ಬಾರ್ಯ: ಇಲ್ಲಿಯ ಬನ್ನೆoಗಳ ಸೇತುವೆ ಮೇಲೆ ಯಾರೋ ಕಿಡಿಗೇಡಿಗಳು ಯಾವುದೋ ಪ್ರಾಣಿಯ ತ್ಯಾಜ್ಯವನ್ನು ಎಸೆದು ಹಾಕಿ ವಿಕೃತಿ ಮೆರೆದ ಘಟನೆ ನಿನ್ನೆ (ಅ.29)ಮಧ್ಯರಾತ್ರಿ ನಡೆದಿದೆ.

ಈ ಪರಿಸರದಲ್ಲಿ ತ್ಯಾಜ್ಯವನ್ನು ಸುರಿಯುವ ಘಟನೆಗಳು ಹೆಚ್ಚುತ್ತಿದ್ದು. ಸಂಬಂಧಪಟ್ಟ ಇಲಾಖೆ ಅಥವಾ ಸ್ಥಳೀಯ ಆಡಳಿತ ಮಂಡಳಿಗಳು ಇದರ ಬಗ್ಗೆ ಗಮನ ಹರಿಸದೆ ಇರುವುದರಿಂದ ಈ ತರದ ದುರ್ಘಟನೆಗಳು ಹೆಚ್ಚೆಚ್ಚು ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹಾಗೂ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸದೆ ಇಲ್ಲದಿದ್ದರೆ ಇದರ ಬಗ್ಗೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.











