡರೂ ಕೂಡ ಕ್ಯಾರೆ ಮಾಡದೆ ಚಿನ್ನಯ್ಯನಿಂದ ಸತ್ಯ ಹೊರಗಡೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Related posts

ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಗೌರವಾರ್ಪಣೆ

Suddi Udaya

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

Suddi Udaya

ಇಂದಬೆಟ್ಟು-ನಾವೂರು ವಿಶ್ವ ಹಿಂದೂ ಪರಿಷತ್ ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

Suddi Udaya

ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ವಿ.ಹಿಂ.ಪ. ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ “ಮುಸ್ಕಾನ್ ಕೌಸರ್” ರಿಗೆ ಬ್ಯಾರೀಸ್‌ ವೆಲ್‌ಫೇ‌ರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

Suddi Udaya
error: Content is protected !!